WATCH : ಟ್ರೇನ್ ಬರುತ್ತಿರುವ ಅರಿವಿಲ್ಲದೇ ಹಳಿ ದಾಟಲು ಮುಂದಾದ ಸೈಕಲ್ ಸವಾರ – ನಡೆದಿದ್ದೇನು?

‘ಅವಸರವೇ ಅಪಘಾತಕ್ಕೆ ಕಾರಣ’ ಎಂಬುದು ಗೊತ್ತಿದ್ದರೂ ಸಹ ಕಾಯುವ ತಾಳ್ಮೆಯಿಲ್ಲದೇ, ಕೆಲವೊಮ್ಮೆ ಜಾಗರೂಕತೆಯ ಕೊರೆತೆಯಿಂದಲೂ ಜನರು ಅಪಘಾತಕ್ಕೀಡಾಗುತ್ತಾರೆ. ನೆದರ್ಲೆಂಡ್ ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಏಜೆನ್ಸಿ ಯೂಟ್ಯೂಬ್ ನಲ್ಲಿ ಇಂತಹುದೇ ಭಯಾನಕ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಸೈಕಲ್ ಸವಾರನೊಬ್ಬ ಟ್ರೇನ್ ಬರುತ್ತಿರುವ ಅರಿವಿಲ್ಲದೇ ಹಳಿ ದಾಟಲು ಮುಂದಾಗಿದ್ದಾನೆ.

ಮೊದಲು ಒಂದು ರೈಲು ಹೋಗುವವರೆಗೆ ತಾಳ್ಮೆಯಿಂದ ಕಾಯುತ್ತ ನಿಂತಿದ್ದ ಸೈಕಲ್ ಸವಾರ, ಮತ್ತೊಂದು ಕಡೆಯಿಂದ ಇನ್ನೊಂದ ರೈಲು ಬರುತ್ತಿರುವ ಅರಿವಿಲ್ಲದೇ ಹಳಿ ದಾಟಲು ಮುಂದಾಗಿದ್ದಾನೆ.

ದಾಟುವ ಮಧ್ಯೆ ರೈಲು ವೇಗದಲ್ಲಿ ನುಗ್ಗಿ ಬರುತ್ತಿರುವುದನ್ನು ಕಂಡ ಸೈಕಲ್ ಸವಾರ, ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ. ಈ ವಿಡಿಯೋವನ್ನು ಈಗಾಗಲೇ 8 ಲಕ್ಷ ಜನರು ವೀಕ್ಷಿಸಿದ್ದಾರೆ.

Leave a Reply

Your email address will not be published.