ಅಂಬಿ ಸ್ವಗ್ರಾಮದಲ್ಲಿ ಗ್ರಾಮಸ್ಥರಿಂದ ಪುಣ್ಯತಿಥಿ : ಅಭಿಮಾನಿಗಳಿಂದ ಕೇಶ ಮುಂಡನ

ಅಂಬರೀಷ್ ಅವರ ಸ್ವಕ್ಷೇತ್ರವಾದ ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಅಂಬರೀಷ ಪುಣ್ಯತಿಥಿಯನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಮನೆಯ ಮಗನನ್ನು ಕಳೆದುಕೊಂಡಂತೆ ಸುಮಾರು 5 ರಿಂದ 8 ಅಭಿಮಾನಿಗಳು ಕೇಶ ಮುಂಡನ ಮಾಡಿಸಿಕೊಂಡು ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ಜೊತೆಗೆ ಅಂಬಿ ಅವರ ಸ್ವಗ್ರಾಮದ ಕೆರೆಯ ಪಕ್ಕದಲ್ಲಿ ಅಂಬಿ ಅವರ ಪಾರ್ಥೀವ ಶರೀರ ಸಟ್ಟ ಭಸ್ಮವನ್ನು ತಂದು ಅಂಬಿ ಸಮಾಧಿ ನಿರ್ಮಾಣ ಮಾಡಿದ್ದಾರೆ. ಈ ಸಮಾಧಿಗೆ 11.30 ರ ಸುಮಾರಿಗೆ ಪೂಜೆ ಪುನಸ್ಕಾರಗಳು ನೆರವೇರುತ್ತವೆ. ನೈವೆಧ್ಯಕ್ಕೆಂದು ನಾನಾ ತರದ ಮುದ್ದೆ, ಚಕುಲಿ, ಒಬ್ಬಟ್ಟು, ಲಾಡು, ಪೂರಿ, ರಾಹಿ ರೊಟ್ಟಿ ಇನ್ನಿತರ ಖಾದ್ಯಗಳನ್ನು ತಯಾರಿಸಿದರೆ, ಬಿಸಿಬೇಳೆ ಬಾತ್, ಅನ್ನ-ಸಾಂಬರ್, ಕೀರು, ಪಲ್ಯ, ಅವರೇ ಕಾಳು ಕೂಟ್ ಇತ್ಯಾದಿ ಖಾದ್ಯಗಳನ್ನು ಸುಮಾರು 5 ಸಾವಿರ ಅಭಿಮಾನಿಗಳ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com