ರೆಬೆಲ್‍ಸ್ಟಾರ್ ಗೆ ದೇವರ ಪಟ್ಟ ಕೊಟ್ಟ ಫ್ಯಾನ್ – ರಾಮನಗರದ ಈ ಅಭಿಮಾನಿಗೆ ಅಂಬಿಯೇ ಸರ್ವಸ್ವ

ಅಂಬಿಗೆ ದೇವರಪಟ್ಟಕೊಟ್ಟ ಅಭಿಮಾನಿ: ನಾಯಕ ನಟರಿಗೆ ಇಲ್ಲಾ ಮಹಾನ್ ನಾಯಕರುಗಳಿಗೆ ತಮ್ಮ ಹೃದಯದಲ್ಲಿ ದೇವರಂತೆ ಪೂಜಿಸುವ ಇಲ್ಲವೇ ಗೌರವಿಸುವ ವ್ಯಕ್ತಿಗಳ ನಡುವೆ ಇಲ್ಲೂಬ್ಬ ಅಭಿಮಾನಿ ಅಂಬಿಯವರನ್ನೇ ದೇವರಂತೆ ಪೂಜಿಸಿ ಆರಾಧಿಸುತ್ತಿದ್ದಾನೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಕೂಕಿನ ಹಾರೂಕೊಪ್ಪ ಗ್ರಾಮದ ನಿವಾಸಿ ಮಧುಕುಮಾರ್ ರವರೇ ಅಂಬರೀಷ್ ರವರಿಗೆ ದೇವರಪಟ್ಟ ಕಟ್ಟಿರುವ ಅಭಿಮಾನಿ.

ಅಂಬರೀಷ್ ಎಂದರೆ ತನ್ನ ಸರ್ವಸ್ವ ಎಂದು ತಿಳಿದಿದ್ದ ಈತ ಅಂಬರೀಷ್ ರವರ ಕಟ್ಟಾ ಅಭಿಮಾನಿ. ಈತನ ಅಭಿಮಾನ ಎಷ್ಟಿತೆಂದರೆ ಈತ ಅಂಬರೀಷ್ ಅಭಿನಯಿಸಿದ ಬಿತ್ರಗಳನ್ನು ಮಾತ್ರ ನೋಡುತ್ತಾ ಆತನ ಚಿತ್ರದ ಹಾಡುಗಳನ್ನು ಕೇಳುತ್ತಾ ತನ್ನ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದ ಈತ ಅಂಬರೀಷ್ ಹುಟ್ಟುಹಬ್ಬಕ್ಕೆ ಈತನೇ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸುತ್ತಿದ್ದ ಪರಿ ಇತನ ಉತ್ಕಟ ಅಭಿಮಾನಕ್ಕೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು.

ಅಂಬರೀಷ್ ನಿಧನರಾದ ಸುದ್ದಿ ತಿಳಿದಾಗ ಬಿಕ್ಕಿ ಬಿಕ್ಕಿ ಅತ್ತಿದ್ದ ಇವನು ಬೆಂಗಳೂರಿಗೆ ತೆರಳಿ ತನ್ನ ದೇವರಿಗೆ ಅಂತಿಮ ನಮನ ಸಲ್ಲಿಸಿದ್ದ.
ಇಂದು ಅಂಬರೀಷ್ ಪುಣ್ಯತಿಥಿ ಪ್ರಯುಕ್ತ ದೇವರ ಭಾವಚಿತ್ರದೆದುರು ಅಂಬಿ ಚಿತ್ರವನ್ನಿಟ್ಟು ಪೂಜಿಸುವ ಮೂಲಕ ಅಂಬಿಗೆ ದೇವರ ಸ್ಥಾನ ನೀಡಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com