ಬುಲಂದ್ ಶಹರ್ ಹಿಂಸಾಚಾರ : ಹತ್ಯೆಗೊಳಗಾದ ಇನ್ಸ್ಪೆಕ್ಟರ್ ಸುಬೋಧ್ ಕುಟುಂಬಕ್ಕೆ ಪರಿಹಾರ

ಗೋ ಹತ್ಯೆ ವಿಚಾರವಾಗಿ ಉತ್ತರಪ್ರದೇಶದ ಬುಲಂಡ್ಶಹರ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ವರ್ಮಾ ಸಾವನ್ನಪ್ಪಿದ್ದರು. ಸದ್ಯ ಪೊಲೀಸ್ ಇನ್ ಸ್ಪೆಕ್ಟರ್ ಸುಬೋಧ್ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗುವುದು ಎಂದು ಉತ್ತರ ಪ್ರದೇಶದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹೇಳಿದ್ದಾರೆ. ಇದರೊಂದಿಗೆ ಸುಬೋಧ್ ಅವರು ಮಾಡಿದ್ದ 30 ಲಕ್ಷ ಮನೆ ಸಾಲ ಭರಿಸುವ ಮೂಲಕ ಅವರ ಕುಟುಂಬದ ಒಬ್ಬರಿಗೆ ನೌಕರಿ ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಘಟನೆಯ ವಿವರ :-

ಶ್ಯಾನಾ ಪ್ರದೇಶದ ಬಯಲೊಂದರಲ್ಲಿ ಹಸುವಿನ ಮೃತದೇಹ ಕಂಡುಬಂದಿತ್ತು ಹಾಗೂ ರಸ್ತೆಯೊಂದನ್ನು ಬಂದ್ ಮಾಡಲಾಗಿತ್ತು ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಗೊಂಡಿತು. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆಯನ್ನು ತೆರವುಗೊಳಿಸಲು ಪ್ರಯತ್ನಿಸಿದರು. ಆಗ ಪೊಲೀಸರತ್ತ ಕಲ್ಲು ತೂರಾಟವೂ ನಡೆಯಿತು. ಗುಂಪು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಇದರಿಂದ ಉದ್ರಿಕ್ತಗೊಂಡ ಗುಂಪೊಂದು ಪೊಲೀಸ್ ಠಾಣೆಯತ್ತ ದಾಳಿ ನಡೆಸಿತು.

ಉದ್ರಿಕ್ತರ ದಾಳಿಗೆ ಸಿಲುಕಿದ ಪೊಲೀಸ್ ಇನ್ಸ್ಪೆಕ್ಟರ್ ಸುಬೋಧ್ ವರ್ಮಾ ಹಾಗೂ ಸ್ಥಳೀಯ ಯುವಕನೊಬ್ಬ ಮೃತಪಟ್ಟಿದ್ದಾರೆ. ಪೊಲೀಸ್ ವ್ಯಾನೊಂದಕ್ಕೂ ಬೆಂಕಿ ಹಚ್ಚಲಾಗಿತ್ತು. ಸದ್ಯ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೋಮು ಸಂಘರ್ಷ ನಡೆಸುವ ಉದ್ದೇಶದಿಂದ ನಡೆಸಿದ್ದ ಪೂರ್ವಯೋಜಿತ ಕೃತ್ಯ ಇದಾಗಿತ್ತೇ ಎಂಬ ಸಂಶಯ ಇದೀಗ ವ್ಯಕ್ತವಾಗಿದ್ದು ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com