ಒಂದೇ ದಿನಕ್ಕೆ 4 ಕೋಟಿ ವೀವ್ಸ್ : ರಜನಿಕಾಂತ್ ‘ಪೆಟ್ಟಾ’ ಮೂವಿ ‘ಮರಾನ ಮಾಸ್’ ಸಾಂಗ್ ಸದ್ದು

ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ 2.0 ಸಿನಿಮಾದ ಹವಾ ದಿನೇ ದಿನೇ ಹೆಚ್ಚಾಗುತ್ತಿರುವಾಗಲೇ ತಲೈವಾ ಮತ್ತೊಂದು ಧೂಳೆಬ್ಬಿಸಿದ್ದಾರೆ. ವರ್ಷಗಳ ನಿರೀಕ್ಷಿತ 2.0 ಚಿತ್ರ ಜನರಿಗೆ ನೋಡಲು ಸಾಧ್ಯವಾಗ್ತಾಯಿಲ್ಲ. ತೆರೆಕಂಡ ವಾರದ ಬಳಿಕವೂ ಸಿನಿಮಾ ಹಿಟ್ಟಾಗೇ ಇದೆ. ಹೀಗಿರುವಾದ ರಜನಿಕಾಂತ್ ಅಭಿನಯದ ಮತ್ತೊಂದು ಸಾಂಗ್ ಸದ್ಯ ರಿಲೀಸ್ ಆಗಿದೆ.

ಹೌದು.. “ ಪೆಟ್ಟಾ” ತಮಿಳು ಸಿನಿಮಾದ ‘ಮಾಸ್ ಯು ಮರನಾಂ’ ಸಾಂಗ್ ಸದ್ಯ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಸಾಂಗ್ ಯುಟ್ಯೂಬ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ರಜಿನಿಕಾಂತ್ ಫ್ಯಾನ್ಸ್ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 4 ಕೋಟಿ ಜನ ಈ ಸಾಂಗ್ ನ್ನ ನೋಡಿದ್ದಾರೆ. “ ಮಾಸ್ ಯು ಮರಾನಂ” ಲಿರಿಕ್ಸ್ ವಿಡಿಯೋನೇ ಇಷ್ಟೊಂದು ಸದ್ದು ಮಾಡಿರಬೇಕಾದರೆ ಇನ್ನು ಈ ಸಾಂಗ್ ನಲ್ಲಿ ರಜನಿಕಾಂತ್ ಅವರು ಕಾಣಿಸಿಕೊಂಡರೆ ಹೇಗಿರಬೇಡ…? ಪಕ್ಕಾ ಡ್ಯಾನ್ಸಿಂಗ್ ಸೌಂಡ್ ಸ್ಟೈಲ್ ನಲ್ಲಿರುವ ಈ ಸಾಂಗ್ ನಲ್ಲಿ ರಜನಿಕಾಂತ್ ಹೇಗೆ ಕಾಣಿಸಿಕೊಳ್ತಾರೆ ಅನ್ನೋದು ಸದ್ಯ ಎಲ್ಲರ ನಿರೀಕ್ಷೆಯಾಗಿದೆ. ಒಟ್ಟಿನಲ್ಲಿ ಕೇವಲ ಲಿರಿಕ್ಸ್ ವಿಡಿಯೋ ಸಾಂಗ್ ಗೆ ರಜನಿ ಫ್ಯಾನ್ಸ್ ಇಷ್ಟೊಂದು ಫಿದಾ ಆಗಿರೋದನ್ನ ನೋಡಿದರೆ ಚಿತ್ರ ಕೂಡ ಹೈಲೆಟ್ ಆಗೋ ಸಾಧ್ಯತೆ ಇದೆ.

Leave a Reply

Your email address will not be published.

Social Media Auto Publish Powered By : XYZScripts.com