ರಾಹುಲ್ ಪ್ರಧಾನಿ ಅಭ್ಯರ್ಥಿ ಎಂದ ಡಿಎಂಕೆಯ ಸ್ಟಾಲಿನ್, ಅಂತರ ಕಾಯ್ದುಕೊಂಡ ಇತರರರು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಮೋದಿ ವಿರುದ್ಧ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸುವುದು ಸೂಕ್ತ ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಘೋಷಿಸಿದ್ದಾರೆ.

ಚೆನ್ನೈನಲ್ಲಿ ಡಿಎಂಕೆ ಸಂಸ್ಥಾಪಕ ಕರುಣಾನಿಧಿ ಅವರ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ತೃತೀರಯ ರಂಗದ ಎಲ್ಲ ಪಕ್ಷಗಳ ನಾಯಕರು ಸಮ್ಮುಖದಲ್ಲಿ ಅವರು ಈ ಘೋಷಣೆ ಮಾಡಿದರು.

ಇದೇ ವೇಳೆ ಕರುಣಾನಿಧಿಯವರ ಆಶಯದಂತೆ ಸೇರಿದ್ದ ಎಲ್ಲ ಬಿಜೆಪಿಯೇತರ ಪಕ್ಷಗಳು ಪ್ರಧಾನಿ ಮೋದಿಯನ್ನು ಸೋಲಿಸುತ್ತೇವೆಂದು ಶಪಥ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಐದು ವರ್ಷಗಳ ಆಡಳಿತದಲ್ಲಿ ಭಾರತ 15 ವರ್ಷಗಳ ಹಿಂದೆ ಹೋಗಿದೆ. ಮತ್ತೊಮ್ಮೆ ಮೋದಿ ಪ್ರಧಾನಿ ಆದರೆ ಭಾರತ ಅಭಿವೃದ್ದಿಯಲ್ಲಿ 50 ವರ್ಷ ಹಿಂದೆ ಹೋಗುವ ಸಾಧ್ಯತೆಯಿದೆ.

ತಮಿಳುನಾಡಿನಿಂದ ರಾಹುಲ್​​ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತೇವೆ. ಈ ಬಾರಿ ಇಲ್ಲಿಂದಲೇ ಕಾಂಗ್ರೆಸ್​ ಅಧ್ಯಕ್ಷರನ್ನು ದೆಹಲಿಗೆ ಕಳಿಸುತ್ತೇವೆ ಎಂದು ಡಿಎಂಕೆ ಅಧ್ಯಕ್ಷರು ಹೇಳಿದರು.

ಈ ಮುನ್ನ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಕರುಣಾನಿಧಿ ಅವರ ಸಮಾಧಿಯ ಬಳಿಗೆ ತೆರಳಿ ಗೌರವ ಸಲ್ಲಿಸಿದ್ದರು. ಬಳಿಕ ಸೋನಿಯಾ ಗಾಂಧಿಯವರಿಂದಲೇ ಪ್ರತಿಮೆ ಅನಾವರಣಗೊಂಡಿತು.

ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಕೇರಳ ಸಿಎಂ ಪಿಣರಾಯಿ ವಿಜಯನ್​​, ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ನಟ ರಜನೀಕಾಂತ್​​, ಕಮಲಹಾಸನ್​ ಭಾಗಿಯಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com