ರಾಗೀಗುಡ್ಡ ಆಂಜನೇಯನಿಗೆ 50ರ ಸಂಭ್ರಮ : ಉತ್ಸವ ಡಿ.12 ರಿಂದ ಡಿ.23ರ ವರೆಗೆ…

ಜಯನಗರ 9ನೇ ಬ್ಲಾಕ್‌ನಲ್ಲಿರುವ ರಾಗಿಗುಡ್ಡ ದೇವಾಲಯ ಬೆಂಗಳೂರಿನಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಪ್ರಾಚೀನ ಕಾಲದ ದೇವಾಲಯ. ಈಗ ರಾಗೀಗುಡ್ಡ ಆಂಜನೇಯನಿಗೆ 50 ವರ್ಷದ ಸಂಭ್ರಮ.

ಈ ದೇವಾಲಯವು ಚಿಕ್ಕಗುಡ್ಡದ ಮೇಲೆ, ಪ್ರಸನ್ನ ಆಂಜನೇಯ ಸ್ವಾಮಿಯ ನೆಲೆಯಾಗಿದೆ. ದೇವಾಲಯ ಪ್ರದೇಶವು 5 ಎಕರೆಯ ವಿಸ್ತೀರ್ಣ ಹೊಂದಿದ್ದು, ಇತರೆ ದೇವತೆಗಳ ಕ್ಷೇತ್ರವಾಗಿದೆ. ಇಲ್ಲಿ ಶ್ರೀಗಣೇಶ, ಶ್ರೀರಾಜರಾಜೇಶ್ವರಿ, ಶ್ರೀ ಸೀತಾರಾಮ ಸ್ವಾಮಿ ಮತ್ತು ನವಗ್ರಹಗಳು ಇವೆ.

ಈ ದೇವಾಲಯಕ್ಕೆ ರಾಗಿಗುಡ್ಡ ಎಂಬ ಹೆಸರು ಬರಲು ಒಂದು ಕಾರಣವೂ ಇದೆ. ಪ್ರಾಚೀನ ಕಾಲದಲ್ಲಿ ಈ ಪ್ರದೇಶದ ಸುತ್ತಮುತ್ತ ರಾಗಿ ಹೊಲಗಳೇ ಇದ್ದವು. ಆಗ ಪಾಳೇಗಾರನ ಆಳ್ವಿಕೆ ಇತ್ತು. ಒಂದು ಸುಗ್ಗಿಯ ಕಾಲದಲ್ಲಿ 60 ಅಡಿಗೂ ಮೀರಿದ ಎತ್ತರದಲ್ಲಿ ಪೈರು ರಾಶಿ ಬೆಳೆದಿತ್ತು. ರಾಶಿಪೂಜೆ ಮಾಡುವ ಸಮಯದಲ್ಲಿ ಮೂವರು ದಾಸಯ್ಯರು ಬಂದು ಭಿಕ್ಷೆ ಬೇಡಿದರು. ಅವರನ್ನು ತ್ರಿಮೂರ್ತಿಗಳೆಂದು ಭಾವಿಸಿದ ಪಾಳೇಗಾರನ ಸೊಸೆ ಮೊರದಲ್ಲಿ ಭಿಕ್ಷೆ ನೀಡಲು ಹೊರಟಳು. ಅತ್ತೆ ಪೂಜೆ ಆಗದೇ ಭಿಕ್ಷೆ ನೀಡಲು ವಿರೋಧಿಸಿದಳು. ದೇವರೇ ಎದುರಿಗಿದ್ದಾಗ ಪೂಜೆ ಎಂಥದ್ದೆಂದು ಮುನಿದ ಸೊಸೆ ರಾಶಿಯೆಲ್ಲ ಕಲ್ಲು ಗುಡ್ಡೆ ಆಗಲಿ ಎಂದಳು. ಅದೇ ರೀತಿ ಆಯಿತು ಎಂದು ಇತಿಹಾಸ ಹೇಳುತ್ತದೆ.

ಈ ಸ್ಥಳದ ಬಗ್ಗೆ ಅತ್ಯಂತ ಮನೋಹರವಾದ ಕಥೆ ಇದೆ. ಒಂದು ಚಿಕ್ಕದಾದ ರಾಗಿಯ ಗುಡ್ಡೆಯ, ಧಾನ್ಯಗಳ ರಾಶಿಯು ಚಿಕ್ಕ ಕಲ್ಲಾಗಿ ಮಾರ್ಪಟ್ಟಿತು. ರಾಗಿಯ ರಾಶಿಯು ಕಲ್ಲಾಗಿ ಪರಿವರ್ತನೆಯಾಗುವ ಸಮಯದಲ್ಲಿ ತ್ರಿಮೂರ್ತಿಗಳು ಸಾಕ್ಷಿಯಾಗಿ, ಅವರ ಮನೋಭಿಲಾಶೆಯಂತೆ ಆ ಜಾಗದಲ್ಲಿ ಶಾಶ್ವತವಾಗಿ ನೆಲೆಯೂರಿ, 3 ಕಲ್ಲು ಕಂಬಗಳ ಆಕೃತಿಯನ್ನು ಹೊಂದಿದ್ದಾರೆಂದು ತಿಳಿದು ಬರುತ್ತದೆ.

ಟ್ರಸ್ಟ್‌ ನೆರವಿನಿಂದ ಸುತ್ತಮುತ್ತಲ ಜಾಗವು ರಾಗಿಗುಡ್ಡ ಶ್ರೀ ಪ್ರಸನ್ನ ಅಂಜನೇಯ ಸ್ವಾಮಿ ಭಕ್ತ ಮಂಡಲಿಯು ಅದ್ಧೂರಿಯಿಂದ ಡಿಸೆಂಬರ್‌ ತಿಂಗಳಲ್ಲಿ ಹನುಮ ಜಯಂತಿ ಉತ್ಸವಗಳನ್ನು ಮಾಡುತ್ತಿದೆ.

ಬೆಟ್ಟದ ಮಧ್ಯೆ ಇಲ್ಲಿ ಆಂಜನೇಯನ ದೇಗುಲವಿದೆ. ಈಶ್ವರ-ರಾಮರ ಗುಡಿಗಳಿವೆ. ಚಾಲುಕ್ಯ ಶೈಲಿಯ ಮಂಟಪಗಳನ್ನು ಕಟ್ಟಿ ದೇವತಾ ಪ್ರತಿಮೆಗಳನ್ನು ಕೆತ್ತಲಾಗಿದೆ. ಬೆಟ್ಟದ ಮೇಲಿನ ಇಡೀ ಮಂಟಪವನ್ನು ಗರುಡ ಪಕ್ಷಿಯೊಂದು ಎತ್ತಿಕೊಂಡು ಹಾರುತ್ತಿರುವಂತೆ ವಿನ್ಯಾಸ ಮಾಡಲಾಗಿದೆ. ಈ ಪಕ್ಷಿಯ ಎತ್ತರ 18 ಅಡಿ.

1969ರಲ್ಲಿ ಶುರುವಾದ ದೇವಾಲಯ ಈಗ 50ನೇ ಹನುಮಜ್ಜಯಂತಿ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಡಿ.30ರ ತನಕ ಆಚರಣೆ ನಡೆಯಲಿದೆ. 50ನೇ ವರ್ಷದ ಪ್ರಯುಕ್ತ ಮತ್ತು ವಾರ್ಷಿಕವಾಗಿ ಅದ್ದೂರಿಯಾಗಿ ನಡೆಯುವ ಹನುಮ ಜಯಂತಿಯ ಜೊತೆಗೆ ಈ ಬಾರಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನದಲ್ಲಿ ಡಿ. 12 ರಿಂದ ಡಿ. 23ರ ವರೆಗೆ 50ನೇ ವರ್ಷದ ಹನುಮಜಯಂತಿ ಉತ್ಸವವನ್ನು ಈ ದೇವಾಲಯದಲ್ಲಿ ನಡೆಸಲಾಗುತ್ತಿದೆ. ರಾಗಿಗುಡ್ಡ ಪ್ರಸನ್ನಾಂಜನೇಯ ದೇವಾಲಯವು ಬೆಂಗಳೂರಿನ ಜಯನಗರ 9 ನೇಯ ಬ್ಲಾಕ್‌ನಲ್ಲಿರುವ ಬೆಟ್ಟದ ಮೇಲೆ ನೆಲೆಸಿದೆ.

Leave a Reply

Your email address will not be published.

Social Media Auto Publish Powered By : XYZScripts.com