ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ : ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು..

ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು ಉಂಟಾಗಿದೆ. ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ.

ಅತಿಥೇಯ ಆಸ್ಟ್ರೇಲಿಯಾ ನೀಡಿದ್ದ 287 ರನ್‌ಗಳ ಗುರಿ ಬೆನ್ನತ್ತುವಲ್ಲಿ ಎಡವಿದ ಭಾರತೀಯ ಬ್ಯಾಟ್ಸ್‌ಮನ್‌ಗಳು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 140 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 146 ರನ್‌ಗಳ ಸೋಲನುಭವಿಸಿತು. ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ  ಭಾರತ  ಎರಡನೇ ಪಂದ್ಯದಲ್ಲೂ ಗೆಲ್ಲುವ ಎಲ್ಲಾ ಅವಕಾಶವನ್ನು ಕೈಚಲ್ಲಿತು.

ದ್ವಿತೀಯ ಇನ್ನಿಂಗ್ಸ್‌ನ ಆರಂಭದಲ್ಲೇ ಎಡವಿದ ಭಾರತ ನಾಲ್ಕನೇ ದಿನದಂತ್ಯಕ್ಕೆ 112 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತು.

ತಂಡದ ಪರ ಕಣದಲ್ಲಿದ್ದ ಹನುಮ ವಿಹಾರಿ(28) 5ನೇ ದಿನದಾಟದ  ಆರಂಭದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.

ಇವರ ನಿರ್ಗಮನದ ನಂತರ ರಿಷಭ್ ಪಂತ್(30) ಸೇರಿದಂತೆ  ಯಾವುದೇ ಆಟಗಾರರು ಹೆಚ್ಚು ಹೊತ್ತು ಕಣದಲ್ಲಿ ಉಳಿಯಲಿಲ್ಲ.

ಪರಿಣಾಮ 140 ರನ್‌ಗಳಿಗೆ ಭಾರತ ಸರ್ವಪತನ ಕಂಡಿತು.

ಆಸ್ಟ್ರೇಲಿಯಾ ಪರ ಮಿಚಲ್ ಸ್ಟಾರ್ಕ್ ಹಾಗೂ ನ್ಯಾಥನ್ ಲಯನ್ 3, ಜೋಶ್ ಹೈಸಲ್ವುಡ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ 2 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದ ನ್ಯಾಥನ್ ಲಯನ್ ಪಂದ್ಯಪುರುಷ ಪ್ರಶಸ್ತಿ ಪಡೆದರು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿವೆ. ಸರಣಿಯ ಮೂರನೇ ಪಂದ್ಯ ಡಿ.26ರಂದು ಮೆಲ್ಬೋರ್ನ್ನಲ್ಲಿ ನಡೆಯಲಿದೆ.

One thought on “ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ : ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು..

Leave a Reply

Your email address will not be published.

Social Media Auto Publish Powered By : XYZScripts.com