Bigg Boss 6 : ಯಾರಾಗಬಹುದು ಬಿಗ್ ಬಾಸ್ ಸೀಸನ್-6 ವಿನ್ನರ್..? ಜನರ ನಿರೀಕ್ಷೆ ಏನಿದೆ..?

ಬಿಗ್ ಬಾಸ್ ಕನ್ನಡ 6 ಈಗಾಗಲೇ ಏಳು ವಾರಗಳನ್ನು ಪೂರೈಸುತ್ತಾ ಬಂದಿದೆ. ಆರು ಸ್ಪರ್ಧಿಗಳು ಮನೆಯಿಂದ ಹೊರಬಂದಾಗಿದೆ. ಇನ್ನುಳಿದ 12 ಸ್ಪರ್ಧಿಗಳಲ್ಲಿ ಕಾಂಪಿಟೇಷನ್ ಹೆಚ್ಚಾಗುತ್ತಿದೆ. ಅಂದಹಾಗೆ ಏಳು ವಾರಗಳ ಬೆಳವಣಿಗೆಯನ್ನು ಗಮನಿಸಿದಾಗ ಬಿಗ್ ಬಾಸ್ ಮನೆಯ ವಿಜೇತರು ಯಾರಾಗಬಹುದು ಅನ್ನೋದನ್ನ ಅಂದಾಜಿಸಬಹುದು.

ಬಿಗ್ ಬಾಸ್ ಮನೆಯ ದಿ ಮೋಸ್ಟ್ ಬೆಸ್ಟ್ ಫ್ರೆಂಡ್ಸ್ ಅಂತ ಹೇಳಿಕೊಳ್ಳುವ ವಿವಾಹಿತೆ ಅಕ್ಷತಾ ಹಾಗೂ 200 ಜನ ಹುಡುಗೀಯರೊಂದಿಗೆ ಡೇಟಿಂಗ್ ಮಾಡಿರೋದಾಗಿ ಹೇಳಿಕೊಂಡಿರೋ ರಾಕೇಶ್ ವಿಚಾರ ಹೇಳಬೇಕಾಗಿಲ್ಲ. ಇವರಿಬ್ಬರು ಬಿಗ್ ಬಾಸ್ ಮನೆ ಒಳಗೆ ಸಿಂಗಲ್ ಆಗಿ ಬಂದು ಮಿಂಗಲ್ ಆಗೋದು ಮನೆಯ ಸದಸ್ಯರಿಂದ ಹಿಡಿದು ಬಿಗ್ ಬಾಸ್ ನೋಡುವಂತಹ ಪ್ರೇಕ್ಷಕರಿಗೂ ಇಷ್ಟವಿಲ್ಲದಂತೆ ಕಾಣುತ್ತದೆ. ಫ್ರೆಂಡ್ಸ್ ಅನ್ನೋ ಹೆಸರಲ್ಲಿ ಮನೆಯ ಸದಸ್ಯರಿಗೆ ಹಾಗೂ ಪ್ರೇಕ್ಷಕರಿಗೆ ಮೋಸ ಮಾಡುತ್ತಿದ್ದಾರೆ ಅನ್ನೋ ಮಾತು ಎಲ್ಲೆಡೆ ಕೇಳಿ ಬರುತ್ತಿವೆ. ಇನ್ನೂ ವಾಟ್ಸ್ ಆಪ್, ಫೇಸ್ ಬುಕ್ ನಲ್ಲಿ ಇಬ್ಬರನ್ನು ಹೊರಹಾಕಿ ಅನ್ನೋ ಮಾತುಗಳು ಸಾಮಾನ್ಯವಾಗಿವೆ. ಹೀಗಾಗಿ ಇವರಿಬ್ಬರು ಬಿಗ್ ಬಾಸ್ ಮನೆಯ ಅಡುಗೆ, ಟಾಸ್ಕ್ ವಿಚಾರಕ್ಕೆ ಚೆನ್ನಾಗೇ ಇದ್ದರೂ ವಿಜೇತರ ಲಿಸ್ಟ್ ನಲ್ಲಿ ಉಳಿಯುವುದು ಕಷ್ಟವಿದೆ.

ಇನ್ನೂ ಕವಿತಾ ಮತ್ತು ಆ್ಯಂಡಿ ಮಧ್ಯದಲ್ಲಿ ಜಯಶ್ರೀ ಮತ್ತು ಶಶಿಯೋ..? ಕವಿತಾ ಮತ್ತು ಶಶಿ ಮಧ್ಯದಲ್ಲಿ ಆ್ಯಂಡಿನೋ..? ಇವರಿಬ್ಬರಿಂದ ದೂರವಿರಲು ಕವಿತಾಳಿಗೆ ಸಲಹೆ ನೀಡುತ್ತಿರುವುದು ಜಯಶ್ರೀನೋ..? ಈ ಪ್ರಶ್ನೆಗಳಿಗೆ ಉತ್ತರ ಬಿಗ್ ಬಾಸ್ ನೋಡುವಂತಹ ಪ್ರತಿಯೊಬ್ಬರಿಗೂ ತಿಳಿದೇ ಇರುತ್ತದೆ. ಪ್ರಾರಂಭದಲ್ಲಿ ಆ್ಯಂಡಿ ಕವಿತಾಳನ್ನು ಇಷ್ಟ ಪಟ್ಟಿದ್ದಾರೆ ಅನ್ನೋ ವಿಚಾರವಿತ್ತು. ನಂತರ ಆ್ಯಂಡಿ ಕವಿತಾ ವಿಚಾರವಾಗಿ ಮಾತನಾಡಿದರೆ ಶಶಿ ಅವರಿಗೆ ಯಾಕೆ ಕೈಯನ್ನ ಗೋಡೆಗೆ ಗುದ್ದಿಕೊಳ್ಳುವಷ್ಟು ಕೋಪ ಬಂತೂ ಅನ್ನೋದು ಕೂಡ ಇಲ್ಲಿ ಪ್ರಶ್ನೆಯೇ.

ಇದೊಂದೇ ಮಾತ್ರವಲ್ಲ ಆ್ಯಂಡಿ ಕವಿತಾ ಬಗ್ಗೆ ಮಾತನಾಡಿದಾಗಲೆಲ್ಲಾ ಶಶಿ ಹಾಗೂ ಜಯಶ್ರೀ ಅವರು ಹೆಚ್ಚಾಗಿ ಮಧ್ಯವರ್ತಿಗಳಾಗುತ್ತಾರೆ. ಮನೆಯ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ ಅತಿಯಾಗಿ ಬೇಸರ ತರುವುದು ಆ್ಯಂಡಿ. ಜೊತೆಗೆ ಟಾಸ್ಕ್ ನಲ್ಲಿ ಒಪ್ಪಂದ ಮಾಡಿಕೊಂಡು ಕೈ ಕೊಟ್ಟ ಕವಿತಾಳ ಹೆಸರು ಹೆಚ್ಚಾಗಿತ್ತು.

ಕವಿತಾ ವಿಚಾರವಾಗಿ ಆ್ಯಂಡಿ ನಡವಳಿಕೆಗಳನ್ನ ಇಷ್ಟ ಪಡದ ಶಶಿ ಹಾಗೂ ಜಯಶ್ರೀ ಅವರೂ ಇಲ್ಲಿ ಹೈಲೆಟ್ ಆಗಿದ್ದಾರೆ. ಟಾಸ್ಕ್ ವಿಚಾರಕ್ಕೆ ಬರುವುದಾದರೆ ಒಳ್ಳೆ ಆಟದ ಪ್ರದರ್ಶನ ನೀಡಿದರೂ ಸಹ ಕವಿತಾ ಕ್ಯಾಪ್ಟನ್ ಆಗಿ ನಿದ್ದೆ ಮಾಡಿದ್ದು, ಆ್ಯಂಡಿ ಸಿಹಿ ತಿನಿಸಿಗೆ ಖಾರದ ಪುಡಿ ಬೆರೆಸಿದ್ದು, ಶಶಿ ಕೈ ಗುದ್ದಿಕೊಳ್ಳುವಷ್ಟು ಕೋಪಕ್ಕೆ ಹೋಗಿದ್ದು, ಜಯಶ್ರೀ ಪಾಯಿಂಟೌಟ್ ಆಗಿದ್ದು ಹೀಗೆ ಇವರು ನಾಲ್ಕು ಜನರನ್ನ ಗಣನೆಗೆ ತೆಗೆದುಕೊಂಡರೆ ಬಿಗ್ ಬಾಸ್ ಮನೆಯಲ್ಲಿ ಫೈನಲ್ ಹೋಗುವಂತಹ ಸಾಧ್ಯತೆಗಳು ಕಡಿಮೆ ಇದೆ ಎನ್ನಬಹುದು.

ಉತ್ತರ ಕರ್ನಾಟಕದ ಸೋನು ಪಾಟೀಲ್ ಅವರು ಆಟ ಆಡಲು ಬಂದು ನವೀನ್ ಅವರನ್ನ ಇಷ್ಟ ಪಟ್ಟಿದ್ದು ಅವರ ವೈಯಕ್ತಿ ವಿಚಾರ. ಆದರೆ ಬಿಗ್ ಬಾಸ್ ನೋಡುವಂತಹ ಜನ ಇದನ್ನ ಒಪ್ಪಬಹುದು ಒಪ್ಪದೇ ಇರಬಹುದು. ಸೋನು ಅವರ ಪ್ರಪೋಸಲ್ ಗೆ ನವೀನ್ ಅಷ್ಟಾಗಿ ರಿಯಾಕ್ಟ್ ಮಾಡಿಲ್ಲಾ ಅಂದರೂ ಸಹ ಟಾಸ್ಕ್ ವೊಂದರಲ್ಲಿ ಸೋನು ಕಾಲ ಮೇಲೆ ನವೀನ್ ನಿದ್ದೇ ಮಾಡಿದ್ದು, ಜರ್ಕೀನ್ ಹೊದಿಸಿದ್ದು ಇವೆಲ್ಲವನ್ನೂ ಪರಿಗಣಿಸಿದರೆ ಎಲ್ಲೋ ಒಂದು ಕಡೆ ನವೀನ್ ಅವರಿಗೂ ಸೋನು ಮೇಲೆ ಮನಸಿರಬಹುದು ಎನಿಸದೇ ಇರದು. ಆದರೆ ವೈಯಕ್ತಿ ವಿಚಾರವನ್ನು ನೇರವಾಗಿ ಹೇಳಿದ ಸೋನು ಹಾಗೂ ಅದನ್ನ ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ನಿರಾಕರಿಸಿದ್ದು ಇಬ್ಬರಿಗಗೂ ಪ್ಲಸ್ ಪಾಯಿಂಟ್ ಆಗಬಹುದು. ಹೀಗೆ ಇವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿ ಮುಂದುವರೆದರೆ, ಚೆನ್ನಾಗಿ ಆಟದ ಕಡೆಗೆ ಗಮನ ಹರಿಸಿದ್ದೇ ಆದರೆ ಬಿಗ್ ಬಾಸ್ ಮನೆಯ ವಿಜೇತರ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಸೇರಬಹುದು.

ರಶ್ಮಿ ಅವರ ಬಗ್ಗೆ ಹೇಳಲೇ ಬೇಕಿಲ್ಲ. ಟಾಸ್ಕ್ ವಿಚಾರವನ್ನು ಟಾಸ್ಕ್ ಆಗಿ ತೆಗೆದುಕೊಂಡಿಲ್ಲ ಅನ್ನೋ ವಿಚಾರ ಅವರ ಜರ್ನಿಗೆ ಸ್ವಲ್ಪ ತಡೆಯಾಗಬಹುದು ಅನಿಸುತ್ತದೆ. ಕೆಲವು ವಿಚಾರಗಳನ್ನ ಮನೆಯ ಸ್ಪರ್ಧಿಗಳಿಗೆಲ್ಲಾ ಹೇಳಿ ಅವರಿಂದ ರಿಯಾಕ್ಷನ್ ಪಡೆಯುವುದಕ್ಕೆ, ಮನೆಯ ಕೆಲಸಗಳಿಂದ ಜಾರಿಕೊಳ್ಳಲು ಪ್ರಯತ್ನಿಸಿದ್ದಕ್ಕೆ ಮನೆಯಿಂದ ಕೆಲ ಸ್ಪರ್ಧಿಗಳು ರಶ್ಮಿಯವರನ್ನ ಎಲಿಮಿನೇಟ್ ಕೂಡ ಮಾಡಿದ್ದರು. ಆದರೆ ಟಾಸ್ಕ್ ವಿಚಾರಕ್ಕೆ ಒಳ್ಳೆದು ಕೆಟ್ಟದ್ದು ಅನ್ನೋ ಭಾವನೆ ತೋರುವುದರಿಂದ ಬಿಗ್ ಬಾಸ್ ಮನೆಯಿಂದ ದೂರ ಉಳಿಯಬಹುದಾ..? ಅನ್ನೋ ಅನುಮಾನ ಇದೆಯಾದರೂ ಅವರು ಇದನ್ನೆಲ್ಲಾ ಬಿಟ್ಟು ಮುಂದಿನ ದಿನಗಳಲ್ಲಿ ಇದಕ್ಕಿಂತ ಚೆನ್ನಾಗಿ ಸ್ಪರ್ಧಿಸಿದ್ದೇ ಆದರೆ ಬಿಗ್ ಬಾಸ್ ಮನೆಯ ವಿಜೇತರ ಗುಂಪಿಗೆ ಸೇರಬಹುದು.

ಇನ್ನುಳಿದಂತೆ ಮುರುಳಿಯವರು ವಯಸ್ಸಿನಲ್ಲಿ ಹಿರಿಯರಾದರೂ ವಯಸ್ಸಿಗೆ ತಕ್ಕಂತೆ ಕೆಲವು ಬಾರಿ ಮಾತು ಬರುವುದಿಲ್ಲ ಅನ್ನೋದು ಮನೆಯ ಕೆಲ ಸ್ಪರ್ಧಿಗಳ ವಾದ. ಬಹುಬೇಗ ಕೋಪಕೊಂಡು ರೇಗಾಡಿಬಿಡ್ತಾರೆ. ನ್ಯಾಯಧೀಶರಾದಾಗ ಸೋನು ಮೇಲೆ ರೇಗಾಡಿದ್ದು, ನಿನ್ನೆ ಟಾಸ್ಕ್ ನಲ್ಲೂ ಅವರು ಆ್ಯಂಡಿ ಮತ್ತು ನಯನ ವಿರುದ್ಧ ರೇಗಾಡಿದ್ದು ಹೀಗೆ ಕೆಲ ಉದಾಹರಣೆಗಳಿವೆ. ಟಾಸ್ಕ್ ವಿಚಾರಕ್ಕೆ ಒಳ್ಳೆ ಪ್ರದರ್ಶನ ನೀಡಿದರೂ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಮುರುಳಿಯವರು ಮುಂದಾಗಿರುತ್ತಾರೆ. ಹೀಗಾಗಿ ಕೆಲ ಸಣ್ಣ ಪುಟ್ಟ ವಿಚಾರಗಳಲ್ಲಿ ಇವರನ್ನ ಅಲ್ಲಗಳಿದರೂ ಬಿಗ್ ಬಾಸ್ ವಿಜೇತರ ಪಟ್ಟಿಗೆ ಇವರನ್ನ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಇನ್ನೂ ನಯನ.. ಭ್ರಷ್ಟ ಪೊಲೀಸ್ ಅಧಿಕಾರಿ ಎಂದು ಟಾಸ್ಕ್ ವೊಂದರಲ್ಲಿ ಅವರನ್ನ ಸೆರೆಮನೆಗೆ ಕಳುಹಿಸಲಾಗಿತ್ತು. ಆದರೆ ಟಾಸ್ಕ್ ವಿಚಾರಕ್ಕೆ ಅವರು ಮಾಡಿದ್ದು ಸರಿಯೇ ಆದರೂ ಮನೆಯ ಸ್ಪರ್ಧಿಗಳಿಗೆ ಅವರು ಬೇಸರ ತಂದಿದ್ದು ನಿಜ. ನಯನ ಅವರು ವೈಯಕ್ತಿಕವಾಗಿ ತಪ್ಪಾಗಿ ಕಂಡಿಲ್ಲ ಅನ್ನೋ ಭಾವನೆ ವೀಕ್ಷರ ಮನದಲ್ಲಿದೆ. ಮನೆಯಲ್ಲಿ ತಮ್ಮ ಹೆಸರನ್ನ ಹಾಳುಮಾಡಿಕೊಂಡಿರುವ ಉದಾಹರಣೆಗಳು ಕಡಿಮೆ. ಹೀಗಾಗಿ ಹೀಗೆ ಆಟದ ಕಡೆಗೆ ಹಾಗೂ ವೀಕ್ಷಕರನ್ನು ಮನರಂಜಿಸುವ ಕಡೆಗೆ ಹೆಚ್ಚು ಗಮನ ಹರಿಸಿದರೆ ಇವರು ಕೂಡ ಬಿಗ್ ಬಾಸ್ ಮನೆಯ ವಿಜೇತರ ಪಟ್ಟಿಯಲ್ಲಿ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಧನರಾಜ್ ಅವರನ್ನೂ ಕೂಡ ಆಟದಲ್ಲಿ ಮತ್ತು ನಿರ್ಣಯ ತೆಗೆದುಕೊಳ್ಳುವಲ್ಲಿ ನಯನ ಅವರಿಗೆ ಹೋಲಿಸಬಹುದು. ಕೆಲವೊಂದು ಟಾಸ್ಕ್ ವಿಚಾರದಲ್ಲಿ ಅವರನ್ನ ಮನೆಯ ಸ್ಪರ್ಧಿಗಳು ತಪ್ಪಾಗಿ ಭಾವಿಸಿದರೂ ವೈಯಕ್ತಿಕವಾಗಿ ಹೆಸರನ್ನ ವೀಕ್ಷಕರಲ್ಲಿ ಹಾಳು ಮಾಡಿಕೊಂಡಿಲ್ಲ.  ಆಟವನ್ನೂ ಚೆನ್ನಾಗಿ ಆಡುತ್ತಿದ್ದಾರೆ ಅನ್ನೋ ಭಾವನೆ ವೀಕ್ಷಕರಲ್ಲಿದೆ. ಮನೆಯ ಹಾಗೂ ವೀಕ್ಷಕರ ಮನ ಗೆದ್ದು ಮುಂದಿನ ದಿನಗಳಲ್ಲಿ ಚೆನ್ನಾಗಿ ಆಟ ಆಡಿದರೆ ಇವರೂ ಕೂಡ ಬಿಗ್ ಬಾಸ್ ಮನೆಯ ವಿಜೇತರ ಪಟ್ಟಿಯಲ್ಲಿ ಸೇರಿಕೊಳ್ಳಬಹುದು.

ಒಟ್ಟಾರೆ ಹೇಳುವುದಾದರೆ ಕೆಲವು ವೈಯಕ್ತಿಕ ವಿಚಾರಗಳ ನಡುವೆ ಬಿಗ್ ಬಾಸ್ ಮನೆಯಲ್ಲಿ ಯಾರು ಚೆನ್ನಾಗಿ ಆಡುತ್ತಾರೋ ವೀಕ್ಷಕರ ಮನ ಗೆದ್ದು ಹೆಚ್ಚಿನ ಮತ ಪಡೆಯುತ್ತಾರೋ ಅವರೇ ಬಿಗ್ ಬಾಸ್ ಮನೆಯ ವಿಜೇತರಾಗಲು ಸಾಧ್ಯ. ಸದ್ಯದ ದಿನಗಳಲ್ಲಿ ಮುರುಳಿ, ಧನರಾಜ್, ನಯನ, ನವೀನ್ ಹಾಗೂ ರಶ್ಮಿ ಅವರ ಹೆಸರುಗಳು ವಿಜೇತರ ಪಟ್ಟಿಯಲ್ಲಿ ಎದ್ದು ಕಾಣುತ್ತಿವೆ. ಆದರೆ ಇನ್ನುಳಿದ ದಿನಗಳಲ್ಲಿ ಇವರು ಹೇಗೆ ಪ್ರದರ್ಶನ ನೀಡುತ್ತಾರೆ ಅನ್ನೋದು ಮುಖ್ಯ. ಒಂದು ವೇಳೆ ಇವರುಗಳು ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡಿದ್ದೇ ಆದರೆ ವಿಜೇತರ ಪಟ್ಟಿಯಲ್ಲಿ ಪ್ರತಿ ಸ್ಪರ್ಧಿಗಳಾಗುವುದು ಖಂಡಿತ. ಕಳಪೆ ಪ್ರದರ್ಶನ ನೀಡಿದ್ದೇ ಆದರೆ ಇನ್ನುಳಿದ ಸದಸ್ಯರಾದ ಶಶಿ, ಜಯಶ್ರೀ, ಆ್ಯಂಡಿ ವಿಜೇತರ ಪಟ್ಟಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪೈಪೋಟಿ ನಡೆಸಬಹುದು. ಇದೆಲ್ಲದಕ್ಕೂ ಉತ್ತರ ಪಡೆಯಲು ನಾವು ಇನ್ನೂ ಕೆಲ ವಾರಗಳ ಕಾಲ ಕಾಯಲೇಬೇಕು.

Leave a Reply

Your email address will not be published.

Social Media Auto Publish Powered By : XYZScripts.com