ಅಂತರಾಷ್ಟ್ರೀಯ ಮಟ್ಟದಲ್ಲಿ ‘ವಿಷ ಪ್ರಸಾದ’ ಪ್ರಕರಣ ಪ್ರಕಟ : 4 ವಿಷ ಸರ್ಪಗಳಿಗೆ ಯಾವ ಶಿಕ್ಷೆ..?

ಚಾಮರಾಜನಗರದ ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನದ ಪ್ರಸಾದಲ್ಲಿ ವಿಷ ಬೆರೆಸಿರುವ ಘಟನೆ ಕರ್ನಾಟಕ, ದೇಶ ಮಾತ್ರವಲ್ಲ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.  ಭಕ್ತಿಯ ಹೆಸರಲ್ಲಿ ವಿಷ ಹಾಕಿರುವ ದುರಂತ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. 10ಕ್ಕೂ ಹೆಚ್ಚು ವಿದೇಶ ಪತ್ರಿಕೆಗಳಲ್ಲಿ ಪಾಯ್ಸಿನ್ ಪ್ರಸಾದ ಪ್ರಕರಣ ಪ್ರಕಟಗೊಂಡಿರುವುದಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇಷ್ಟೊಂದು ಸುದ್ದಿ ಮಾಡಿದ ವಿಷದ ಪ್ರಸಾದದ ಸಿಸಿಟಿವಿಯಲ್ಲೂ ಸಿಗದ ರೋಚಕ ಸತ್ಯಗಳು ಬಯಲಾಗಿದ್ದು ಹೇಗೆ ಗೊತ್ತಾ..? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಅಂದು ಡಿಸೆಂಬರ್ 14 ಶುಕ್ರವಾರ. ಚಾಮರಾಜನಗರದ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನಕ್ಕೆ ಗೋಪುರ ಕಟ್ಟುವ ಪೂಜೆಗೆ ಒಳ್ಳೆಯ ದಿನ.  ಗ್ರಾಮಸ್ಥರಿಗೆಲ್ಲಾ ಪ್ರಸಾದದ ವ್ಯವಸ್ಥೆ ಮಾಡಬೇಕು ಎಂದು ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ನಿರ್ಧಾರ ಮಾಡಿದ್ದರು. ದೇವಸ್ಥಾನಕ್ಕೆ ಬಂದ ಆದಾಯದಿಂದ ಗೋಪುರ ಕಟ್ಟಲು ನಿರ್ಧಾರ ಮಾಡಿದ್ದ ಟ್ರಿಸ್ಟಿ ಚಿನ್ನಪ್ಪಿ ಅವರಿಗೆ ಸಾಲೂರು ಮಠದ ಮಹದೇವಸ್ವಾಮಿಗಳು ಗೋಪುರ ನಿರ್ಮಾಣ ಬೇಡ ಎಂದಿದ್ದರು.  ಸಾಲೂರು ಸ್ವವಾಮಿಗಳ ಮಾತು ಮೀರಿ ಅಂದು ಪೂಜೆ ಮಾಡಿಸೇ ಬಿಟ್ಟರು ಚಿನ್ನಪ್ಪಿ. ಇದೇ ಆಗಿದ್ದು ಅನಾಹುತ. ದೇವಸ್ಥಾನವನ್ನು ತನ್ನ ವಶಕ್ಕೆ ಪಡೆಯಬೇಕು ಮತ್ತದರ ಆದಾಯದ ಮೇಲೆ ಕಣ್ಣು ಹಾಕಿದ್ದ ಸಾಲೂರು ಮಹದೇವ ಸ್ವಾಮಿ ಗೋಪುರ ಪೂಜೆಯಲ್ಲೇ ಚಿನ್ನಪ್ಪಿಯ ಮೇಲೆ ಜನರ ಅಪನಂಬಿಕೆ ಸೃಷ್ಟಿ ಮಾಡಲು ಹೊಂಚು ಹಾಕಿದ್ದ. ಆ ಪ್ರಕಾರ ನಡಿಯಿತು ನೋಡಿ ಪ್ಲಾನ್.

ಮೊದಲಿಗೆ ಈ ವಿಷ ಹಾಕಿದ ವಿಷ ಸರ್ಪಗಳು ಪೊಲೀಸರಿಗೆ ಸಿಕ್ಕಬಿದ್ದ ಸಂದರ್ಭಗಳನ್ನ ನೋಡ್ತಾ ಹೋಗೋಣ. ಪೊಲೀಸರ ತನಿಖೆಯಲ್ಲಿ ಸಾಕಷ್ಟು ಬೆಚ್ಚಿ ಬೀಳಿಸುವ ಸತ್ಯಗಳು ತಿಳಿದು ಬಂದಿವೆ.

ವಿಷ ಹಾಕಿದ ನಾಲ್ಕು ಜನ ಮಾಡಿದ ಕೃತ್ಯಗಳು ಒಂದಲ್ಲಾ ಎರಡಲ್ಲ. ಮೊದಲಿಗೆ ತನಿಖೆಗೆ ಸುಳಿವು ಸಿಕ್ಕಿದ್ದು ಕೃಷಿ ಅಧಿಕಾರಿಯಿಂದ. ಹೌದು.. ದೇವಸ್ಥಾನದ ಪ್ರಸಾದದಲ್ಲಿ ಇದ್ದ ಕೀಟನಾಶಕವನ್ನು ಗ್ರಾಮಸ್ಥರಿಗೆ ನೀಡಿದ ಕೃಷಿ ಅಧಿಕಾರಿ ಕೊಟ್ಟ ಮಾಹಿತಿಯಲ್ಲಿ ಮೊದಲು ಸಿಕ್ಕಿಬಿದ್ದವನೇ ಮಾದೇಶ್. ಈತನೂ ಕೂಡ ದೇವಸ್ಥಾನದ ಟ್ರಸ್ಟಿಯಾಗಿದ್ದ. ಮೊದಲಿಗೆ ನಾನು ಯಾವ ಕೀಟ ನಾಶಕ ಪಡೆದಿಲ್ಲ ಎಂದ ಮಾದೇಶ್ ನಂತರ ದೊಡ್ಡಯ್ಯ ಎನ್ನುವ ವ್ಯಕ್ತಿಗೆ ಕೀಟನಾಶಕ ಕೊಟ್ಟಿರುವುದಾಗಿ ಬಾಯಿಬಿಟ್ಟಿದ್ದಾನೆ.

ತಕ್ಷಣ ಪೊಲೀಸರು ದೊಡ್ಡಯ್ಯನನ್ನು ಹುಡುಕಲು ಪ್ರಾರಂಭಿಸಿದಾಗ ಮತ್ತೊಂದು ಇಂಟ್ರಸ್ಟಿಂಗ್ ಸ್ಟೋರಿ ಕ್ರಿಯೇಟ್ ಆಗಿತ್ತು. ದೊಡ್ಡಯ್ಯ ತಾನೂ ವಿಷದ ಪ್ರಸಾದ ಸೇವಿಸಿರುವುದಾಗಿ ಹೇಳಿ ಡ್ರಾಮ ಮಾಡಿಕೊಂಡು ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದ. ವೈದ್ಯರ ಮುಂದೆ ಹೈಡ್ರಾಮಾ ಆಡುತ್ತಿದ್ದ ದೊಡ್ಡಯ್ಯ ನ ನಾಟಕ ತಿಳಿದು ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಕೂಡಲೇ ದೊಡ್ಡಯ್ಯನನ್ನು ಪತ್ತೆ ಹಚ್ಚಿದ ಪೊಲೀಸರು ತನಿಖೆ ಶುರು ಮಾಡಿದ್ದರು.

ಆಗ ದೊಡ್ಡಯ್ಯ ಹೇಳಿದ್ದ ಸ್ಟೋರಿ ಮತ್ತಷ್ಟು ಟ್ವಿಸ್ಟ್ ಪಡೆದುಕೊಳ್ಳುತ್ತೆ. ಯಾಕಂದ್ರೆ ಈತ ವಿಷ ಹಾಕಿದವರ ಪೈಕಿ ನಾಲ್ಕನೇ ಆರೋಪಿಯಾಗಿರುತ್ತಾನೆ. ವಿಷ ಹಾಕಿದ್ದು ನಾನೇ ಎಂದು ಒಪ್ಪಿಕೊಂಡ ದೊಡ್ಡಯ್ಯ ಸಾಕಷ್ಟು ತನಿಖೆಗೆ ಎಡೆ ಮಾಡಿಕೊಟ್ಟವು. ಹೀಗಾಗಿ ಪೊಲೀಸರಿಗೆ ಇನ್ನುಳಿದ ಮೂರು ಜನ ಆರೋಪಿಗಳನ್ನು ಪತ್ತೆ ಹಚ್ಚೋದು ಕಷ್ಟವೇನು ಆಗಲಿಲ್ಲ.

ಅಷ್ಟಕ್ಕೂ ದೊಡ್ಡಯ್ಯ ವಿಷ ಬೆರಸಿಲಿಕ್ಕೆ ಕಾರಣ ಏನು ಗೊತ್ತಾ..? ಕಾರಣ ಕೇಳಿಬಿಟ್ಟರೆ ನಿಮಗದೇನು ಮಾಡುವಷ್ಟು ಕೋಪ ಬರುತ್ತೋ ಗೊತ್ತಿಲ್ಲ. ದೇವಸ್ಥಾನದಿಂದ ದೊಡ್ಡಯ್ಯನನ್ನು ಹೊರಹಾಕಲಾದ ಕ್ಷುಲಕ ಕಾರಣಕ್ಕೆ 16 ಜನರನ್ನ ಬಲಿ ಪಡೆದಿದ್ದ ಪಾಪಿ ದೊಡ್ಡಯ್ಯ. ದೇವಸ್ಥಾನದಿಂದ ದೂರ ಉಳಿದ ದೊಡ್ಡಯ್ಯ ಗೋಪುರದ ಪೂಜೆ ವೇಳೆ ಅಡುಗೆ ಮನೆಗೆ ಮಾದೇಶನೊಂದಿಗೆ ಬಂದಿದ್ದ. ಈ ಹಿಂದೆ ಯಾವತ್ತೂ ಆತ ದೇವಸ್ಥಾನದ ಬಳಿ ಕಾಣಿಸಿಕೊಂಡಿರಲಿಲ್ಲ. ಅಡುಗೆ ಕೋಣೆಯಲ್ಲಿದ್ದ ಪುಟ್ಟಸ್ವಾಮಿಯನ್ನ ಯಾವುದೋ ನೆಪವೊಡ್ಡಿ ಹೊರಗೆ ಕಳುಹಿಸಿದ ದೊಡ್ಡಯ್ಯ ಎನ್ನುವ ಈ ವಿಷಜಂತು ವಿಷವನ್ನು ಹಾಕೇ ಬಿಡ್ತು.

ಮಾದೇಶ್ ಹಾಗೂ ದೊಡ್ಡಯ್ಯನನ್ನು ಬಾಯಿ ಬಿಡಿಸಿದಾಗಲೇ ಅಂಬಿಕಾ ಅನ್ನೋ ಡವ್ ರಾಣಿ ಸಿಕ್ಕಿದ್ದು. ಈ ಡವ್ ರಾಣಿ ಟ್ರಸ್ಟಿ ಮಾದೇಶನ ಹೆಂಡತಿ. ಪ್ರಾರಂಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವಾಗ ವಿಷ ಹಾಕಿದವರನ್ನ ಕೊಂದು ಬಿಡಬೇಕು ಎಂದಿದ್ದಳು ಈ ಸಚ್ಚಾರಿತ್ರ್ಯವಂತೆ. ಆಕೆಯ ಮಾತು ಯಾರು ಕೇಳಿದರೂ ಹೌದೌದ್ ಎನ್ನುಂವತೆ ವರ್ತಿಸಿದ್ದಳು. ಆದರೆ ಆಕೆ ಮಾಡಿದ್ದ ಮಸಲತ್ತು ಎಂಥದ್ದು ಅಂತ ಗೊತ್ತಾದರೆ ಕ್ರೂರಿಗಳು ಕ್ಷಮಿಸೋದಿಲ್ವೆನೋ.

ಅಂಬಿಕಾಳನ್ನ ಬಾಯಿಬಿಡಿಸಿದಾಗ ಸಿಕ್ಕಿಬಿದ್ದಿದ್ದು ಕಳ್ಳ ಮಹದೇವ ಸ್ವಾಮೀಜಿ. ಸಾಲೂರು ಮಠದ ಕಿರಿಯ ಸ್ವಾಮೀಜಿ ಎಂದು ಕರೆಸಿಕೊಳ್ಳುವ ಕಳ್ಳ ಕಾವಿಧಾರಿ ಮಾಡಿರುವ ಹೀನಾಯ ಕೃತ್ಯಕ್ಕೆ ಕ್ಷಮೆನೇ ಇಲ್ಲ. ಗ್ರಾಮದಲ್ಲಿ ಈತ ಮೆರೆದಿದ್ದು ಅಷ್ಟಿಷ್ಟಲ್ಲ. ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ಮೇಲೆ ಅಪನಂಬಿಕೆ ಉಂಟಾಗಿ ದೇವಸ್ಥಾನದ ಆದಾಯ ಪಡೆಯಲು ಹೊಂಚು ಹಾಕಿದ್ದ ಈ ಪಾಪಿ ಹುಡುಕಿದ ಉಪಾಯ ಕೇಳಿದ್ರೆ ರೋಷ ಉಕ್ಕಿ ಬರುತ್ತೆ.

ಮಹದೇವ ಸ್ವಮೀಜಿ ತನ್ನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಟ್ರಸ್ಟಿ ಮಾದೇಶನ ಹೆಂಡತಿ ಅಂಬಿಕಾಳನ್ನ ಪ್ರಸಾದದಲ್ಲಿ ವಿಷ ಹಾಕಲು ಬಳಸಿಕೊಂಡಿದ್ದ. 10 ದಿನಗಳ ಹಿಂದೆ ಮಠಕ್ಕೆ ಕರೆಸಿ ಹೊಂಚು ಹಾಕಿದ್ದರು ಈ ಪಾಪಿಗಳು. ಪ್ರಸಾದದಲ್ಲಿ ವಿಷ ಹಾಕಿದರೆ ನಿನಗೂ ನಿನ್ನ ಗಂಡ ಮಾದೇಶನಿಗೂ ಮತ್ತು ನನಗೂ ಒಳ್ಳೆದಾಗುತ್ತದೆ ಎಂದು ಹೇಳಿದ್ದ ಕಳ್ಳ ಸ್ವಾಮಿ. ಈ ಸ್ವಾಮಿಯ ಮಾತು ಕೇಳಿದ ಅಂಬಿಕಾ ಕೃಷಿ ಅಧಿಕಾರಿಗಳು ಕೊಟ್ಟಿದ್ದ ಕೀಟನಾಶಕವನ್ನು  ಗಂಡ ಮಾದೇಶನಿಗೆ ಬೆರೆಸಲು ಹೇಳಿದ್ದಳು. ಮಾದೇಶ ಮತ್ತು ದೊಡ್ಡಯ್ಯ ಇಬ್ಬರೂ ದೇವಸ್ಥಾನಕ್ಕೆ ತೆರಳಿ ಹಿಂದೂ ಮುಂದು ಯೋಚನೆ ಮಾಡದೇ ಹಾಕೇ ಬಿಟ್ರು ವಿಷವನ್ನ. ಈ ಪ್ರಸಾದವನ್ನು ತಿಂದ 90ಕ್ಕೂ ಹೆಚ್ಚು ಜನರಲ್ಲಿ 16 ಜನ ಪ್ರಾಣ ಕಳೆದುಕೊಂಡರೆ,ಕೆಲವರು ಇನ್ನೂ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ. ತಂದೆ- ತಾಯಿಯನ್ನ ಕಳೆದುಕೊಂಡ ಮಕ್ಕಳು, ಮಕ್ಕಳನ್ನು ಕಳೆದುಕೊಂಡ ಪಾಲಕರು, ಕುಟುಂಸ್ಥರನ್ನು ಕಳೆದುಕೊಂಡ ಅದೆಷ್ಟೋ ಜನರ ರೋದನೆ ಕಲ್ಲೂ ಹೃದಯದವರನ್ನೂ ಕರೆಗಿಸಿ ಬಿಡ್ತು.

ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಪಟ್ಟು ಹಿಡಿದ ಜನ ಮಾಡಿದ ಪಾರ್ಥನೆ, ಹೊತ್ತುಕೊಂಡ ಹರಕೆ ಅಪಾರ. ಕಳ್ಳ ಮಹದೇವ ಸ್ವಾಮೀಜಿ, ಅಂಬಿಕಾ, ಮಾದೇಶ್, ದೊಡ್ಡಯ್ಯ ಎನ್ನು ನಾಲ್ಕು ವಿಷ ಸರ್ಪಗಳು ಸದ್ಯ ಪೊಲೀಸ್ ವಶದಲ್ಲಿವೆ. ಹೀಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಮಾಡಿದ ವಿಷದ ನಾಲ್ಕು ಸರ್ಪಗಳಿಗೆ ಆದ್ಯಾವ ಶಿಕ್ಷೆ ಸಿಗುತ್ತೆ ಅಂತ ಇಡೀ ಜಗತ್ತೇ ಕಾದು ಕುಳಿತಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com