Adelaide Test : ಟೀಮ್ಇಂಡಿಯಾ ಬೌಲರ್ಸ್ ಮಿಂಚು – ಆಸೀಸ್‍ಗೆ ಟ್ರಾವಿಸ್ ಹೆಡ್, ಹ್ಯಾಂಡ್ಸ್‌ಕಾಂಬ್‌ ಆಸರೆ

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ  ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ ಬೌಲರ್ಸ್ ಮಿಂಚಿನ ದಾಳಿ ನಡೆಸಿದ್ದಾರೆ. ದಿನದಾಟದ ಅಂತ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 191ಕ್ಕೆ 7 ಕಳೆದುಕೊಂಡಿದ್ದು, ಇನ್ನೂ 59 ರನ್ ಹಿನ್ನಡೆಯಲ್ಲಿದೆ.

ಎರಡನೇ ದಿನದಾಟದ ಮುಕ್ತಾಯದ ವೇಳೆಗೆ 61 ರನ್ ಗಳಿಸಿರುವ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಸ್ಟಾರ್ಕ್ (8) ಅಜೇಯರಾಗುಳಿದಿದ್ದಾರೆ. ಪೀಟರ್ ಹ್ಯಾಂಡ್ಕಾಂಬ್ 34, ಉಸ್ಮಾನ್ ಖವಾಜಾ 28 ಹಾಗೂ ಮಾರ್ಕಸ್ ಹ್ಯಾರಿಸ್ 26 ರನ್ ಗಳಿಸಿದರು. ಭಾರತದ ಪರ ರವಿಚಂದ್ರನ್ ಅಶ್ವಿನ್ 3, ಇಶಾಂತ್ ಶರ್ಮಾ 2 ಹಾಗೂ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

 

Leave a Reply

Your email address will not be published.