ಮಜಾಟಾಕೀಸ್ ನ 200 ಎಪಿಸೋಡ್ ಮೀರಿಸಿದ ಅದ್ಬುತ ಪ್ರತಿಭೆ ಕೈ ಇಲ್ಲದ ತಾನ್ಸೇನ್..!

ಮಜಾ ಟಾಕೀಸ್ ಕನ್ನಡ ಚಾನಲ್ ವೀಕ್ಷಕರಿಗೆ ಒಂದೊಳ್ಳೆ ಮನರೋಜನೆ ಕಾರ್ಯಕ್ರಮ. ಪ್ರತೀ ವಾರವೂ ಕಾಲಾವಿಧರನ್ನ ಹಾಗೂ ಅವರ ಚಲನ ಚಿತ್ರಗಳನ್ನ ಪ್ರಮೋಟ್ ಮಾಡುವುದಷ್ಟೇ ಅಲ್ಲದೇ ವೀಕ್ಷಕರನ್ನ ನಕ್ಕು ನಲಿಸುವ ಸೃಜನ್ ಲೋಕೇಶ್ ನಡೆಸಿಕೊಡುವ ವಿಶೇಷ ಕಾರ್ಯಕ್ರಮ ಇದು. ಈ ವಾರ ಸೃಜ ತರ್ಲೆ ಮಾತನ್ನ ಶುರು ಮಾಡಿದ್ದು 25 ವರ್ಷ ನಟನಾಗಿ ಗುರುತಿಸಿಕೊಂಡ ವಿಜಯರಾಘವೆಂದ್ರ ಅವರೊಂದಿಗೆ. ಮಜಾ ಟಾಕೀಸ್ ಗೆ ಬಾಗ್ಯಾದ ಬಳೆಗಾರ ಹಾಡು ಹಾಗೂ ಡ್ಯಾನ್ಸು ಮಾಡುತ್ತಾ ಸೂಪರ್ ಎಂಟ್ರಿ ಕೊಟ್ಟರು ಚಿನ್ನಾರಿ ಮುತ್ತ. ಇವರು ಹೊಸದಾಗಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ಕಿಸ್ಮತ್’ ಚಿತ್ರದ ಪ್ರಮೋಷನ್ ಈ ವೇಳೆ ನಡೆಯಿತು. ‘ಕಿಸ್’ ಅನ್ನೋ ಪದ ಇರೋದ್ರಿಂದ ಕಿಸ್ಮತ್ ಅಂತ ಹೆಸರು ಇಡಲಾಗಿದಿಯಾ ಅಂತ ಚಿತ್ರದ ಹೆಸರಲ್ಲೂ ಸೃಜಾ ಕಾಲೆಳೆದರು. ಆದರೆ ಸೃಜನ್ ಲೋಕೇಶ್ ಕಿಸ್ಮತ್ ನಿರ್ದೇಶಕನಿಗೆ ಕಿಸ್ಮತ್ ಇರೋ ಹೊಸ ವ್ಯಕ್ತಿಯ ಪರಿಚಯ ಮಾಡಿದ್ದು ಈ ವಾರದ ವಿಶೇಷ. ಹಾಗಾದರೆ ಆ ಕಿಸ್ಮತ್ ಇರೋ ವ್ಯಕ್ತಿ ಯಾರು ಗೊತ್ತಾ..?

ಅವರೇ ಮಜಾ ಮನೆಗೆ ಬಂದಂತಹ ಹೊಸ ಅತಿಥಿ ತಾನ್ ಸೇನ್. ತಾನ್ ಸೇನ್ ಚನೈ ಮೂಲದವರು. ಇವರಿಗೆ ಎರಡೂ ಕೈ ಇಲ್ಲ. ಆದರೂ ಇವರು ಗಿಟಾರ್, ಹಾರ್ಮೋನಿಯಂ, ಬ್ಯಾಂಡ್ ಬಾರಿಸಿದರು, ಕಿಸ್ಮತ್ ಗೆ ಶುಭವಾಗಲಿ ಎಂದು ಬೋರ್ಡ್ ಮೇಲೆ ಬರೆದರು. ಇದನ್ನ ಕಂಡು ಜನ ಶಿಳ್ಳೆ ಹೊಡೆದು ಸ್ಟೆಪ್ ಹಾಕಿದರೆ ವಿಜಯರಾಘವೇಂದ್ರ ಹಾಗೂ ಸೃಜ ತಾನ್ ಸೇನ್ ಪ್ರತಿಭೆ ಕಂಡು ಬೆರಗಾದರು. ಮಜಾ ಟಾಕೀಸ್ ನ ಎಲ್ಲಾ ಕಲಾವಿಧರು ಕೂಡ ತಾನ್ ಸೇನ್ ಪ್ರತಿಭೆ ಮುಂದೆ ನಾವೇನು ಅಲ್ಲ. ಇವರೇ ನಮಗೆ ಸ್ಪೂರ್ಥಿ ಎಂದರು.

ಈ ಸಂದರ್ಭದಲ್ಲಿ ಸೃಜಾ ತಾನ್ ಸೇನ್ ಅವರಿಗೆ ಹೇಳಿದ್ದು ಹೀಗೆ ..  ಮಜಾಟಾಕೀಸ್ 200 ಎಪಿಸೋಡ್ ಮರೆಸುವಂತಹ ಟ್ಯಾಲೆಂಟ್ ನಿನ್ನದು ಎಂದು ಗುಣಗಾನ ಮಾಡಿದರು. ಒಟ್ಟಿನಲ್ಲಿ ಕಿಸ್ಮತ್ ಗೆ ಹೊಸ ಕಿಸ್ಮತ್ ಇರೋ ವ್ಯಕ್ತಿ ಪರಿಚಯ ಆಗಿದ್ದು ಎಲ್ಲರಿಗೂ ಖುಷಿ ತಂದಿತು.

Leave a Reply

Your email address will not be published.

Social Media Auto Publish Powered By : XYZScripts.com