IHF world cup hockey : ನೆದರ್ಲ್ಯಾಂಡ್ಸ್ ಮಣಿಸಿ ಇತಿಹಾಸ ಸೃಷ್ಟಿಸಿದ ಬೆಲ್ಜಿಯಂ..

ಭುವನೇಶ್ವರದಲ್ಲಿ ನಡೆದ ಪುರುಷರ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿದ ಬೆಲ್ಜಿಯಂ ತಂಡ, ಬಂಗಾರಕ್ಕೆ ಮುತ್ತಿಟ್ಟಿದೆ.

ಭಾನುವಾರ ಕಳಿಂಗ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಬೆಲ್ಜಿಯಂ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ನಿಗದಿತ ಅವಧಿಯಲ್ಲಿ ಗೋಲು ಬಾರಿಸಲು ವಿಫಲವಾದವು. ಪರಿಣಾಮ ಪಂದ್ಯದ ಫಲಿತಾಂಶ ಅರಿಯಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಈ ಹಂತದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಬೆಲ್ಜಿಯಂ, ಸ್ವರ್ಣ ತನ್ನದಾಗಿಸಿಕೊಂಡಿತು.

ಉಭಯ ತಂಡಗಳು ಫೈನಲ್ ಪಂದ್ಯದಲ್ಲಿ ಭರ್ಜರಿ ರಕ್ಷಣಾ ಆಟದ ಪ್ರದರ್ಶನ ನೀಡಿದವು. ಈ ಹಂತದಲ್ಲಿ ಎರಡೂ ತಂಡಗಳು ಗೋಲು ಬಾರಿಸಲು ಮಾಡಿಕೊಂಡ ಪ್ಲಾನ್ ಕೈ ಕೊಟ್ಟಿತು. ಅಭಿಮಾನಿಗಳು ಕರ್ಚಿಯ ತುದಿಯಲ್ಲಿ ಕುಳಿತು ಕೊಳ್ಳುವಂತೆ ಮಾಡಿದ್ದ ಪಂದ್ಯದಲ್ಲಿ ಬೆಲ್ಜಿಯಂ, ಪೆನಾಲ್ಟಿ ಶೂಟೌಟ್ ನಲ್ಲಿ ಜಯ ದಾಖಲಿಸಿತು.

ಆಸ್ಟ್ರೇಲಿಯಾಗೆ ಕಂಚು

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 8-1 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗು ಬಡೆದು, ನಾಲ್ಕನೇ ಬಾರಿಗೆ ಕಂಚಿನ ಪ್ರಶಸ್ತಿ ಪಡೆದು ಬೀಗಿದೆ. ಆಸೀಸ್ ಪರ ಟಾಮ್ ಕ್ರೇಗ್ (9, 19, 34ನೇ ನಿಮಿಷ), ಜೆರೆಮಿ ಹೇವಾರ್ಡ್ (57, 60ನೇ ನಿಮಿಷ), ಟ್ರೆಂಟ್ ಮಿಟನ್ (32ನೇ ನಿಮಿಷ), ಟಿಮ್ ಬ್ರಾಂಡ್ (34ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು.

Leave a Reply

Your email address will not be published.

Social Media Auto Publish Powered By : XYZScripts.com