‘ಟೆನ್ನಿಸ್ ಕಲಿಕೆಗಾಗಿ ಹೋಗಬೇಕಿಲ್ಲ ದೂರ – ನಾವೇ ಬಂದಿದ್ದೇವೆ ನಿಮ್ಮ ಸನಿಹ ‘

ಟೆನ್ನಿಸ್ ಗೆ ನಗರದಲ್ಲಿ ಭಾರೀ ಉತ್ತೇಜನ ಕೊಡುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಎಟಿಪಿ ಟೆನ್ನಿಸ್ ತರಬೇತಿ ಮತ್ತು ಕ್ರೀಡಾ ಸಲಹೆಗಾರರು ಸದ್ಯ ಬೆಂಗಳೂರಿನಲ್ಲಿಯೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಇಲ್ಲಿಯವರೆಗೂ ಟೆನ್ನಿಸ್ ಪ್ರಿಯರು ವಿದೇಶದಲ್ಲಿ ಭಾರಿ ಶುಲ್ಕ ತೆತ್ತು ತರಬೇತಿ ಪಡೆಯಬೇಕಿತ್ತು. ಈಗ ಅಂಥಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಟೆನ್ನಿಸ್ ತರಬೇತಿ ನೀಡುವುದಕ್ಕಾಗಿ ಯುನೈಟೆಡ್ ಕಿಂಗ್ ಡಮ್ ನಿಂದ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಟೆನ್ನಿಸ್ ಕೋಚ್ .ಔಬ್ರೇ ಬ್ಯಾರೆಟ್ ಅವರನ್ನ ಗೋಪಾಲನ್ ಸ್ಪೋರ್ಟ್ಸ್ ಟೆನ್ನಿಸ್ ಪ್ರೋಗ್ರಾಮ್ ನಗರಕ್ಕೆ ಆಹ್ವಾನಿಸುತ್ತಿದೆ. ಔಬ್ರೇ ಬ್ಯಾರೆಟ್ ಸಾಕಷ್ಟು ಅನುಭವಿಗಳಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡಲಿದ್ದಾರೆ.


ವಿಶ್ವದ ಐದು ಎಟಿಪಿ ತರಬೇತುದಾರರಲ್ಲಿ ಔಬ್ರೇ ಕೂಡಾ ಒಬ್ಬರು. ಅವರ ಆಟಗಾರರು ಅಗ್ರ 3 ಎಟಿಪಿ ಆಟಗಾರರಾದ ನೋವಾಕ್ ಜೋಕೋವಿಕ್, ರಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ರಿಂದ ತರಬೇತಿ ಪಡೆದಿದ್ದಾರೆ. ಇದರ ಜೊತೆಗೆ ಆ್ಯಂಡಿ ಮತ್ತು ಜಾಮೀ ಮುರ್ರೆ, ಸೆರೆನಾ ಹಾಗೂ ವೀನಸ್ ವಿಲಿಯಮ್ಸ್ ಕೂಡಾ ಸೇರಿಕೊಳ್ಳುತ್ತಾರೆ. ಔಬ್ರೇ ಭಾರತದಲ್ಲೇ ಮೊದಲ ಬಾರಿಗೆ ಕ್ರೀಡಾ ವಿನ್ಯಾಸ ಹಾಗೂ ಗುಣಮಟ್ಟವನ್ನ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ ನಲ್ಲಿ ರೂಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ದೇಶದ ಅಂಗ್ರಪಂಕ್ತಿಯ 10 ಆಟಗಾರರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಪ್ರಗ್ನೇಶ್ ಗುಣೇಶ್ವರನ್ (ಭಾರತದ ನಂ 1) ಕೂಡಾ ಸೇರಿದ್ದು ಮಹತ್ವಾಕಾಂಕ್ಷೆಯ ಯುವ ಆಟಗಾರರನ್ನ ರೂಪಿಸುತ್ತಿದ್ದಾರೆ.
ಔಬ್ರೇ ಅವರ ಮಾರ್ಗದರ್ಶನದಲ್ಲಿ ಗೋಪಾಲನ್ ಸ್ಪೋರ್ಟ್ಸ್ ಟೆನ್ನಿಸ್ ಪ್ರೋಗ್ರಾಮ್ ಬೆಂಗಳೂರಿನ ವಿದ್ಯಾರ್ಥಿಗಳಿಗೆ ಶ್ರೇಷ್ಠ ಮಟ್ಟದ ತರಬೇತಿ ನೀಡಲಿದೆ. ಈ ತರಬೇತಿ ಕಾರ್ಯಕ್ರಮವನ್ನ ಕಿರಿಯ ಟೆನ್ನಿಸ್ ಆಟಗಾರರಿಗೆಂದೇ ರೂಪಿಸಲಾಗಿದ್ದು, ಈ ಮೂಲಕ ಅವರು ಸಾಕಷ್ಟು ನೈಪುಣ್ಯತೆಯನ್ನ ಗಳಿಸಲು ಇದು ಸಹಕಾರಿಯಾಗಲಿದೆ. ತರಬೇತಿ ಕಾರ್ಯಕ್ರಮವು ಕೌಶಲ್ಯ ವೃದ್ಧಿ, ಕ್ರೀಡಾ ಜ್ಞಾನ ಹಾಗೂ ಸವಾಲುಗಳನ್ನ ಎದುರಿಸುವ ಬಗೆಯನ್ನ ಕಲಿಸಿಕೊಡಲಿದೆ. ಹೀಗಾಗಿ ಮಕ್ಕಳು ವರ್ಷದುದ್ದಕ್ಕೂ ವಿವಿಧ ಬಗೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನ ಮತ್ತಷ್ಟು ಸುಧಾರಿಸಿಕೊಳ್ಳಬಹುದಾಗಿದೆ.


ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೋಪಾಲನ್ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲ ಮಧು ನಾರಾಯಣ್, “ಈ ಕಾರ್ಯಕ್ರಮದ ಸಂಪೂರ್ಣ ರೂಪರೇಷೆ ಬಗ್ಗೆ ನಮಗೆ ಸಾಕಷ್ಟು ಅಭಿಮಾನವಿದೆ. ಗುಂಪು ತರಬೇತಿ, ಫಿಟ್ನೆಸ್ ಟ್ರೇನಿಂಗ್ ಮತ್ತು ಮಾನಸಿಕ ಸದೃಢತೆ ಹಾಗೂ ಖಾಸಗಿ ಪಾಠಗಳಿಗಾಗಿ ಆಟಗಾರರೊಂದಿಗೆ ತರಬೇತುದಾರರು ಪ್ರಯಾಣಿಸುವುದು ಸೇರಿದಂತೆ ಪ್ರತಿ ಆಟಗಾರರಿಗೂ ಸಮಗ್ರ ಬೆಳವಣಿಗೆಯ ಕಾರ್ಯಕ್ರಮವನ್ನ ರೂಪಿಸಿದ್ದೇವೆ. ಇದರ ಜೊತೆಗೆ ಈ ಟೆನ್ನಿಸ್ ಕಾರ್ಯಕ್ರಮವನ್ನ ಸರ್ಕಾರಿ ಶಾಲಾ ಮಕ್ಕಳಿಗೂ ತಲುಪಿಸುವ ಉದ್ದೇಶ ಹೊಂದಿದ್ದೇವೆ” ಎಂದು ತಿಳಿಸಿದರು. “ಟೆನ್ನಿಸ್ ಗೆ ನೀವು ಹೊಸಬರಾಗಿದ್ದರೂ ಅಥವಾ ನಿಮ್ಮ ಮಗುವಿನ ಟೆನ್ನಿಸ್ ಕೌಶಲ್ಯವನ್ನ ಮತ್ತಷ್ಟು ಹೆಚ್ಚಿಸುವುದಾಗಿದ್ದರೂ ಸರಿ, ನಿಮ್ಮ ಅಗತ್ಯಕ್ಕೆ ತಕ್ಕಂತೆ ನಾವು ಕಾರ್ಯಕ್ರಮ ರೂಪಿಸಿದ್ದೇವೆ”, ಎಂದು ಗೋಪಾಲನ್ ಫೌಂಡೇಶನ್ನ ಸಿಇಒ ಬ್ರಿಗೇಡಿಯರ್.ಜಗದೀಶ್ ಚಂದ್ರನ್ ಹೇಳಿದರು.
ಔಬ್ರೇ ಬ್ಯಾರೆಟ್ – ನಿರ್ದೇಶಕರು ಹಾಗೂ ಸಂಸ್ಥಾಪಕರು, ವರ್ಲ್ಡ್ ಕ್ಲಾಸ್ ಸ್ಪೋರ್ಟ್ಸ್ ಟ್ರೇನಿಂಗ್ ಲಿ(ಡಬ್ಲ್ಯೂಸಿಎಸ್ ಟಿ), ಅಲ್ಬೇ ಜಾಕೋಬ್ – ನಿರ್ದೇಶಕರು, ಜಾಕೋಬ್ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್, ಮಧು ನಾರಾಯಣ – ಪ್ರಿನ್ಸಿಪಾಲ್ ಗೋಪಾಲನ್ ಇಂಟರ್ ನ್ಯಾಷನಲ್ ಸ್ಕೂಲ್, ಬ್ರಿ.ಜಗದೀಶ್ ಚಂದ್ರನ್ – ಸಿಇಒ,ಗೋಪಾಲನ್ ಫೌಂಡೇಶನ್, ರೇಣುಕಾ – ಕಾರ್ಪೋರೆಟ್ ಕಮ್ಯುನಿಕೇಷನ್ ಮ್ಯಾನೇಜರ್, ಗೋಪಾಲನ್ ಎಂಟರ್ಪ್ರೈಸಸ್ ಇವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com