ಸರ್ಕಾರದ ಹಣದಲ್ಲಿ ಸಿನಿಮಾ ನಟರಿಗೆ ಸ್ಮಾರಕ : ಸಿಎಂ ವಿರುದ್ಧ ಕುರುಬೂರು ಶಾಂತಕುಮಾರ್ ಆಕ್ರೋಶ

ಸರ್ಕಾರದ ಹಣದಲ್ಲಿ ಸಿನಿಮಾ ನಟರಿಗೆ ಸ್ಮಾರಕ ನಿರ್ಮಾಣ ಮಾಡುವುದನ್ನ ಖಂಡಿಸಿ ರೈತರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಿನಿಮಾ ನಟಿರಿಗೆ ಯಾವ ಕಾರಣದಿಂದಾಗಿ ಸರ್ಕಾರದ ಹಣದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಹಾಗೊಂದುವೇಳೆ ಮಾಡುವುದಾದರೆ ರೈತರ ಪರವಾಗಿ, ರೈತರ ಹಿತಕ್ಕಾಗಿ, ರೈತರ ಅಭಿವೃದ್ಧಿಗೆ ಶ್ರಮಿಸಿದ ಅದೆಷ್ಟೋ ರೈತ ಮುಖಂಡರು ಸಾವನ್ನಪ್ಪಿದ್ದಾರೆ ಅವರ ಹೆಸರಲ್ಲೂ ಸ್ಮಾರಕ ನಿರ್ಮಾಣ ಮಾಡಬೇಕು’ ಎಂದು  ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಿಎಂ ಕುಮಾರ ಸ್ವಾಮಿ ಅವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆಗಳಾಗುತ್ತಿದೆ. ಸರ್ಕಾದ ಹಣದಲ್ಲಿ ನಟರ ಸ್ಮಾರಕ ಯಾಕೆ..? ಎನ್ನುವ ಪ್ರಶ್ನೆಗಳು ಹರಿದಾಡುತ್ತಿವೆ. ರೈತರ ಸಮಸ್ಯೆಗಳಿಗೆ ಕಿವಿಕೊಡಲು ಆಗದಂತ ಪರಿಸ್ಥಿತಿ ಇದ್ದಾಗ ಸ್ಮಾರಕ ನಿರ್ಮಾಣಕ್ಕೆ ಚರ್ಚೆ ಮಾಡುವಷ್ಟು ಸಮಯ ಸಿಎಂಗೆ ಇದಿಯಾ..? ಅಷ್ಟಕ್ಕೂ ಸರ್ಕಾರದ ಹಣ ಖರ್ಚು ಮಾಡಲು ನಾಡಿನ ಜನತೆಗೆ ನಟರ ಕೊಡುಗೆಯಾದರೂ ಏನು..? ರೈತರು ದೇಶದ ಬೆನ್ನೆಲುಬು ಇಂತವರ ಅಭಿವೃದ್ಧಿಗೆ ಶ್ರಮಿಸಿದವರು ಸಾಕಷ್ಟು ಜನ ರೈತ ಮುಖಂಡರುಗಳು ಇದ್ದಾರೆ ಅವರನ್ನು ಗುರುತಿಸಿ ಎನ್ನುವ ಮಾತು ಕೇಳಿಬರುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com