ಸುವರ್ಣ ಸೌಧ : ‘ಉತ್ತರ ಕರ್ನಾಟಕಕ್ಕೆ ಅನ್ಯಾಯ’ – ಉಚಿತ ರೊಟ್ಟಿ ಹಂಚಿ ವಾಟಳ್ ನಾಗರಾಜ್ ಪ್ರತಿಭಟನೆ

ಪ್ರತೀ ಬಾರಿ ಒಂದಿಲ್ಲೊಂದು ವಿಭಿನ್ನವಾದ ರೀತಿಯಲ್ಲಿ ಪ್ರತಿಭಟನೆ ಮಾಡುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಬೆಳಗಾವಿಯ ಸುವರ್ಣ ಸೌಧದ ಬಳಿಯೂ ಚಳುವಳಿ ಕೈಗೊಂಡಿದ್ದಾರೆ.

ಸುವರ್ಣ ಸೌಧದ ಬಳಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ವಾಟಳ್ ನಾಗರಾಜ್ ರೊಟ್ಟಿ ಚಳುವಳಿ ನಡೆಸಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ವಿಫಲವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸದೇ ಸಂಪೂರ್ಣ ವಿಫಲವಾಗಿದೆ.
ಯಾರು ಪ್ರಾಮಾಣಿಕವಾಗಿ ಮಾತಾಡಿಲ್ಲ. ಬರೀ ಮಾತು ಬರೀ ಸ್ಟಂಟು ಅಷ್ಟೇ ಎಂದು ವಾಟಾಳ್  ಕಿಡಿ ಕಾರಿದ್ದಾರೆ.

ಇನ್ನೂ ಉತ್ತರ ಕರ್ನಾಟಕಕ್ಕೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿಲ್ಲ. ಹೊಸ ವರ್ಷದಿಂದ ಬೀದರ್ ನಿಂದ ಬೆಂಗಳೂರು ವರೆಗೆ ಹೋರಾಟ ನಡೆಸುತ್ತೇನೆ. ಸುವರ್ಣ ಸೌಧದ ಮುಂಭಾಗದಲ್ಲಿ ಪೊಲೀಸರನ್ನ ನೋಡಿದ್ರೆ ಪಾಕಿಸ್ತಾನ ಬಾರ್ಡರ್ ಇದ್ದಂಗೆ ಇದೆ.
ರೊಟ್ಟಿಯನ್ನ ಉಚಿತವಾಗಿ ಹಂಚುವ ಮೂಲಕ ಉತ್ತರ ಕರ್ನಾಟಕ ಅನ್ಯಾಯ ಆಗಿದೆ ಎಂದು ಚಳುವಳಿ. ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾದ ವಾಟಳ್ ರನ್ನ ಪೋಲಿಸರ ವಶಕ್ಕೆ ಪಡೆದರು.

Leave a Reply

Your email address will not be published.