ಒಂದುಗೂಡಿವೆ ಜಿಯೋ ಮ್ಯೂಸಿಕ್ ಹಾಗೂ ಸಾವನ್ ಏಷ್ಯಾದಲ್ಲೇ ಅತಿದೊಡ್ಡ network…

ಹೊಸ ಏಕೀಕೃತ ವೇದಿಕೆ ಎಲ್ಲ ಆಪ್‌ಸ್ಟೋರ್‌ಗಳಲ್ಲಿ ಹಾಗೂ ರಿio.ಛಿom/ರಿiosಚಿಚಿvಟಿ ಮೂಲಕ ಲಭ್ಯ
45 ಮಿಲಿಯನ್‌ಗೂ ಹೆಚ್ಚಿನ ಹಾಡುಗಳು ಹಾಗೂ ಪ್ರಶಸ್ತಿ ವಿಜೇತ ಒರಿಜಿನಲ್ ಕಂಟೆಂಟ್ ಜೊತೆಗೆ ಗ್ರಾಹಕರಿಗೆ ವೈವಿಧ್ಯಮಯ ಆಡಿಯೋ ಅನುಭವ ನೀಡಲಿದೆ ಜಿಯೋಸಾವನ್
ಏಕೀಕೃತ ಜಿಯೋಸಾವನ್ ವೇದಿಕೆಗೆ ಬರಲಿದ್ದಾರೆ ಸದ್ಯ ಜಿಯೋಮ್ಯೂಸಿಕ್ ಹಾಗೂ ಸಾವನ್ ಬಳಸುತ್ತಿರುವ ಅಷ್ಟೂ ಗ್ರಾಹಕರು
ಜಿಯೋ ಗ್ರಾಹಕರಿಗೆ ಸಿಗಲಿದೆ ಏಕೀಕೃತ ಆಪ್‌ಗೆ ಮುಕ್ತ ಪ್ರವೇಶ
ಮುಂಬಯಿ: ಸಂಗೀತ, ಮೀಡಿಯಾ ಹಾಗೂ ಕಲಾವಿದರಿಗಾಗಿ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇದಿಕೆಯಾದ ‘ಜಿಯೋಸಾವನ್’ ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ಸಾವನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇಂದು ಲೋಕಾರ್ಪಣೆಗೊಳಿಸಿದೆ. ಭಾರತದ ಅತ್ಯಂತ ಜನಪ್ರಿಯ ಮ್ಯೂಸಿಕ್ ಆಪ್ ಜಿಯೋಮ್ಯೂಸಿಕ್ ಹಾಗೂ ಭಾರತದ ಮುಂಚೂಣಿ ಜಾಗತಿಕ ಓವರ್-ದ-ಟಾಪ್ ವೇದಿಕೆ ಸಾವನ್‌ಗಳ ಅಧಿಕೃತ ಏಕೀಕರಣವನ್ನು ಜಿಯೋಸಾವನ್ ಪ್ರತಿನಿಧಿಸಲಿದೆ. ಈ ಹೊಸ ಏಕೀಕೃತ ಜಿಯೋಸಾವನ್ ಆಪ್ ಜಿಯೋ ಆಪ್ ಸ್ಟೋರ್ ಸೇರಿದಂತೆ ಎಲ್ಲ ಆಪ್ ಸ್ಟೋರ್‌ಗಳಲ್ಲಿ, ಜಿಯೋಫೋನ್‌ನಲ್ಲಿ ಹಾಗೂ ತಿತಿತಿ.ರಿio.ಛಿom/ರಿiosಚಿಚಿvಟಿ ಮೂಲಕ ಗ್ರಾಹಕರಿಗೆ ಲಭ್ಯವಾಗಲಿದೆ.

ಮಾರ್ಚ್ 2018ರಲ್ಲಿ, ಸಾವನ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿ ಸೇರ್ಪಡೆಯಾದ ಸಂದರ್ಭದಲ್ಲಿ ಘೋಷಿಸಿದಂತೆ, ಈ ಏಕೀಕೃತ ಸಂಸ್ಥೆಯ ಮೌಲ್ಯ ಒಂದು ಬಿಲಿಯನ್ ಡಾಲರುಗಳಿಗಿಂತ ಹೆಚ್ಚಿದ್ದು ಇದು ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಮೌಲ್ಯಯುತ ಮ್ಯೂಸಿಕ್ ಸ್ಟ್ರೀಮಿಂಗ್ ವೇದಿಕೆಯಾಗಿ, ವಿಶ್ವದಲ್ಲೇ ಅತ್ಯಂತ ಜನಪ್ರಿಯ ವೇದಿಕೆಗಳಲ್ಲೊಂದಾಗಿ ಹೊರಹೊಮ್ಮಿದೆ.

ಸಾವನ್‌ನ ಸ್ಟ್ರೀಮಿಂಗ್ ಮೀಡಿಯಾ ಪರಿಣತಿ ಹಾಗೂ ಜಿಯೋ ಡಿಜಿಟಲ್ ಸೇವೆಗಳ ಇಕೋಸಿಸ್ಟಂ ಒಟ್ಟುಗೂಡಿ ಜಿಯೋಸಾವನ್ ರೂಪುಗೊಂಡಿದೆ. ೨೫೨ ಮಿಲಿಯನ್‌ಗೂ ಹೆಚ್ಚು ಚಂದಾದಾರರೊಡನೆ ಜಿಯೋ ಭಾರತದ ಅತಿದೊಡ್ಡ ಡಿಜಿಟಲ್ ಸೇವೆಗಳ ಜಾಲವಾಗಿದೆ. ಹೊಸ ಏಕೀಕೃತ ಆಪ್ ಅತ್ಯಂತ ವಿಸ್ತಾರವಾದ ಮಾರುಕಟ್ಟೆ ಸಾಧ್ಯತೆಯನ್ನು ಹೊಂದಿದ್ದು ಭಾರತದಲ್ಲಿರುವ ಗ್ರಾಹಕರನ್ನಷ್ಟೇ ಅಲ್ಲದೆ ವಿದೇಶಗಳಲ್ಲಿರುವ ಭಾರತೀಯರನ್ನೂ ತಲುಪಬಲ್ಲದಾಗಿದೆ.

ಏಕೀಕೃತ ಜಿಯೋಸಾವನ್ ಆಪ್‌ನಿಂದ ಗ್ರಾಹಕರು ಆಪ್‌ನೊಳಗಿಗೆ ಉತ್ಪನ್ನಗಳು ಹಾಗೂ ಸಂಗೀತದ ಹೊಸ ಅನುಭವಗಳನ್ನು ನಿರೀಕ್ಷಿಸಬಹುದಾಗಿದೆ. ಇಂಟರಾಕ್ಟಿವ್ ಲಿರಿಕ್ಸ್ ಸೌಲಭ್ಯ, ಸ್ಥಳೀಯ ಭಾಷೆಗಳಲ್ಲಿನ ಮಾಹಿತಿ, ಕಾನ್ಸರ್ಟ್ ಹಾಗೂ ಲೈವ್ ಕಾರ್ಯಕ್ರಮಗಳೊಡನೆ ಜೊತೆಗೂಡುವಿಕೆ ಮಾತ್ರವೇ ಅಲ್ಲದೆ ವಿಶಿಷ್ಟ ವೀಡಿಯೋ ಕಂಟೆಂಟ್ ಕೂಡ ಮುಂದಿನ ಕೆಲ ತಿಂಗಳುಗಳಲ್ಲಿ ಈ ವೇದಿಕೆಯ ಮೂಲಕ ದೊರಕಲಿವೆ.

ಜಾಹೀರಾತು ಬೆಂಬಲಿತ ಆವೃತ್ತಿ ಎಲ್ಲ ಗ್ರಾಹಕರಿಗೂ ದೊರಕಲಿರುವ ಈ ಸೇವೆಯನ್ನು ಭಾರತದಲ್ಲಿ ಫ್ರೀಮಿಯಂ ಮಾದರಿಯಲ್ಲಿ ನೀಡಲಾಗುತ್ತಿದೆ. ಜಿಯೋ ಗ್ರಾಹಕರು ಏಕೀಕೃತ ಆಪ್‌ಗೆ ಮುಕ್ತ ಪ್ರವೇಶ ಪಡೆಯಲಿದ್ದಾರೆ. ಹೆಚ್ಚುವರಿಯಾಗಿ, ಈ ಲೋಕಾರ್ಪಣೆಯ ಅಂಗವಾಗಿ, ಜಿಯೋ ಗ್ರಾಹಕರು ಈ ಸ್ಟ್ರೀಮಿಂಗ್ ಸೇವೆಯ ಪ್ರೀಮಿಯಂ ಆವೃತ್ತಿಯಾದ ಜಿಯೋಸಾವನ್ ಪ್ರೋ ಅನ್ನು 90 ದಿನಗಳ ಕಾಲ ಉಚಿತವಾಗಿ ಬಳಸಬಹುದಾಗಿದೆ.

ಜಿಯೋಸಾವನ್ ಲೋಕಾರ್ಪಣೆಯ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, “ತಂತ್ರಜ್ಞಾನದ ವಿನೂತನ ಆವಿಷ್ಕಾರಗಳನ್ನು ಕ್ಷಿಪ್ರವಾಗಿ ಅನುಭವಿಸುತ್ತಿರುವ, ಡಿಜಿಟಲ್ ಸೇವೆಗಳನ್ನು ಹೆಚ್ಚುಹೆಚ್ಚಾಗಿ ಬಳಸುತ್ತಿರುವ, ಜಾಗತಿಕ ಮಟ್ಟದ ಡಿಜಿಟಲ್ ಮ್ಯೂಸಿಕ್ ಉದ್ದಿಮೆ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಭಾರತದ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ಜಿಯೋಸಾವನ್ ಒಂದು ಮಹತ್ವದ ತಿರುವು ನೀಡಿದೆ. ಜಿಯೋನ ಆಧುನಿಕ ಡಿಜಿಟಲ್ ಸೇವೆಗಳ ಮೂಲಸೌಕರ್ಯ ಹಾಗೂ ವ್ಯಾಪಕ ಬಳಕೆದಾರ ಸಮುದಾಯವನ್ನು ಬಳಸಲಿರುವ ಜಿಯೋಸಾವನ್ ಭಾರತದ ಅತಿದೊಡ್ಡ ಸ್ಟ್ರೀಮಿಂಗ್ ವೇದಿಕೆಯಾಗಲಿದೆ” ಎಂದು ಹೇಳಿದರು.

ಭಾರತದ ಅತ್ಯಂತ ಶಕ್ತಿಶಾಲಿ ಡಿಜಿಟಲ್ ಸೇವೆಗಳ ಜಾಲದ ಸಂಪನ್ಮೂಲಗಳು ಹಾಗೂ ಸಂಪರ್ಕದ ಬೆಂಬಲ ಪಡೆದುಕೊಂಡು, ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್ ಹಾಗೂ ಕಲಾವಿದರ ಅಭಿವೃದ್ಧಿ ವೇದಿಕೆಯಾದ ಆರ್ಟಿಸ್ಟ್ ಒರಿಜಿನಲ್ಸ್ (ಏಓ) ಅನ್ನು ಜಿಯೋಸಾವನ್ ಮುಂದೆಯೂ ಬೆಳೆಸಲಿದೆ. ಒರಿಜಿನಲ್ ಆಡಿಯೋ ಮನರಂಜನೆಯ ಅಭಿವೃದ್ಧಿ, ಮಾರ್ಕೆಟಿಂಗ್ ಹಾಗೂ ವಿತರಣೆಗೆ ಹೊಸ ಭಾಷ್ಯ ಬರೆದಿರುವ ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್, ‘#ನೋಫಿಲ್ಟರ್‌ನೇಹಾ’, ‘ಥ್ಯಾಂಕ್ ಯೂ ಫಾರ್ ಶೇರಿಂಗ್’, ‘ಟೇಕ್ 2 ವಿತ್ ಅನುಪಮಾ ಆಂಡ್ ರಾಜೀವ್’, ‘ಟಾಕಿಂಗ್ ಮ್ಯೂಸಿಕ್’ ಹಾಗೂ ‘ಕಹಾನಿ ಎಕ್ಸ್‌ಪ್ರೆಸ್ ವಿತ್ ನೀಲೇಶ್ ಮಿಸ್ರಾ’ದಂತಹ ಭಾರತದ ಅತ್ಯಂತ ಜನಪ್ರಿಯ ಆಡಿಯೋ ಪಾಡ್‌ಕಾಸ್ಟ್‌ಗಳನ್ನು ನಿರ್ಮಿಸಿ ವಿತರಿಸುತ್ತಿದೆ.

ಸಾವನ್‌ನ ಸಹ-ಸ್ಥಾಪಕರಾದ ರಿಷಿ ಮಲ್ಹೋತ್ರಾ, ಪರಮ್‌ದೀಪ್ ಸಿಂಗ್ ಹಾಗೂ ವಿನೋದ್ ಭಟ್ ತಮ್ಮ ನಾಯಕತ್ವದ ಸ್ಥಾನಗಳಲ್ಲಿ ಮುಂದುವರೆಯಲಿದ್ದು ಸಂಸ್ಥೆಯ ಬೆಳವಣಿಗೆಯನ್ನು ಮುನ್ನಡೆಸಲಿದ್ದಾರೆ. ಅಮೆರಿಕಾದ ಮೌಂಟನ್‌ವ್ಯೂ ಹಾಗೂ ನ್ಯೂಯಾರ್ಕ್ ಮತ್ತು ಭಾರತದ ಬೆಂಗಳೂರು, ಗುರುಗ್ರಾಮ್ ಹಾಗೂ ಮುಂಬಯಿಯಲ್ಲಿರುವ ತಮ್ಮ ಐದು ಜಾಗತಿಕ ಕಚೇರಿಗಳ ಮೂಲಕ ಜಿಯೋಸಾವನ್‌ನ 200ಕ್ಕೂ ಹೆಚ್ಚು ಉದ್ಯೋಗಿಗಳೂ ತಮ್ಮ ಕೆಲಸ ಮುಂದುವರೆಸಲಿದ್ದಾರೆ.

Leave a Reply

Your email address will not be published.