Bigg Boss 6 :- ಹಾಡು, ನೃತ್ಯದ ಮೂಲಕ ಅಂಬಿ ನೆನಪು : ರೆಬೆಲ್ ಸ್ಟಾರ್ ಅಗಲಿಕೆಗೆ ಕಣ್ಣೀರಿಟ್ಟ ಸ್ಪರ್ಧಿಗಳು

ಅಂಬಿ ನಮ್ಮಿಂದ ಅಗಲಿ ವಾರ ಕಳೆದಿದೆ. ಆದರೆ ಈ ವಿಚಾರ ಮಾತ್ರ ಬಿಗ್ ಬಾಸ್ ಮನೆಯ ಯಾವ ಸ್ಪರ್ಧಿಗಳಿಗೂ ತಿಳಿದಿರಲಿಲ್ಲ. ಅಂಬಿ ಅವರನ್ನು ಕಂಡ, ಜೊತೆಗೆ ಇದ್ದ, ಓಡಾಡಿದ,  ಅಂಬಿ ಅವರೊಂದಿಗೆ ಹಾಡು – ನೃತ್ಯ ಮಾಡಿದ ಅಭಿಮಾನಿಗಳು ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಕೆಲವರು. ಇವರೆಲ್ಲರಿಗೂ ಅಂಬಿ ಇನ್ನಿಲ್ಲ ಅನ್ನೋ ವಿಚಾರವನ್ನು ಕೇಳಿ ಒಂದು ಕ್ಷಣ ಮಾತು ಬಾರದಂತಾಯಿತು.  ಬರೀ ಮೌನದಲ್ಲಿ ಕಣ್ಣು ತುಂಬಿ ಬಂತು. ಯಾಕೆ..? ಏನಾತು ಎಂದು ಕೇಳಲೂ ಸಾಧ್ಯವಾಗದಂತ ಸ್ಥಿತಿ, ಅವರನ್ನ ನೋಡದಂಥ ಸ್ಥಿಯಲ್ಲಿ ಸ್ಪರ್ಧಿಗಳು ದು:ಖವನ್ನು ಮನದಲ್ಲೇ ಮುಚ್ಚಿಕೊಂಡರು.  ಬಿಗ್ ಬಾಸ್ ಮನೆಯಲ್ಲಿ ಅಂಬಿ ಅಗಲಿಕೆಯನ್ನು ನೆನೆದು ಕಣ್ಣೀರಿಟ್ಟ ಸ್ಪರ್ಧಿಗಳು ಒಂದು ನಿಮಿಷ ಮೌನಾಚರಣೆ ಮಾಡಿದರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದು ನಮ್ಮನ್ನ ಅಗಲಿದ್ದಾರೆ ಹಿರಿಯ ನಟ ಅಂಬರೀಷ್ ಅವರು. ಒಂದು ಸಣ್ಣ ಪಾತ್ರ ಕೇಳಿಕೊಂಡು ಬಂದ ಅಂಬರೀಷ್ ಅವರು ಆ ಪಾತ್ರದ ಮೂಲಕವೇ ರೆಬೆಲ್ ಸ್ಟಾರ್ ಎಂದು ಹೆಸರು ಪಡೆದರು. ಅವರನ್ನ ಕಳೆದುಕೊಂಡು ನಮಗೆ ಮಾತೇ ಬಾರದಂತಾಗಿದೆ ಎಂದು ಹಿರಿಯ ಸ್ಪರ್ಧಿ ಮುರುಳಿಯವರು ಮಾತನಾಡಿದರು. ನಿನ್ನೆ ಅವರನ್ನ ನೆನೆದು ” ಅಂಬಿ ನೆನಪು” ಟಾಸ್ಕ್ ನೀಡಲಾಗಿತ್ತು.

“ಅಂಬಿ ನೆನಪು” ಟಾಸ್ಕ್ ನಲ್ಲಿ ಮನಸ್ಸು ತುಂಬಿ ಹಾಡಿದ ” ಈ ಮಂಡ್ಯದ ಗಂಡು ಮುತ್ತಿನ ಚಂಡು..” ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ..”, ” ಮೇಘ ಬಂತು ಮೇಘಾ..” ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ..”  ಹಾಡು ಸ್ಪರ್ಧಿಗಳಿಗೆ ಅಂಬಿ ಮೇಲೆ ಇಟ್ಟಿರೋ ಪ್ರೀತಿ ಅಭಿಮಾನವನ್ನ ಎತ್ತಿಹಿಡಿಯಿಡಿಯಿತು.

ಜೊತೆಗೆ “ನಾನು ಯಾರು..? ಯಾವ ಊರು..? ಇಲ್ಲಿ ಯಾರು ಬಲ್ಲೋರಿಲ್ಲ” ಅನ್ನೋ ಅಂಬಿ ಅಭಿನಯದ ಹಾಡಿಗೆ ನೃತ್ಯ ಕೂಡ ಮಾಡಲಾಯಿತು. ಅಂಬಿ ಅಭಿನಯದ ಕೆಲ ಹಾಡುಗಳನ್ನ ರಶ್ಮಿ ಹಾಗೂ ನವೀನ್ ಹಾಡಿದರು.

ಪುಟ್ಟಣ ಕಣಗಾಲ್ ಅವರ ಪ್ರತಿಭೆ ಕನ್ನಡ ಚಲನಚಿತ್ರರಂಗದಲ್ಲಿ ಎಲ್ಲರೂ ಮಾತು ಕೇಳುವಂತ ಏಕೈಕ ವ್ಯಕ್ತಿ ಅಂಬರೀಷ್ ಅವರು. ಅಂಬಿ ಅವರಿಗೆ ವಯಸ್ಸಾಗಿಲ್ಲ. ಸದಾ ನಮ್ಮೊಂದಿಗೆ ಇರುತ್ತಾರೆ ಮತ್ತು ಅವರ ಕುಟುಂಬಕ್ಕೆ ದು:ಖ ಭರಿಸುವಂತ ಶಕ್ತಿ ಕೊಡಲಿ ದೇವರು ಎಂದು ರಶ್ಮಿ ಮಾತನಾಡಿದರು.

ಇನ್ನೂ ಆನಂದ್  ಅವರು ದು:ಖದಿಂದ ತಾವು ಚಿಕ್ಕವರಿದ್ದಾಗಿನಿಂದಲೂ ನೆನೆಯುತ್ತಿದ್ದ ನಟರೆಂದರೆ ಅಂಬಿ ಅಣ್ಣ. ಹೀಗಾಗಿ ನನಗೆ ಅವರೆಂದರೆ ತುಂಬಾ ಇಷ್ಟ. ಅವರನ್ನ ನೋಡಿಕೊಂಡೇ ನಾವು ಬೆಳದಿದ್ದು ಮಂಡ್ಯದ ಗಂಡು ಅವರೊಂದಿಗೆ ಒಂದಿಷ್ಟು ಕಾಲ ಕಳೆದಿದ್ದು ಎಲ್ಲವೂ ನೆನೆಪಾಗುತ್ತಿದೆ. ಮಾತೇ ಬರುತ್ತಿಲ್ಲ ಎಂದು ಕಣ್ಣೀರಿಟ್ಟರು.

 

Leave a Reply

Your email address will not be published.

Social Media Auto Publish Powered By : XYZScripts.com