ಯಶ್ ಪುತ್ರಿಗೆ ಅಂಬಿಯಿಂದ ತೊಟ್ಟಿಲು ಉಡುಗೊರೆ : ಈಡೇರಿತು ರೆಬೆಲ್ ಸ್ಟಾರ್ ಆಸೆ

ರಾಜಾಹುಲಿ ಮಗಳಿಗೆ ಸ್ವರ್ಗದಿಂದ ಕರ್ಣ ಅಂಬರೀಷ್ ಗಿಫ್ಟ್ ಕಳುಹಿಸಿದ್ದಾರೆ. ನಂಬಲು ಅಸಾಧ್ಯ ಆದರೂ ನಂಬಲೇಬೇಕು. ರಾಧಿಕಾ ಪಂಡಿತ್ ತಮ್ಮ ಮಗಳ ಸಮಾನ ಎಂದ ರೆಬೆಲ್ ಸ್ಟಾರ್ ಅಂಬರೀಷ್ ರಾಧಿಕ ಗರ್ಭಿಣಿಯಾದ ವಿಚಾರ ತಿಳಿದು ಎರಡು ತಿಂಗಳ ಹಿಂದೆ ತೊಟ್ಟಿಲು ತಯಾರಿಸಲು ತಿಳಿಸಿದ್ದರು. ಈಗ ತೊಟ್ಟಲು ತಯಾರಿಯಾಗಿದೆ. ಬಗ್ಗೆ ಜಲೀಲ ಮೊಬೈಲಿಗೆ ಮೆಸೇಜ್ ಬಂದಿತ್ತು. ಆದರೆ ಅಂಬರೀಷ್ ಸುಮಲತಾ ಅವರಿಗೂ ವಿಚಾರವನ್ನು ತಿಳಿಸಿರಲಿಲ್ಲ. ಅಂಬಿ ಮೊಬೈಲ್ ಗೆ ಬಂದ ಮೆಸೇಜ್ ನೋಡಿದ ಸುಮಲತಾ ಯಶ್ ಅವರಿಗೆ ಕಾಲ್ ಮಾಡಿ ವಿಚಾರ ತಿಳಿಸಿದ್ದಾರೆ.

ಬೆಳಗಾವಿ ನಾರಾಯಣ್ ಕಲಾಲ್ ಅನ್ನೋರಿಗೆ ಎರಡು ತಿಂಗಳು ಹಿಂದೆ ತೊಟ್ಟಿಲು ರೆಡಿ ಮಾಡಲು ತಿಳಿಸಿದ್ದರಂತೆ ಅಂಬಿ. ಚೊಚ್ಚಲ ಹೆರಿಗೆಗೆ  ಮಗಳಿಗೆ ಅಂದರೆ ರಾಧಿಕ ಅವರಿಗೆ ತವರು ಮನೆಯಿಂದ ತೊಟ್ಟಿಲು ಕಳಿಸಿಕೊಡುವ ಸಂಪ್ರದಾಯ ಎಂದು ಇದೆ ಎಂದು ಹೇಳಿದ್ದರಂತೆ ಅಂಬಿ. ನಾರಾಯಣ್ ಅವರು ಕಲಘಟಗಿಯಲ್ಲಿ ತೊಟ್ಟಿಲು ತಯಾರಿಸಲು ಹೇಳಿದ್ದರು. ಗಜಕೇಸರಿ ಕುಟುಂಬಕ್ಕೆ ಪಾಳೇಗಾರನ ಗಿಫ್ಟ್ ತಯಾರಗಿದ್ದು ಅಂಬಿಯ ಕನಸು ನೆರವೇರಿದೆ. 1.50 ಲಕ್ಷ ವೆಚ್ಚದ ಸುಂದರವಾದ ತೊಟ್ಟಿಲನ್ನು ಎರಡು ತಿಂಗಳಿಂದ ಕಲಾತ್ಮಕವಾಗಿ ಕಟ್ಟಿಗೆಯಿಂದ ತಯಾರಿಸಲಾಗಿದೆ. ಯಶ್ ಮಗಳಿಗೆ ಆಸೆಯಂತೆ ಅಂಬಿಯ ಒಲವಿನ ಉಡುಗೊರೆ ತಯಾರಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com