Cricketer dance viral : ಚಾಂಪಿಯನ್ ಬ್ರಾವೋರಿಂದ ಚಿಕನ್ ಡ್ಯಾನ್ಸ್….

ಆಟ ಅಂದಮೇಲೆ ಮೋಜು ಮಸ್ತಿ ಫುಲ್ ಇರುತ್ತದೆ. ಇನ್ನು ವೆಸ್ಟ್ ಇಂಡಿಸ್ ಆಟಗಾರರು ಇದ್ದರೇ ಅದರ ಖದರೇ ಬೇರೆ. ಕೆರಿಬಿಯನ್ ಆಟಗಾರರು ಫುಲ್ ಜೋಶ್ ನಲ್ಲಿ ಮಾಡುವ ತುಂಟಾಟಗಳು ಪ್ರೇಕ್ಷಕರಿಗ ಮಸ್ತ್ ಮಜಾ ನೀಡ್ತವೆ. ವಿಂಡೀಸ್ ಆಟಗಾರರು ಹೇಗೆಲ್ಲಾ ಸೆಲೆಬ್ರೇಷನ್ ಮಾಡ್ತಾರೆ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಆದ್ರೆ, ಮೊನ್ನೆ ನಡೆದ ಟಿ-20 ಎಲಿಮಿನೇಟರ್ ಪಂದ್ಯದಲ್ಲಿ ಡ್ವೇನ್ ಬ್ರಾವೋ ಮಾಡಿದ ಡ್ಯಾನ್ಸ್ ಸದ್ಯ ಸಾಮಾಜಿಕ ತಾಣದಲ್ಲಿ ಸಕತ್ ವೈರಲ್ ಆಗಿದೆ.

ತಮ್ಮ ಸ್ಪೋಟಕ ಆಟದಿಂದಲೇ ಹೆಸರು ಮಾಡಿರುವ ಕ್ರಿಸ್ ಗೇಲ್, ಶತಕ ಬಾರಿಸಿದ ಮೇಲೆ ಯಾವ್ಯಾವ ರೀತಿ ಸಂಭ್ರಮಿಸುತ್ತಾರೆ ಎನ್ನೋದು ಗೊತ್ತಿರುವ ಸಂಗತಿ. ಇನ್ನು ಕಿರನ್ ಪೊಲಾರ್ಡ್ ಸಹ ತಾವೇನು ಕಮ್ಮಿ ಇಲ್ಲ ಎಂಬಂತೆ ಡ್ಯಾನ್ಸ್ ಮಾಡಿದ್ದಾರೆ. ಬ್ರಾವೋ ಸಹ ಮೈದಾನವೆಂದೂ ಲೆಕ್ಕಿಸದೆ ಹಲವು ಬಾರಿ ಹೆಜ್ಜೆ ಹಾಕಿದ್ದಾರೆ.

ಇತ್ತಿಚಿಗೆ ನಡೆದ ಟಿ-10 ಲೀಗ್ ನಲ್ಲಿ ಡ್ವೇನ್ ಬ್ರಾವೋ ಮಾಡಿದ ಡ್ಯಾನ್ಸ್ ಸಕತ್ ಸದ್ದು ಮಾಡ್ತಾ ಇದೆ. ಬೆಂಗಾಲ್ ಟೈಗರ್ಸ್ ಹಾಗೂ ಮರಾಠ ಅರೇಬಿಯನ್ಸ್ ನಡುವಣ ಕಾದಾಟ ನಡೆದಿತ್ತು. ಈ ವೇಳೆ ಗುರಿ ಬೆನ್ನಟ್ಟಿದ ಮರಾಠ ತಂಡಕ್ಕೆ ಬ್ರಾವೋ ಕಂಠಕರಾದ್ರು. ಈ ಪಂದ್ಯದಲ್ಲಿ 9ನೇ ಓವರ್ ಕೊನೆಯ ಎಸೆತದಲ್ಲಿ ಅಫ್ಘಾನಿಸ್ತಾನ್ ಆಲ್ ರೌಂಡರ್ ಮೊಹಮ್ಮದ್ ನಬಿ ಗೆ ಖೆಡ್ಡಾ ತೋಡಿದ ಬ್ರಾವೋ, ಮಿಂಚಿದ್ರು. ಕ್ಯಾಚ್ ಪಡೆಯುತ್ತಲೆ ಬ್ರಾವೋ ಮೈದಾನದಲ್ಲಿ ಕೊಳಿಯಂತೆ ನೆಗಯುತ್ತ ಡ್ಯಾನ್ಸ್ ಮಾಡಿದ್ರು. ಈ ಡ್ಯಾನ್ಸ್ ಗೆ ಚಿಕನ್ ಡ್ಯಾನ್ಸ್ ಎಂದು ಕರೆಯ ಲಾಗುತ್ತಿದ್ದು ಭಾರೀ ಸದ್ದು ಮಾಡ್ತಾ ಇದೆ.

Leave a Reply

Your email address will not be published.