ಡಿ. 8ಕ್ಕೆ IWC ಸಮ್ಮೇಳನ : ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಅವಕಾಶ ದೊರೆಯುವ ನಿಟ್ಟಿನಲ್ಲಿ ಆಂದೋಲನ

ಡಿಸೆಂಬರ್ 8ಕ್ಕೆ ಬೆಂಗಳೂರಿನಲ್ಲಿ ಇಂಡಿಯಾ ವಿಮೆನ್ಸ್ ಕಾಕಸ್ ಸಮ್ಮೇಳನ
ಇಂಡಿಯಾ ವಿಮೆನ್ಸ್ ಕಾಕಸ್ (ಐಡಬ್ಲ್ಯುಸಿ) ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಶಾಸಕರು ಮತ್ತು ಸಂಸತ್ ಸದಸ್ಯರಾಗಿ ಚುನಾಯಿಸಲು ಅನುವು ಮಾಡಿಕೊಡುವ ದೀರ್ಘಾವಧಿಯ ಗುರಿಯೊಂದಿಗೆ ಕೈಜೋಡಿಸಿರುವ ಪಕ್ಷಾತೀತ ಮಹಿಳೆಯರ ಚಳವಳಿಯಾಗಿದೆ.
ಈ ವರ್ಷದ ಅಕ್ಟೋಬರ್ ನಲ್ಲಿ ಗೋವಾದಲ್ಲಿ ಯಶಸ್ವಿಯಾಗಿ ನಡೆದ ಮೊತ್ತಮೊದಲ ಸಭಾಕಾರ್ಯಕ್ರಮದ ನಂತರ, ಬೆಂಗಳೂರಿನ ಹೋಟೆಲ್ ಚಾಲುಕ್ಯದಲ್ಲಿ ಐಡಬ್ಲ್ಯುಸಿ ಡಿಸೆಂಬರ್ 8, 2018 ರ ಶನಿವಾರದಂದು ಸಭೆ ನಡೆಯುತ್ತಿದೆ. ಗೋವಾದಲ್ಲಿನ ಪತ್ರಕರ್ತೆಯಾದ ರಾಜಶ್ರೀ ನಗರ್ಸೇಕರ್ ಮತ್ತು ಸಿಟಿಝನ್ ಫ಼ಾರ್ ಬೆಂಗಳೂರಿನ ಸಹ-ಸಂಸ್ಥಾಪಕರು, ಲೇಖಕಿ ಮತ್ತು ಚಳುವಳಿಗಾರ್ತಿ ತಾರಾ ಕೃಷ್ಣಸ್ವಾಮಿ ಯವರ ನೇತೃತ್ವದಲ್ಲಿ ಡಿಸೆಂಬರ್ 8ರ ಐಡಬ್ಲ್ಯುಸಿ ಸಭೆಯನ್ನು ನಡೆಸಲಾಗುತ್ತಿದೆ.
“ಭಾರತೀಯ ಮಹಿಳಾ ಕಾಕಸ್ ಸಭೆಯು ಒಂದು ಸಲ ನಡೆಸಿ ಮುಗಿಯುವ ಕಾರ್ಯಕ್ರಮವಲ್ಲ, ಬದಲಾಗಿ ಒಂದು ದೊಡ್ಡದಾದ ನಿರಂತರ ಅಭಿಯಾನದ ಒಂದು ಭಾಗವಾಗಿದೆ.. ಭಾರತದಲ್ಲಿ, ಕಾರ್ಪೋರೇಟರುಗಳು ಮತ್ತು ಪಂಚಾಯತ್ ಗಳಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಹೊಂದಿದ ಮಹಿಳಾ ಮುಖಂಡರು ಕೂಡ ಬೆಳೆಯಲು ಸಾಧ್ಯವಾಗುವುದಿಲ್ಲ . ಯಾಕೆಂದರೆ ರಾಜಕೀಯ ಪಕ್ಷಗಳು ಅವರಿಗೆ ಟಿಕೆಟ್ ನೀಡುವುದಿಲ್ಲ. ನಾವು ಹೆಚ್ಚು ಮಹಿಳೆಯರು ಚುನಾಯಿತರಾಗುವಂತೆ ಮಾಡಬೇಕು ಮತ್ತು ಅದಕ್ಕಾಗಿ ನಾವು ರಾಜಕೀಯ ಪಕ್ಷಗಳು ಮತ್ತು ಮಹಿಳಾ ಅಭ್ಯರ್ಥಿಗಳೊಂದಿಗೆ ಕೆಲಸ ಮಾಡಬೇಕಾಗಿದೆ. ಡಿಸೆಂಬರ್ 8ರ ಕಾರ್ಯಕ್ರಮದಲ್ಲಿ 2019ರ ಸಂಸತ್ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲು ಮಾಡಬೇಕಾದ ಕೆಲಸಗಳ ನಿಟ್ಟಿನಲ್ಲಿ ಒಂದು ಗೊತ್ತುವಳಿಯನ್ನು ಸಿದ್ಧಪಡಿಸಿ ಕಾರ್ಯಕ್ರಮದ ಕೊನೆಯಲ್ಲಿ ಮಾಧ್ಯಮಗಳಿಗೆ ಬಿಡುಗಡೆಮಾಡಲಾಗುವುದು” ಎಂದು ತಾರಾ ಕೃಷ್ಣಸ್ವಾಮಿಯವರು ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳ ಜತೆಗೆ ಮಾತನಾಡುತ್ತ ಹೇಳಿದರು.

ಪ್ರಸಿದ್ಧ ಪತ್ರಕರ್ತೆ ವಸಂತಿ ಹರಿಪ್ರಕಾಶ್ ಈ ಕಾರ್ಯಕ್ರಮವನ್ನು ಬೆಂಬಲಿಸಲು ಮಾಧ್ಯಮಗಳಿಗೆ ಮನವಿ ಮಾಡಿದರು. “ಸಂಸತ್ ಮತ್ತು ಶಾಸನ ಸಭೆಗಳಲ್ಲಿ ಬಲು ಕಡಿಮೆ ಮಹಿಳೆಯರಿದ್ದಾರೆ. ವಿವಿಧ ಪಕ್ಷಗಳಲ್ಲಿರುವ ಮಹಿಳಾ ನಾಯಕಿಯರು, ಚುನಾಯಿತ ಪ್ರತಿನಿಧಿಗಳು, ಸಮಾಜ ವಿಜ್ಢಾನಿಗಳು, ತಳಮಟ್ಟದ ಕಾರ್ಯಕರ್ತರು, ಪತ್ರಕರ್ತರು ಮತ್ತಿತರ ಜತೆಗೆ ಚರ್ಚೆ ಮಾಡಿ ಇದಕ್ಕೇನು ಕಾರಣವೆಂದು ಕಂಡುಹಿಡಿದು ಮುಂದೇನು ಮಾಡಬೇಕೆಂಬುದಕ್ಕೆ ಕ್ರಿಯಾ ಯೋಜನೆ ಸಜ್ಜು ಪಡಿಸಬೇಕಾಗಿದೆ. ನಾವೆಲ್ಲ ಈ ನಿಟ್ಟಿನಲ್ಲಿ ಒಂದುಗೂಡುತ್ತಿರುವುದು ನನಗೆ ಸಂತಸ ತಂದಿದೆ” ಎಂದು ಅವರು ಹೇಳಿದರು.

ಸಾಮಾಜಿಕ ನೀತಿ ಸಂಶೋಧಕಿ ಸಿಂಥಿಯಾ ಸ್ಟೀಫನ್ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು. “ಸಮಾಜದ ಎಲ್ಲಾ ಸ್ತರಗಳ, ನಗರಗಳು ಮತ್ತು ಹಳ್ಳಿಗಳ, ದೇಶದ ವಿವಿಧ ಭಾಗಗಳಲ್ಲಿರುವ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಇಷ್ಟವಿರುವ ಎಲ್ಲಾ ರೀತಿಯ ಮಹಿಳೆಯರನ್ನೊಳಗೊಂಡ ಕಾರ್ಯಕ್ರಮ ಇದಾಗಿದೆ ಎಂದು ಅವರು ಹೇಳಿದರು.
ರಾಜಕೀಯ ಪಕ್ಷಗಳ ಮಹಿಳಾ ನಾಯಕರು, ಸಂಸತ್ತಿನ ಮಹಿಳಾ ಸದಸ್ಯರು ಮತ್ತು ಕಾಂಗ್ರೆಸ್, ಬಿಜೆಪಿ, ಜೆಡಿ (ಎಸ್) ಮತ್ತು ಸಿಪಿಎಂ ಪಕ್ಷಗಳಿಗೆ ಸೇರಿದ ಪ್ರಸ್ತುತ ಮತ್ತು ಮಾಜಿ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿವರಗಳು:
10 a.m. – 5 p.m.
ಡಿಸೆಂಬರ್ 8, 2018
ಹೋಟೆಲ್ ಚಾಲುಕ್ಯ
44, ರೇಸ್ಕೋರ್ಸ್ ರಸ್ತೆ,
ಬಸವೇಶ್ವರ ವೃತ್ತ,
ಬೆಂಗಳೂರು,
ಕರ್ನಾಟಕ 560001

One thought on “ಡಿ. 8ಕ್ಕೆ IWC ಸಮ್ಮೇಳನ : ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಅವಕಾಶ ದೊರೆಯುವ ನಿಟ್ಟಿನಲ್ಲಿ ಆಂದೋಲನ

Leave a Reply

Your email address will not be published.

Social Media Auto Publish Powered By : XYZScripts.com