ಈ ಹುಡುಗ ಯೂಟ್ಯೂಬ್‌ನಲ್ಲಿ ಗಳಿಸೋ ದುಡ್ಡು ನೋಡಿದ್ರೆ ನೀವು ದಂಗಾಗೋದು ಖಚಿತ!

ಅಪ್ಪಾ ಆ ಆಟಿಕೆ ಕೊಡ್ಸು ಅಂತ ಮಕ್ಕಳು ಕೈ ಹಿಡಿದು ಜಗ್ಗಿದಾಗ, ಸುಮ್ಮನಿರೋ… ಮನೆಯಲ್ಲೇ ಆಟಿಕೆಗಳ ಗುಡ್ಡೆ ಬಿದ್ದಿದೆ, ಹೊಸತ್ಯಾಕೋ ನಿಂಗೆ ಅಂತ ಹೇಳುವ ಅಪ್ಪ-ಅಮ್ಮಂದಿರೇ ಹೆಚ್ಚು. ಮುಂದಿನ ಬಾರಿ ಮನೆಯಲ್ಲಿ ಆಟಿಕೆ ಕೇಳುವ ಮಕ್ಕಳಿಗೆ ಗದರುವ ಮುನ್ನ ಈ ಸುದ್ದಿ ಓದಲೇಬೇಕು ನೀವು.

Image result for ryan toys review

ಈತನ ಹೆಸರು ರಾನ್. ಅಮೆರಿಕದವನು. ಇವನ ವಯಸ್ಸು ಇನ್ನೂ 7 ವರ್ಷ ಅಷ್ಟೇ. ಈತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಆದರೆ ಈತನ ಆದಾಯ ವರ್ಷಕ್ಕೆ 154.8 ಕೋಟಿ ರೂ. (22 ಮಿಲಿಯನ್ ಡಾಲರ್)! ಹೇಗೆ ಅಂತ ಕೇಳ್ತೀರಾ? ಅದೇ ಮಕ್ಕಳ ಆಟಿಕೆಗಳಿಂದಲೇ ಆತ ಇಷ್ಟೊಂದು ಹಣ ಗಳಿಸುತ್ತಿದ್ದಾನೆ. ಅವನಿಗೆ ಹಣ ಕೊಡುವವರು ಯಾರು ಅಂತೀರಾ? ಯೂಟ್ಯೂಬ್. ಏನಿದು ಒಂದೂ ಅರ್ಥ ಆಗ್ತಿಲ್ಲ ಅಂತ ಯೋಚಿಸಬೇಡಿ.. ಇಲ್ಲಿದೆ ಇದರ ಪೂರ್ಣ ವಿವರ.

Image result for ryan toys review

ಈ ಬಾಲಕ ರಾನ್ ಆಟಿಕೆಗಳ ವಿಮರ್ಶೆ ಮಾಡುತ್ತಾನೆ. ಮಾರುಕಟ್ಟೆಗೆ ಹೊಸತಾಗಿ ಬಂದಿರುವ ಆಟಿಕೆಗಳನ್ನು ಹಿಡಿದುಕೊಂಡು, ಅದು ಹೇಗಿದೆ, ಮಕ್ಕಳಿಗೆ ಯಾವ ರೀತಿ ಉಪಯುಕ್ತ ಎಂಬಿತ್ಯಾದಿ ವಿವರವನ್ನು ಹೇಳುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾನೆ. ಈತನ ವಿಮರ್ಶೆ ಭಾರೀ ಜನಪ್ರಿಯ. ಯೂಟ್ಯೂಬ್‌ನಲ್ಲಿ . ಯೂಟ್ಯೂಬ್‌ನಲ್ಲಿ ರಾನ್ ಟಾಯ್ಸ್ ರಿವ್ಯೂ (Ryan ToysReview) ಅಂತ ಒಂದು ಸ್ವಂತ ಚಾನೆಲ್ ಅನ್ನು ಈತ ಹೊಂದಿದ್ದಾನೆ.

Image result for ryan toys review

ಅದಕ್ಕೆ ಸದ್ಯ 17 ಮಿಲಿಯನ್ ಚಂದಾದಾರರಿದ್ದಾರೆ. ತನ್ನ 4ನೇ ವರ್ಷದಿಂದಲೇ ರಾನ್ ಯೂಟ್ಯೂಬ್‌ನಲ್ಲಿ ಚಾನೆಲ್ ಮೂಲಕ ಆಟಿಕೆಗಳ ವಿಮರ್ಶೆ ಆರಂಭಿಸಿದ್ದ.
ಹೆಚ್ಚು ಜನಪ್ರಿಯವಾಗಿರುವ ಚಾನೆಲ್‌ಗಳ ಮಾಲೀಕರಿಗೆ ಯೂಟ್ಯೂಬ್ ಹಣ ಪಾವತಿಸುತ್ತದೆ ಅತಿಹೆಚ್ಚು ದುಡ್ಡು ಸಂಪಾದಿಸುವ ಯೂಟ್ಯೂಬ್ ಸ್ಟಾರ್‌ಗಳ ಪಟ್ಟಿಯಲ್ಲಿ ರಾನ್ ನಂ.1 ಸ್ಥಾನಕ್ಕೇರಿದ್ದಾನೆ. ಇತ್ತೀಚೆಗೆ ಫೋರ್ಬ್ಸ್ ಈ ಪಟ್ಟಿ ತಯಾರಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com