ವಿಶ್ವಕಪ್ ಹಾಕಿ: ಸೆಮಿಫೈನಲ್ಸ್ ಗೆ ಅರ್ಹತೆ ಪಡೆಯುವ ಭಾರತದ ಕನಸು ಭಗ್ನ

ಭಾರತ ತಂಡ ವಿಶ್ವ ಕಪ್ ಹಾಕಿ ಟೂರ್ನಿಯ ನಾಲ್ಕರ ಘಟ್ಟ ತಲುಪುವ ಕನಾಉ ನುಚ್ಚು ನೂರಾಗಿದೆ. 50 ನೇ ನಿಮಿಷದಲ್ಲಿ ಗೋಲು ಬಿಟ್ಟ ಮನ್ ಪ್ರೀತ್ ಪಡೆ, ಉಪಾಂತ್ಯದ ಕನಸನ್ನು ಕೈ ಬಿಟ್ಟಿದೆ. ಗುರುವಾರ ಕಳಿಂಗ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ, ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸ ಹೊಂದಿತ್ತು.ಉತ್ತಮ ರಕ್ಷಣಾ ಆಟದ ಪ್ರದರ್ಶನ ನೀಡಿದ ಭಾರತ ಆರಂಭದಲ್ಲಿ ಮೇಲುಗೈ ಸಾಧಿಸುವ ಕನಸು, 12ನೇ ನಿಮಿಷದಲ್ಲಿ ಸಫಲವಾಯಿತು. ಆಕಾಶ್ ದೀಪ್ ಸಿಂಗ್ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ 1 ಗೋಲು ಮುನ್ನಡೆ ದೊರಕಿಸಿ ಕೊಟ್ಟರು.

ಆದ್ರೆ ಈ ಅವಧಿಯ ಕೊನೆಯ ನಿಮಿಷದಲ್ಲಿ ನೆದರ್ಲ್ಯಾಂಡ್ಸ್ ತಂಡ ಗೋಲು ಬಾರಿಸಿ, ಶಾಕ್ ನೀಡಿತು. ಎರಡು ಹಾಗೂ ಮೂರನೇ ಅವಧಿಯ ಆಟದಲ್ಲಿ ಗೋಲು ದಾಖಲಿಸುವ ಉಭಯ ತಂಡಗಳ ಆಸೆ ಮಣ್ಣು ಪಾಲಾಯಿತು.

ಕೊನೆಯ ಅವಧಿಯಲ್ಲಿ ಸಮಯೋಚಿತ ಆಟ ಆಡಿದ ನೆದರ್ಲೆಂಡ್ಸ್‌ 50 ನೇ ನಿಮಿಷದಲ್ಲಿ ಗೋಲು ದಾಖಲಿಸಿ ಜಯ ಸಾಧಿಸಿತು. ಭಾರತಕ್ಕೆ ಪಂದ್ಯದ ವೇಳೆ 2 ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದರೆ, ನೆದರ್ಲೆಂಡ್ಸ್‌ ತಂಡಕ್ಕೆ ಐದು ಅವಕಾಶಗಳು ಲಭಿಸಿದ್ದವು.

Leave a Reply

Your email address will not be published.

Social Media Auto Publish Powered By : XYZScripts.com