ಪ್ರೀತಿಸುವ ನಾಟಕವಾಡಿ ಅತ್ಯಾಚಾರದ ಆಪಾದನೆ : ನೊಂದ ಸಿವಿಲ್ ಪೇದೆ ಆತ್ಮಹತ್ಯೆಗೆ ಶರಣು…

ಪ್ರೀತಿ ಮಧುರ ತ್ಯಾಗ ಅಮರ ಅನ್ನೋ ನಂಬಿಕೆ ಇದೆ. ಆದರೆ ಇಲ್ಲೊಂದು ಘಟನೆಯಲ್ಲಿ ಮಧುರವಾಗಿ ಪ್ರೀತಿಸಿ ಮೋಸ ಹೋದ ಪೊಲೀಸ್ ಪೇದೆ ಪ್ರಾಣ ತ್ಯಾಗ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಪ್ರೀತಿ ನಾಟಕವಾಡುತ್ತಿದ್ದ ಯುವತಿ ವಂಚಿಸಿರುವುದಾಗಿ ಪೇದೆ ಆತ್ಮಹತ್ಯ ಮಾಡಿಕೊಂಡಿದ್ದಾನೆ.

ಯುವತಿ ವಂಚಿಸಿದ್ದಾಳೆ ಎಂದು ಆರೋಪಿಸಿ  ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿಯೇ  ಸಿವಿಲ್ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಧಾರವಾಡ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಯಾಗಿದ್ದ ಮನೋಹರ(23) ಆತ್ಮಹತ್ಯೆಗೆ ಶರಣಾದ ಪೇದೆ. ಈತ ಮೂಲತಃ ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಬೋರಗಿ ಗ್ರಾಮದ ನಿವಾಸಿಯಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ಈತ ಡೆತ್ ನೋಟ್ ಬರೆದಿದ್ದು ಸೆಲ್ಫಿ ವಿಡಿಯೋ ಮಾಡಿದ್ದಾನೆ.  ಅದರಲ್ಲಿ ನಾನು ಎರಡು ವರ್ಷದಿಂದ ಪ್ರೀತಿಸಿದ ಯುವತಿ ವಂಚಿಸಿದ್ದಾಳೆ. ನನ್ನ ವಿರುದ್ದ ಅತ್ಯಾಚಾರ ದೂರು ದಾಖಲಿಸಲಾಗಿದೆ. ಪ್ರಿಯತಮೆಯ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ. ಬಳಿಕ ಮರಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com