IFH World Cup Hockey : ಚಾಂಪಿಯನ್ ಪಟ್ಟಕ್ಕೇರುವ ಕನಸಿನಲ್ಲಿ ಭಾರತ ತಂಡ..

ಹಾಕಿ ಪ್ರೀಯರ್ ಚಿತ್ತ  ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಹಾಕಿ ಫಿವರ್ ಹೆಚ್ಚಾಗುತ್ತಿದೆ. 16 ದೇಶಗಳು ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದು, 4 ಗುಂಪುಗಳಲ್ಲಿ ಕಾದಾಟ ನಡೆಸುತ್ತಿವೆ. ಭಾರತ ಸಹ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಎಲ್ಲರ ಚಿತ್ತ ಕದ್ದಿದೆ.

ಸಿ ಗುಂಪಿನಲ್ಲಿ ಭಾರತ, ಬೆಲ್ಜಿಯಂ, ಕೆನಡಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಿವೆ. ಈ ಬಿಗ್ ಫೈಟ್ ನೋಡಿದ ಅಭಿಮಾನಿಗಳು ಫುಲ್ ಖುಷ್. ಸಂಘಟಿತ ಆಟದ ಮೇಲೆ ಬಲವನ್ನು ಇಟ್ಟುಕೊಂಡಿರುವ ಭಾರತ ತಂಡ, ಈ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಾಣ್ತಾ ಇದೆ.

ಆಡಿರುವ 2 ಪಂದ್ಯಗಳಲ್ಲಿ 1 ಜಯ ಹಾಗೂ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿರುವ ಭಾರತ, ಕೊನೆಯ ಪಂದ್ಯದಲ್ಲಿ ಜಯದ ಕನಸು ಕಾಣ್ತಾ ಇದೆ. ಈ ಪಂದ್ಯದಲ್ಲಿ ಗೆದ್ದಲ್ಲಿ ಭಾರತ ಮತ್ತೆ ಗುಂಪು ವಿಭಾಗದಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುತ್ತದೆ. ಇಲ್ಲದೆ ಇದ್ದಲ್ಲಿ ಬೇರೆ ಪಂದ್ಯಗಳ ಫಲಿತಾಂಶದ ಮೇಲೆ ಬ್ಲ್ಯೂ ಬಾಯ್ಸ್ ಚಿತ್ತ ನೆಡಬೇಕಾಗುತ್ತದೆ.

ಯುವ ಹಾಗೂ ಅನುಭವಿ ಆಟಗಾರರನ್ನು ಹೊಂದಿರುವ ಟೀಮ್ ಇಂಡಿಯಾ ರಕ್ಷಣಾತ್ಮಕ, ಮುಂಪಡೆ, ಆಕ್ರಮಣಕಾರಿ ವಿಭಾಗದಲ್ಲಿ ಬಲಾಡ್ಯವಾಗಿದೆ. ಟೂರ್ನಿಯಲ್ಲಿ ಸಿರ್ಮನ್ ಜಿತ್ ಸಿಂಗ್ ಮೂರು ಗೋಲು ಬಾರಿಸಿ ಎಲ್ಲರ ಚಿತ್ತ ಕದ್ದಿದೆ.

ಎ ಗುಂಪಿನಲ್ಲಿ ಅರ್ಜೆಂಟೀನಾ, ನ್ಯೂಜಿಲೆಂಡ್ ತಂಡಗಳು ಮುಂದಿನ ಹಂತದ ಮೇಲೆ ಕಣ್ಣು ನೆಟ್ಟರೆ, ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ಸುಲಭವಾಗಿ ನಾಕೌಟ್ ಹಂತ ಪ್ರವೇಶಿಸಬಹುದು. ಡಿ ಗುಂಪಿನಲ್ಲಿ ಜರ್ಮನ್ ಹಾಗೂ ನೆದರ್ ಲ್ಯಾಂಡ್ ಮುಂದಿನ ಹಂತದ ಕನಸು ಕಾಣ್ತಾ ಇವೆ.

ಯಾವೆಲ್ಲಾ ತಂಡಗಳು ಮುಂದಿನ ಹಂತ ತಲುಪುತ್ತವೆ..? ಯಾರೆಲ್ಲಾ ಪ್ಲೇಯರ್ಸ್ ಮಿಂಚು ಹರಿಸುತ್ತಾರೆ ಎಂಬ ಬಗ್ಗೆ ಕುತೂಹಲ ಮನೆ ಮಾಡಿದೆ.

Leave a Reply

Your email address will not be published.