ಬ್ರೆಜಿಲ್ ಮಾಡೆಲ್‍ಗೆ ಅಶ್ಲೀಲ ಫೋಟೊ ರವಾನೆ : ದುಬೈನಲ್ಲಿ ಗಾಯಕ ಮಿಕಾ ಸಿಂಗ್ ಬಂಧನ

ಬ್ರೆಜಿಲ್ ಮಾಡೆಲ್ ಒಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖ್ಯಾತ ಬಾಲಿವುಡ್ ಗಾಯಕ ಮಿಕಾ ಸಿಂಗ್ ರನ್ನು ದುಬೈನಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಯುಎಇ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಿಕಾ ಸಿಂಗ್ ತನಗೆ ವಾಟ್ಸಾಪ್ ಮುಖಾಂತರ ಅಶ್ಲೀಲ ಫೋಟೊಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಬ್ರೆಜಿಲ್ ನ 17 ವರ್ಷದ ಮಾಡೆಲ್ ಬಾಲಿವುಡ್ ಗಾಯಕನ ವಿರುದ್ಧ ದೂರು ನೀಡಿದ್ದರು. ಈ ದೂರಿನನ್ವಯ ದುಬೈನಲ್ಲಿ ಮಿಕಾ ಸಿಂಗ್ ರನ್ನು ಬಂಧಿಸಲಾಗಿದೆ.

41 ವರ್ಷದ ಗಾಐಕ ಮಿಕಾ ಸಿಂಗ್ ಅವರನ್ನು ವಿಚಾರಣೆಗಾಗಿ ರವಿವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು. ದೂರು ನೀಡಿರುವ ಬ್ರೆಜಿಲ್ ಮಾಡೆಲ್ ಗೆ ಬಾಲಿವುಡ್ ನಲ್ಲಿ ಕೆಲಸ ಕೊಡಿಸುವುದಾಗಿ ಮಿಕಾ ಸಿಂಗ್ ಭರವಸೆ ನೀಡಿದ್ದರು ಎಂಬುದಾಗಿ ತಿಳಿದು ಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com