ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ : ಬೆಂಗಳೂರಿಗೆ ಆಗಮಿಸಲಿದ್ದಾರೆ ಬಾಲಿವುಡ್ ನಟಿ ಕಾಜಲ್-ಅಜಯ್ ದೇವಗನ್

ಪ್ರಸಿದ್ಧ ಬಾಲಿವುಡ್ ನಟಿ ಕಾಜಲ್ ಹಾಗೂ ನಟ ಅಜಯ್ ದೇವಗನ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಜ್ಯ ಸರ್ಕಾರದಿಂದ ಬಾಲಿವುಡ್ ದಂಪತಿಗೆ ವಿಶೇಷ ಆಹ್ವಾನಕ್ಕೆ ಸಿದ್ಧತೆ ನಡೆಯುತ್ತಿದೆ.

ಅಷ್ಟಕ್ಕೂ ರಾಜ್ಯ ಸರ್ಕಾರದಿಂದ ಆಹ್ವಾನ ಕೊಟ್ಟಿದ್ದು ಯಾಕೆ ಗೊತ್ತಾ? ಫೆಬ್ರುವರಿ 7ರಿಂದ 14 ರ ವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ರಾಜ್ಯ ಸರ್ಕಾರ ಭಾರೀ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ದಂಪತಿ ನಟಿ ಕಾಜಲ್-ಅಜಯ್ ದೇವಗನ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ದಂಪತಿಗೆ ಸರ್ಕಾರ ಪತ್ರ ಬರೆದಿದೆ.  ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 7ದಿನಗಳ ಕಾಲ ನಡೆಯಲಿದೆ.

ಕಳೆದ ಬಾರಿ ಕರೀನಾ ಕಪೂರ್ ಅವರನ್ನ ಚಿಲನಚಿತ್ರೋತ್ಸವಕ್ಕೆ ಕರೆಸಲಾಗಿತ್ತು. ಈ ಬಾರಿ ಕಾಜಲ್ – ಅಜಯ್ ದೇವಗನ್ ದಂಪತಿಗೆ ಆಹ್ವಾನ ಮಾಡಲಾಗಿದೆ.  ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕಳೆದ ಬಾರಿ ವಿಧಾನ ಸೌಧದ ಗ್ರಾಂಡ್ ಸ್ಲಾಮ್ ಮೇಲೆ ಮಾಡಲಾಗಿತ್ತು. ಈ ಬಾರಿ ಚಲನಚಿತ್ರೋತ್ಸವದ ಖರ್ಚು ಕಡಿಮೆ ಮಾಡಲು ಬ್ಯಾಂಗ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ.

ಇವರ ಜೊತೆಗೆ 50 ದೇಶಗಳ ಪ್ರಮುಖ ಗಣ್ಯರಿಗೆ ಚಿತ್ರೋತ್ಸವಕ್ಕೆ ಆಹ್ವಾನ ಮಾಡಲಾಗಿದ್ದು,  50 ದೇಶಗಳ ವಿವಿದ ಚಲನಚಿತ್ರ ವೀಕ್ಷಣೆಗೆ ಚಲನಚಿತ್ರೋತ್ಸವದಲ್ಲಿ ಅವಕಾಶ ನೀಡಲಾಗುವುದು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರಿಂದ ಸಿದ್ಧತೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸಿಎಂ ಕುಮಾರಸ್ವಾಮಿ. ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಲು ನಾಗತಿಹಳ್ಳಿ ಚಂದ್ರಶೇಖರ್‌ಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com