ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಹವಾ : ಪ್ರಸಿದ್ಧ ನಟರ ಲಿಸ್ಟ್ ನಲ್ಲಿದ್ದಾರೆ ಹ್ಯಾಂಡ್ಸಮ್ ಬಾಯ್

ಹುಡುಗೀಯರ ಶಿಳ್ಳೆ, ಚಪ್ಪಾಳೆ, ಕೂಗಾಟ, ಸೆಲ್ಫಿ ಇತ್ತು ಅಂದರೆ ಆ ಸ್ಟೇಜ್ ಮೇಲೆ ಟಾಲಿವುಡ್ ವಿಜಯ್ ದೇವರಕೊಂಡನ ಎಂಟ್ರಿ ಆಗ್ತಿದೆ ಅಂತಲೇ ಅರ್ಥ. ಹೌದು.. ವಿಜಯ್ ದೇವರಕೊಂಡನಿಗೆ ಮೃದು ಸ್ವಭಾವಕ್ಕೆ ಅದೆಷ್ಟೋ ಜನ ಹುಡುಗಾ ಹುಡುಗೀರು ಫ್ಯಾನ್ಸ್ ಆಗಿಬಿಟ್ಟಿದ್ದಾರೆ. ಎಲ್ಲೆಲ್ಲಿಯೂ ವಿಜಯ್ ಹವಾ ಶುರುವಾಗಿದೆ. ಹೀಗೆ ಒಂದೆರೆಡು ಸಿನಿಮಾಗಳಲ್ಲೇ ಆಕಾಶದೆತ್ತರಕ್ಕೆ ಬೆಳೆದು ನಿಂತ ವಿಜಯ್ ಅವರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸಂದರ್ಭಗಳು  ಕೇಳಿದರೆ ಮನಸ್ಸಿಗೆ ನೋವಾಗುತ್ತದೆ.

ಒಂದು ಸಿನಿಮಾ ಚಾನ್ಸ್ ಗಾಗಿ ಅಲೆದಾಡಿದ್ದ ನಟ ವಿಜಯ್ ದೇವರಕೊಂಡ ಮೂರು ನಾಲ್ಕು ವರ್ಷದ ಹಿಂದೆ ನಟನಾಗುವ ಆಸೆ ಹೊತ್ತು ಟಾಲಿವುಡ್ ಗೆ ಬಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಮಗೆ ಒಂದೇ ಒಂದು ಸಿನಿಮಾ ಚಾನ್ಸ್ ಗಾಗಿ ಸಾಕಷ್ಟು ಅಲೆದಾಡಿದ್ರು. ಸಾಕಷ್ಟು ಜನರ ಮಾತಿಗೂ ಗುರಿಯಾಗಿದ್ರು. ಅಷ್ಟಕ್ಕೂ ವಿಜಯ್ ಒಂದೇ ಬಾರಿಗೆ ಸಿನಿಮಾ ನಟನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಲಿಲ್ಲ. ಪ್ರಾರಂಭದಲ್ಲಿ ಬೇರೆ ಬೇರೆ ಸಿನಿಮಾಗಳಲ್ಲಿ ನಾಯಕರ ಸಹನಟನಾಗಿ ನಟನೆ ಮಾಡಿದರು. ಒಂದು ಹೊತ್ತಿನ ಊಟಕ್ಕೂ ಅಲೆದಾಡುವಂತಹ ಸ್ಥಿತಿ ಪ್ರಾರಂಭದಲ್ಲಿ ವಿಜಯ್ ಅನುಭವಿಸಿದ್ದಾರೆ. ದೊಡ್ಡಮಟ್ಟಿಗೆ ಬೆಳೆಯಲು ತುಂಬಾನೇ ಶ್ರಮ ವಹಿಸಿದ್ದಾರೆ. ಅವರು ಪಟ್ಟ ಶ್ರಮದ ಫಲ ಅಂದರೆ ಸದ್ಯ ಅವರು ಟಾಲಿವುಡ್ ನ ಕೋಟಿ ಹೀರೋ.

ಇವರ ವಾರ್ಷಿಕ ಆದಾಯ 4 ಕೋಟಿಗೂ ಮೀರಿದೆ.ಇವರು ಅದೆಷ್ಟು ಬೆಳೆದಿದ್ದಾರೆ ಅಂದರೆ ಟಾಲಿವುಡ್ ನಟ ರಾಮಚರಣಗೆ ಸಮನಾಗಿ ವಿಜಯ್ ಆದಾಯವಿದೆ. ಪ್ರಸಿದ್ಧ ಟಾಲಿವುಡ್ ನಟರ ಲಿಸ್ಟ್ ನಲ್ಲಿ ಇವರ ಹೆಸರು ಸೇರ್ಪಡೆಯಾಗಿದೆ. ವಿಜಯ್ ನಟನಾಗಿ ಅಭಿನಯಿಸಿದ ‘ಪೆಳ್ಳಿ ಚೂಪುಲು’ ತೆಲಗು ಸಿನಿಮಾಕ್ಕೆ ನ್ಯಾಷನಲ್ ಅವಾರ್ಡ್ ಬಂದ ನಂತರದಿಂದ ಇವರ ಅದೃಷ್ಟ ಖುಲಾಯಿಸಿ ಬಿಡ್ತು. ಗೀತಗೋವಿದಂ, ಟಾಕ್ಸಿ ವಾಲಾ ಸಿನಿಮಾಗಳಿಗೆ ಜನ ಫಿದಾ ಆಗಿಹೋದ್ರು. ಸಿನಿಮಾಗಳಲ್ಲಿ ಇವರು ಮೃದು ಸ್ವಾಭಾವದಲ್ಲಿ ಕಾಣಿಸಿಕೊಳ್ಳಿವುದನ್ನ ಜನ ಇಷ್ಟ ಪಟ್ಟಿದ್ದಾರೆ. ವಿಜಯ್ ಸಿನಿಮಾ ಅಂದರೆ ಹುಡುಗಾ – ಹುಡಗೀಯರು ಅತ್ಯಂತ ಕಾತುರದಿಂದ ಕಾಯುತ್ತಿರುತ್ತಾರೆ. ಜೊತೆಗೆ ಹುಡಗೀಯರ ನೆಚ್ಚನ ನಟನಾಗಿ ವಿಜಯ್ ಫೇಮಸ್ ಆಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com