IPL Cricket : ಐಪಿಎಲ್ ಹರಾಜು ಪ್ರಕ್ರಿಯೆ ಬೆಂಗಳೂರಿನಿಂದ ಜೈಪುರ್ ಗೆ ಶಿಫ್ಟ್…

ಐಪಿಎಲ್ ಎಂಬ ರಂಗು ರಂಗಿನ ಆಟದಲ್ಲಿ ಆಟಗಾರರ ಹರಾಜಿನ ಮೇಲೆ ಸಾಮಾನ್ಯವಾಗಿ ಎಲ್ಲರ ಕಣ್ಣು ನೆಟ್ಟಿರುತ್ತದೆ. ಹೆಚ್ಚಾಗಿ ಬಿಡ್ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಹರಾಜು ಪ್ರಕ್ರಿಯೆ ಜೈಪುರ್ ಗೆ ಶಿಫ್ಟ್ ಆಗಿದೆ. 12ನೇ ಆವೃತ್ತಿಯ ಐಪಿಎಲ್ ಹರಾಜು ಕಾರ್ಯಕ್ರಮ ಇದೇ 18 ರಂದು ಜೈಪುರ್ ದಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಒಟ್ಟು 70 ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ 50 ಭಾರತೀಯ ಹಾಗೂ 20 ವಿದೇಶಿ ಆಟಗಾರರು ಸೇರಿದ್ದಾರೆ. ಈ ಆಟಗಾರರನ್ನು ಕೊಳ್ಳಲು ಒಟ್ಟು 145.25 ಕೋಟಿ ಖರ್ಚು ಮಾಡಬಹುದಾಗಿದೆ. ಎಂಟು ತಂಡಗಳು ಅಳೆದು ತೂಗಿ ಆಟಗಾರರನ್ನು ಕೊಳ್ಳಲು ಪ್ಲಾನ್ ಮಾಡಿಕೊಂಡಿವೆ.

ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ರನ್ನು ಕೈ ಬಿಟ್ಟಿದೆ. ಇನ್ನು ಕಳೆದ ಬಾರಿಯ ಎರಡನೇ ದುಬಾರಿ ಆಟಗಾರ ಎಂಬ ಹಣೆ ಪಟ್ಟಿ ಹೊಂದಿದ್ದ ಯುವೇಗದ ಬೌಲರ್ ಜಯದೇವ್ ಉನಾದ್ಕಟ್ ಅವರನ್ನು ರಾಜಸ್ಥಾನ ರಾಯಲ್ಸ್ ರಿಲೀಸ್ ಮಾಡಿದೆ. ಇನ್ನು ಮುಂಬೈ ತಂಡ ಜೆ.ಪಿ ಡುಮಿನಿ ಮತ್ತು ಮುಷ್ತಾಫಿಜುರ್ ರಹಮಾನ್ ರನ್ನು ಕೈ ಬಿಟ್ಟಿದೆ.

Leave a Reply

Your email address will not be published.

Social Media Auto Publish Powered By : XYZScripts.com