Bigg Boss 6 : ಮನೆಯ ಸ್ಪರ್ಧಿಗಳ ಸೂಪರ್ ಗೇಮ್ ಪ್ಲಾನ್ : ಅಕ್ಷ್-ರಾಕಿ ಫೂಲ್

ಬಿಗ್ ಬಾಸ್ ಅಕ್ಷ್-ರಾಕಿಯನ್ನು ಫೂಲ್ ಮಾಡಲು ಮನೆಯ ಸದಸ್ಯರಿಗೆ ಒಂದು ಟಾಸ್ಕ್ ನೀಡಿರುತ್ತಾರೆ. ಇದನ್ನ ಸರಿಯಾಗಿ ಬಳಸಿಕೊಂಡ ಮನೆಯ ಸದಸ್ಯರು ಅಕ್ಷ್-ರಾಕಿಯನ್ನ ಫೂಲ್ ಮಾಡಿದ್ದು ತುಂಬಾನೇ ಇಂಟ್ರಸ್ಟಿಂಗ್..

ಹೌದು.. ಮನೆಯ ಎಲ್ಲಾ ಸದ್ಯರು ಸೇರಿ ಅಕ್ಷ್-ರಾಕಿಯನ್ನು ಫೂಲ್ ಮಾಡಲು ಗೇಮ್ ವೊಂದನ್ನ ರೆಡಿ ಮಾಡ್ತಾರೆ. ಅದುವೇ ಮನೆಯಿಂದ ಒಬ್ಬ ಸದಸ್ಯರನ್ನ ಎಲಿಮಿನೇಟ್ ಮಾಡಬೇಕು. ಆ ಸದಸ್ಯರು ಮನೆಯಿಂದ ಹೊರಹೋಗಬೇಕು. ಹೀಗೆ ಮನೆಯ ಸ್ಪರ್ಧಿಗಳು ಎಲಿಮಿನೇಟ್ ಮಾಡಿದ್ದು ಅಕ್ಷತಾಳನ್ನ. ಆಗಲೇ ಶುರುವಾಗಿದ್ದು ಆಟ.

ಅಕ್ಷತಾ ಮನೆಯಿಂದ ಹೊರಹೋಗುತ್ತಾಳೆ ಎಂದು ತಿಳಿದ ರಾಕೇಶ್ ಪಟ್ಟ ಕಷ್ಟ ಅಷ್ಟಿಸ್ಟಲ್ಲಾ. ಎಲ್ಲರ ಬಳಿ ಹೋಗಿ ಅಕ್ಷತಳನ್ನ ಎಲಿಮಿನೇಟ್ ಮಾಡಬೇಡಿ ಅಂತ ಕೈ ಕಾಲು ಹಿಡಿಯೋದೊಂದೇ ಬಾಕಿ. ಇನ್ನು ಮನೆ ಸ್ಪರ್ಧಿಗಳು ಅಕ್ಷತಾ ಹೆಸರು ಹೇಳುತ್ತಿದ್ದಹಾಗೆ ಅಕ್ಷತಾ ಅಳೋದಕ್ಕೆ ಶುರುಮಾಡಿದ್ದರು.

ಅಕ್ಷ್-ರಾಕಿ ಒದ್ದಾಟ ನರಳಾಟ, ಅಳು ನೋಡಿ ಸುಮ್ಮನಿದ್ದ ಸ್ಪರ್ಧಿಗಳು ಅವರಿಬ್ಬರಿಗೇ ಚೆನ್ನಾಗೇ ಫೂಲ್ ಮಾಡಿದರು. ಕೊನೆಗೆ ಬಿಗ್ ಬಾಸ್ ಮಾತನ್ನ ಕೇಳಿದ ಮೇಲೆ ಅಕ್ಷ್-ರಾಕಿ ತಬ್ಬಿಕೊಂಡು ಅಳತೊಡಗಿದ್ದು ಯಾವ ಪ್ರೇಮಿಗಳಿಗೂ ಕಡೆಮೇ ಇರಲಿಲ್ಲ. ಬಹುಶ: ಅಕ್ಷ್-ರಾಕಿ ಅಗಲಿಕೆಯ ನಂತರದ ದೃಶ್ಯಗಳನ್ನು ಈಗಲೇ ನೋಡಲು ಬಿಗ್ ಬಾಸ್ ಈ ಟಾಸ್ಕ್ ನ್ನ ಸ್ಪರ್ಧಿಗಳಿಗೆ ನೀಡರಬೇಕು ಅನಿಸುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com