Bigg Boss 6 : ಬಿಗ್ ಬಾಸ್ ಮನೆಯಿಂದ ಆನಂದ ಔಟ್ : ಕಣ್ಣೀರಿಡುತ್ತ ಹೊರನಡೆದ ಬಸ್ ಚಾಲಕ

ಬಿಎಂಟಿಸಿ ಬಸ್ ಚಾಲಕನಾಗಿದ್ದ ಆನಂದ ಮಾಲ್ಗತ್ತಿ ಅವರು ನಿನ್ನೆ ಬಿಗ್ ಬಾಸ್ ಮನೆಯಿಂದ ಹೊರನಡೆಸಿದ್ದಾರೆ. ಡೇಂಜರ್ ಝೋನ್ ನಲ್ಲಿದ್ದ ನವೀನ್, ಸೋನು, ರಾಕೇಶ್, ಹಾಗೂ ಆನಂದ್ ಮಾಲ್ಗತ್ತಿ ಅವರ ಮಧ್ಯೆ ಆನಂದ್ ಮಾಲ್ಗತ್ತಿ ಎಲಿಮಿನೇಟ್ ಆಗಿದ್ದಾರೆ. ಕಲಿಯುವುದು ತುಂಬಾ ಇದೆ ಹೀಗಾಗಿ ನಾನು ಬಿಗ್ ಬಾಸ್ ಮನೆಗೆ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಆನಂದ್ ಅವರಿಗೆ ಇಷ್ಟು ಬೇಗ ಮನೆಯಿಂದ ಆಚೆ ಹೋಗುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ತಮಗೆ ಒಳ್ಳೆಯ ವ್ಯಕ್ತಿಗಳು ಅಂತ ಅನಿಸಿದರೆ ಸಾಕು ಆ ವ್ಯಕ್ತಿ ಟಾಸ್ಕ್ ನಲ್ಲಿ ಗೆದ್ದರೆ ಅವರಷ್ಟು ಖುಷಿ ಮತ್ಯಾರು ಪಡುತ್ತಿರಲಿಲ್ಲ. ಜಿಗಿದಾಡಿ, ಕುಣಿದಾಡಿ ಸಂತಸ ವ್ಯಕ್ತ ಪಡಿಸುತ್ತಿದ್ದ ಏಕೈಕ ಬಿಗ್ ಬಾಸ್ ವ್ಯಕ್ತಿ ಅವರು.

ಮನೆಯಲ್ಲಿ ಎಂತೆಂಥ ವ್ಯಕ್ತಿಗಳು ಡೇಂಜರ್ ಝೋನ್ ಗೆ ಹೋಗದೆ ಅರಾಮಾಗಿದ್ದಾರೆ ಅಂಥದ್ರಲ್ಲಿ ನಾನು ಎಲಿಮಿನೇಟ್ ಆಗಲು ಸಾಧ್ಯವಿಲ್ಲ ಅಂತ ಮನದಲ್ಲಿ ಧೈರ್ಯ ತಂದುಕೊಂಡಿದ್ದರು. ಆದರೆ ಬಿಗ್ ಬಾಸ್ ತೀರ್ಮಾನವೇ ಬೇರೆ ಆಗಿತ್ತು. ಹೀಗಾಗಿ ಆನಂದನಿಗೆ ಬಿಕ್ಕಿ ಬಿಕ್ಕಿ ಅಳುವಷ್ಟು ದು:ಖ ತುಂಬಿ ಬಂತು. ಮನೆಯ ಎಲ್ಲಾ ಸ್ಪರ್ಧಿಗಳು ಸಮಾಧಾನ ಮಾಡಿದರೂ ಅವರು ಸಮಾಧಾನವಾಗಲಿಲ್ಲ. ದು:ಖದಿಂದಲೇ ಎಲ್ಲರಿಗೂ ಬಾಯ್.. ಆಲ್ ದಿ ಬೆಸ್ಟ್ ಹೇಳಿದರು.

 

Leave a Reply

Your email address will not be published.