ಬೆಂಗಳೂರು : ಇಂಜೆಕ್ಷನ್ ಕೊಟ್ಟು ತಾಯಿ, ತಂಗಿಯ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಮಗ..!

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ಮಗನೇ ತಾಯಿ ಹಾಗೂ ತಂಗಿಗೆ ಇಂಜೆಕ್ಷನ್​ ಕೊಟ್ಟು ಕೊಲೆಗೈದಿರುವ ಘಟನೆ ಆರ್.ಆರ್ ​ನಗರದ ಮುನಿವೆಂಕಟಪ್ಪ ರಂಗಮಂದಿರ ಬಳಿ ನಡೆದಿದೆ.

ಇಂಜೆಕ್ಷನ್​​ ನೀಡಿದ ಮಗ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೂಕಾಂಬಿಕಾ(75), ಶ್ಯಾಮಲಾ(40) ಸಾವನ್ನಪ್ಪಿದ್ದಾರೆ. ಮೃತ ತಾಯಿ ಶ್ಯಾಮಲಾ ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಪುತ್ರ ಡಾ.ಗೋವಿಂದ ಪ್ರಸಾದ್ ಅನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಡೆತ್​​ನೋಟ್​​​ ಬರೆದು ಡಾ.ಗೋವಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅನಾರೋಗ್ಯ ಹಿನ್ನೆಲೆಯಲ್ಲಿ ಕೃತ್ಯವೆಂದು ಡೆತ್ನೋಟ್ ಬರೆದಿಟ್ಟಿದ್ದಾನೆ.

ಇನ್ಸುಲಿನ್​ ಇಂಜೆಕ್ಷನ್​​ ಚುಚ್ಚಿ ತಾಯಿ, ತಂಗಿ ಕೊಲೆಗೈದ ನಂತರ ಗೋವಿಂದ ತಾನೂ ಸಹ ಇಂಜೆಕ್ಷನ್​ ಚುಚ್ಚಿಕೊಂಡಿದ್ದಾನೆ. ಸ್ಥಳಕ್ಕೆ ಆರ್​.ಆರ್​.ನಗರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

5 thoughts on “ಬೆಂಗಳೂರು : ಇಂಜೆಕ್ಷನ್ ಕೊಟ್ಟು ತಾಯಿ, ತಂಗಿಯ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಮಗ..!

Leave a Reply

Your email address will not be published.

Social Media Auto Publish Powered By : XYZScripts.com