Health : ಎಚ್ ಐ ವಿ ಮಹಿಳೆ ಕೆರೆಗೆ ಬಿದ್ದು ಸಾವು, ಗ್ರಾಮಸ್ಥರು ಮಾಡಿದ್ದೇನು..?

ಎಚ್ ಐ ವಿ ಎಂಬ ಮಹಾಮಾರಿಯ ಹೆಸರು ಕಿವಿಯ ಪರದೆಯ ಮೇಲೆ ಬೀಳುತ್ತಲೆ, ಭಯ ಶುರುವಾಗುತ್ತದೆ. ಭಯಾನಕ ರೋಗಕ್ಕೆ ಉಪಚಾರ ಕಷ್ಟ.  ರೋಗಕ್ಕೆ ತುತ್ತಾದ ಜನ ಜೀವನದಲ್ಲಿ ಜಿಗುಪ್ಸೆ ಹೊಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂತಹದ್ದೇ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬನಲ್ಲಿ ನಡೆದಿದೆ. ಎಚ್ ಐ ವಿ ಪೀಡಿತ ಮಹಿಳೆ ಮನ ನೊಂದು ಊರಿನ ಕೆರೆಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ.

ಊರಿನ ಸುಮಾರು ಜನ  ಈ ಕೆರೆಯ ನೀರನ್ನೇ ಬಳೆಸುತ್ತಿದ್ದರು. ಅಲ್ಲದೆ ಈ ಕೆರೆ, ಮೊರಬ ಜನರ ದಾಹ ನೀಗಿಸುತ್ತಿತ್ತು. ಆದ್ರೆ, ಈ ಕೆರೆಯಲ್ಲಿ ಎಚ್ ಐ ವಿ ಪೀಡಿತೆ ಬಿದ್ದು ಸಾವನ್ನಪ್ಪಿದ್ದರಿಂದ ಗ್ರಾಮದ ಜನ ಕೆರೆಯ ನೀರನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ಮಹಿಳೆ ಕೆರೆಗೆ ಬಿದ್ದು ಎರಡು ದಿನ ಕಳೆದ ಮೇಲೆ ಶವ ನೀರಿನಲ್ಲಿ ತೇಲುತ್ತಿರೋದನ್ನು ಗಮನಿಸಿದ, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಗೆ ಎಚ್ ಐ ವಿ ಕಾಯಿಲೆ ಇರೋದ್ರಿಂದ, ಅವಳಲ್ಲಿನ ವೈರಸ್ ಗಳು ಈ ಕೆರೆಯಲ್ಲಿ ಸೇರಿಕೊಂಡಿರಬಹುದು ಎಂಬ ಸಂಶಯದ ಮೇಲೆಗೆ ಗ್ರಾಮದ ಜನ ಕೆರೆಯ ನೀರನ್ನು ಸಂಪೂರ್ಣ ಖಾಲಿ ಮಾಡಲು ಮುಂದಾಗಿದ್ದಾರೆ.

ಗ್ರಾಮಸ್ಥರು 20 ಪಂಪ್ ಸೆಟ್ ಗಳ ಮೂಲಕ 20 ಎಕರೆ ವಿಸ್ತಾರವಿರುವ ಕೆರೆ ನೀರನ್ನು ಖಾಲಿ ಮಾಡಲು ಹಗಲಿರುಳ ಶ್ರಮಿಸುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯ ಪಂಚಾಯಿತ್ ಮೊದಲು ಕೆರೆಯ ನೀರನ್ನು ಖಾಲಿ ಮಾಡಲು ಒಪ್ಪಿರಲಿಲ್ಲ. ಅಲ್ಲದೆ ಕೆರೆಯ ನೀರಿನ ತಪಾಸಣೆ ಸಹ ಮಾಡಲಾಗಿತ್ತು. ಆದ್ರೂ ಜನ ಭಯ ಪಡುತ್ತಿರೋದನ್ನು ಮನಗೊಂಡು ಪಂಚಾಯತ್ ಕೆರೆ ಖಾಲಿ ಮಾಡಲು ಒಪ್ಪಿಗೆ ನೀಡಿದೆ.

Leave a Reply

Your email address will not be published.