ವೀಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮೀನಾ ಮೇಷ ಮಾಡುತ್ತಿರುವುದು ಏಕೆ..?

ಕರ್ನಾಟಕ ಕಂಡ ಸ್ಟಾರ್ ನಟ ಅಂಬರೀಶ್, ಸಾವನ್ನಪ್ಪಿ ವಾರವೇ ಕಳೆದು ಹೋಗಿದೆ. ಇನ್ನು ಅಭಿಮಾನಿಗಳ ಮನದಲ್ಲಿ ಅಂಬರೀಶ್ ರದ ನಿಧನಕಹಿ ಘಟನೆ ಹಸಿರಾಗಿರುವಾಗಲೇ, ಮತ್ತೊಂದು ವಿವಾದ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡ್ತಾ ಇದೆ. ಎಸ್.. ಅದುವೇ ವಿಷ್ಣು ಸ್ಮಾರಕ ವಿವಾದ..

ಕುಚುಕು ಗೆಳೆಯರಂತಿದ್ದ ಅಬಂರೀಶ್ ಹಾಗೂ ವಿಷ್ಣುವರ್ಧನ್, ಇಬ್ಬರೂ ಈಗ ನೆನಪು ಮಾತ್ರ. ಅಂಬರೀಶ್ ಅವರಿಗೆ ಕಂಠೀರವ ಸ್ಟೂಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅಲ್ಲದೆ 1.5 ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಈ ಬೆನ್ನಲ್ಲೆ ವಿಷ್ಣು ಅಭಿಮಾನಿಗಳು ಹಾಗೂ ವಿಷ್ಣು ಕುಟುಂಬಸ್ಥರು ಸ್ಮಾರಕ ನಿರ್ಮಾಣದ ಧ್ವನಿ ಎತ್ತಿದ್ದಾರೆ.

ವಿಷ್ಣು ಸ್ಮಾರಕ ನಿರ್ಮಾಣದ ಕೂಗ ಈಗ ಮತ್ತೆ ಭುಗಿಲೆದ್ದಿದೆ. ರಾಜ್ಯ ಸರ್ಕಾರದ ಮೇಲೆ ವಿಷ್ಣು ಕುಟುಂಬಸ್ಥರು ಆರೋಪ ಮಾಡ್ತಾ ಇದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ವಿಷ್ಣು ವರ್ಧನ ಅಳಿಯ ಅನಿರುದ್ಧ, ಕಿಡಿ ಕಾರಿದ್ದಾರೆ. ಅಲ್ಲದೆ ಕಲಾವಿದರ ಹೆಸರಲ್ಲಿ ರಾಜಕೀಯ ಮಾಡಬೇಡಿ ಎಂದು ತಿಳಿಸಿದ್ದಾರೆ.

ಸುಮಾರು ವರ್ಷದಿಂದ ನಟ ಡಾ. ವಿಷ್ಣುವರ್ಧನ ಸ್ಮಾರಕ ನಿರ್ಮಾಣ ವಿಚಾರಕ್ಕೆ ಹೋರಾಟ ನಡೆಸಲಾಗುತ್ತಿದೆ. ಆದ್ರೆ ಇನ್ನು ವಿಷ್ಣು ಸ್ಮಾರಕ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಇನ್ನು ಡಾ.ರಾಜಕುಮಾರ್ ಹೆಸರಲ್ಲಿ ಫಿಲ್ಮ್ ಯುನಿವರ್ಟಿಸಿ, ಅಂಬಿ ಹೆರಸಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿಷ್ಣು ಅಳಿಯ ಅನಿರುದ್ಧ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ವಿಷ್ಣುವರ್ಧನ್ ಅವರ ಹೆಸರಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ ನಿರ್ಮಿಸಲು ಸರ್ಕಾರಕ್ಕೆ ನೆನಪಾಗುತ್ತಿಲ್ಲ ಎಂದು ಅನಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಲಾವಿದರ ವಿಚಾರದಲ್ಲಿ ಸರಕಾರ ಜಾತಿ ಲೆಕ್ಕಾಚಾರ ಮಾಡುತ್ತಿದೆ. ವಿಷ್ಣು ಚಿತ್ರೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಸಾಹಸಸಿಂಹ ಯಾವತ್ತೂ ಯಾರಿಗೂ ನೋವು ಮಾಡಿದವರಲ್ಲ ಎಂದು ಅನಿರುದ್ಧ ಆರೋಪಿಸಿದರು.

ವಿಷ್ಣು ವರ್ಧನ ನಿಧನರಾಗಿ 9 ವರ್ಷ ಕಳೆಯುತ್ತಾ ಬಂದಿದೆ. ಎಲ್ಲಾ ಸರ್ಕಾರಗಳಿಗೂ ಮನವಿ ಸಲ್ಲಿಸಿದ್ದೇವೆ. ಅದ್ರೆ, ವಿಷ್ಣು ಸ್ಮಾರಕ ವಿಚಾರವನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಳಿಯ ಅನಿರುದ್ಧ ತಿಳಿಸಿದ್ದಾರೆ.

ಇನ್ನು ಸಹಾಸಸಿಂಹನ ಸ್ಮಾರಕ ನಿರ್ಮಾಣ ಕಾರ್ಯ ಯಾವಗ ಎಂದು ಅಭಿಮಾನಿಗಳು ಸಹ ಸರ್ಕಾರಕ್ಕೆ ಕೇಳಿದ್ದಾರೆ. ಅದೇನೆ ಇರಲಿ ಸರ್ಕಾರ ಕಲಾವಿದರ ವಿಷಯದಲ್ಲಿ ಜಾತಿ ರಾಜ ಕಾರಣ ಮಾಡದೇ, ಕಲಾವಿದನ ಕಲೆಗೆ ಬೆಲೆ ನೀಡಬೇಕು ಎಂಬೋದು ಅಭಿಮಾನಗಳ ಆಗ್ರಹ.

Leave a Reply

Your email address will not be published.

Social Media Auto Publish Powered By : XYZScripts.com