BWF Finals : ನೊಜೊಮಿ ಓಕುಹಾರಾ ಪರಾಭವ – ಪಿ.ವಿ ಸಿಂಧು ಮುಡಿಗೆ ಚೊಚ್ಚಲ ಬಿಡಬ್ಲ್ಯೂಎಫ್ ಪ್ರಶಸ್ತಿ

ರವಿವಾರ ನಡೆದ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ ನ ಅಂತಿಮ ಹಣಾಹಣಿಯಲ್ಲಿ ಜಪಾನಿನ ನೊಜೊಮಿ ಓಕುಹಾರಾ ಅವರನ್ನು ಮಣಿಸಿದ ಭಾರತದ ಪಿ.ವಿ ಸಿಂಧು ಚೊಚ್ಚಲ ಬಾರಿಗೆ ಬಿಡಬ್ಲ್ಯೂಎಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.   ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ತಮ್ಮ ಎದುರಾಳಿ ನೊಜೊಮಿ ಓಕುಹಾರಾ ಅವರ ವಿರುದ್ಧ 21-19, 21-17 ಎರಡು ಗೇಮ್ ಗಳಲ್ಲಿ ನೇರ ಜಯ ಸಾಧಿಸುವ ಮೂಲಕ ಇತಿಹಾಸ ರಚಿಸಿದ್ದಾರೆ.

ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡಿನ ರಚನಾಕ್ ಇಂಟನಾನ್ ವಿರುದ್ಧ 21-16, 25-23 ರಿಂದ ಜಯ ಗಳಿಸಿದ್ದ ಸಿಂಧು ಫೈನಲ್ ಪ್ರವೇಶಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com