2019ರ ಲೋಕಸಭೆ ಚುನಾವಣೆ :  ಪುಣೆಯಲ್ಲಿ ಬಿಜೆಪಿಯಿಂದ ನಟಿ ಮಾಧುರಿ ದೀಕ್ಷಿತ್ ಸ್ಫರ್ಧೆ..?

2019 ರ ಲೋಕಸಭೆ ಚುನಾವಣೆಯಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ಪುಣೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದೇ ವರ್ಷ ಜೂನ್ ತಿಂಗಳಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಅವರು ‘ಸಂಪರ್ಕ್ ಫಾರ್ ಸಮರ್ಥನ್’ ಕಾರ್ಯಕ್ರಮದಲ್ಲಿ ಮಾಧುರಿ ಧೀಕ್ಷಿತ್ ಅವರಿಗೆ ನರೇಂದ್ರ ಮೋದಿ ಸರಕಾರದ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ. ಜೊತೆಗೆ ಲೋಕಸಭಾ ಕ್ಷೇತ್ರಕ್ಕೆ ನಟಿ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಪಿಟಿಐಗೆ ತಿಳಿಸಿದ್ದಾರೆ.

“2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಧುರಿ ದೀಕ್ಷಿತ್ ಅಭ್ಯರ್ಥಿಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಪೂಣೆ ಮಾಧುರಿ ಅವರಿಗೆ ಪುಣೆ ಲೋಕಸಭಾ ಕ್ಷೇತ್ರ ಉತ್ತಮವಾಗಿದೆ” ಎಂದು ಹೇಳಲಾಗಿದೆ. ಅಭ್ಯರ್ಥಿಗಳ ಪಟ್ಟಿ ತಯಾರಿಸಿದ ಬಿಜೆಪಿ ಈ ಪಟ್ಟಿಯಲ್ಲಿ ನಟಿ ಹೆಸರು ಇರುವುದು ಖಚಿತ ಪಡಿಸಿದೆ ಎನ್ನಲಾಗಿದೆ. 51 ವರ್ಷದ ನಟಿ ಮಾಧುರಿ ‘ಹಮ್ ಆಪ್ಕೆ ಹೈ ಕೌನ್..!, ದಿಲ್ ತೋ ಪಾಗಲ್ ಹೈ, ಸಾಜನ್ ಮತ್ತು ದೇವದಾಸ್ ನಂತಹ ಹಲವಾರು ಜನಪ್ರಿಯ ಚಿತ್ರಗಳಲ್ಲಿ ತಮ್ಮದೇ ಆದ ಹೆಸರು ಮಾಡಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಧುರಿ ಸ್ಪರ್ಧಿಸುತ್ತಾರಾ ಎಂದು ಕಾದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com