ಸಿದ್ಧು ಸರ್ಕಾರದಲ್ಲಿ 35,000 ಕೋಟಿ ಭ್ರಷ್ಟಾಚಾರ : ಮಾಜಿ ಸಿಎಂ ಸಿದ್ದುಗೆ ಸಿಎಜಿ ವರದಿ ಶಾಕ್..

ಮಾಜಿ ಸಿಎಂ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಬರೋಬ್ಬರಿ 35,000 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಸಿಎಜಿ  ವರದಿ ಮೂಲಕ ತಿಳಿದುಬಂದಿದೆ. ಸರ್ಕಾರದ ಹಣ ಬಳಕೆ ಮಾಡಬೇಕಾದರೆ  ಶಾಸಕಾಂಗದ ಅನುಮೋಧನೆ ಪಡೆಯಬೇಕು. ಆದರೆ ಈ ಕೆಲಸ ಮಾಡದೆ ಮಾಜಿ ಸಿಎಂ ಸರ್ಕಾದ ಹಣ ಬಳಕೆ ಮಾಡಿದ್ದಾರೆ.

788 ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ 1,433 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಆದರೆ ಯಾವುದೇ ಕೆರೆಗಳನ್ನ ತುಂಬಿಸಲಾಗಿಲ್ಲ. ಕೆರೆಗಳು ಬರಿದಾಗಿವೆ. ಜೊತೆಗೆ ಲ್ಯಾಪ್ ಟಾಪ್ ವಿಚಾರವಾಗಿ 115 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ. ಈ ಹಣ ಎಲ್ಲಿಗೆ ಹೋಯಿತು ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಕೇಳಿದ್ದಾರೆ.

ಆಡಾಳಿತಾತ್ಮಕ ಅನುಮೋದನೆ ಇಲ್ಲದೆ ಸಾವಿರಾರು ರೂಪಾಯಿಹಣವನ್ನು ಕಾಮಗಾರಿಗಳಿಗಾಗಿ ಖುರ್ಚು ಮಾಡಲಾಗಿದೆ. ವಿವಿಧ ಕೆಲಸಗಳಿಗೆ ಬಿಡುಗಡೆ ಮಾಡಿದ ಹಣಕ್ಕೆ ತಾಳೆ ಬರುತ್ತಿಲ್ಲ. ಹೀಗಾಗಿ ಇದಕ್ಕೆಲ್ಲಾ ಸುಳ್ಳು ಲೆಕ್ಕ ನೀಡಲಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಿಚಾರಣೆ ನಡೆಯಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com