ರಜನಿ ದಿ ರೋಬೋ ಮತ್ತು ಬಾಹುಬಲಿ ಮೊದಲ ದಿನದ collection details ಇಲ್ಲಿದೆ..

2.0 ತೆರೆಗೆ: ಶಂಕರ್ ದಿ ಬೆಸ್ಟ್, ರಜನಿ ದಿ ರೋಬೋ 543 ಕೋಟಿ ರೂ. ಬಜೆಟ್‌, 10,500 ಥಿಯೇಟರ್ ಎಂಟ್ರಿ ಕೊಟ್ಟಿದೆ.
ಶಂಕರ್ ನಿರ್ದೇಶನದ 2.0 ಚಿತ್ರ ರಜನಿಕಾಂತ್‌ – ಅಕ್ಷಯ್ ಕುಮಾರ್ ನಟನೆಗೆ ಹಾಗೂ ಶಂಕರ್ ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಡೀ ಭಾರತದ ಅತಿ ಹೆಚ್ಚು ಬಜೆಟ್ 543 ಕೋಟಿ ರೂ. ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಆದರೆ ಹಿಂದಿಗೆ ಡಬ್ ಆಗಿರುವ ಈ ರೋಬೋ ದ ಮೊದಲ ದಿನದ ಕಲೆಕ್ಷನ್ ಕೇವಲ 20 ಕೋಟಿ… ಬಾಹುಬಲಿ ಚಿತ್ರದ ಮೊದಲ ದಿನದ ಕಲೆಕ್ಷನ್ ಹಿಂದಿಕ್ಕುವಲ್ಲಿ ಶಂಕರ್ ನಿರ್ದೇಶನದ 2.0 ಚಿತ್ರ ರಜನಿಕಾಂತ್‌ – ಅಕ್ಷಯ್ ಕುಮಾರ್ ರೋಬೋ ಫೇಲ್ ಆಗಿದೆ… ಬಾಹುಬಲಿ ಮೊದಲ ದಿನ 41 ಕೋಟಿ ಹಣ ಬಾಚಿತ್ತು, ಆದರೆ ಅದು ಹಿಂದಿಗೆ ಡಬ್ ಆಗಿರಲಿಲ್ಲ.. ಡಬ್ ಆದ ಚಿತ್ರಗಳಲ್ಲಿ ರಜನಿ ದಿ ರೋಬೋ ಕಲೆಕ್ಷನ್ ಬೆಸ್ಟ್…

ಗ್ರಾಫಿಕ್ಸ್, 4ಆ ಸೌಂಡ್ ಎಫೆಕ್ಟ್, 3ಆ ಸಿನಿಮಾ ಮತ್ತು ಅತ್ಯಾಧುನಿಕ ತಂತ್ರಜ್ಞಾನ, ಸಿನಿಮಾಟೋಗ್ರಫಿ, ಮೇಕಪ್ ಎಲ್ಲವೂ 2.0 ಸಿನಿಮಾದಲ್ಲಿದೆ. ಬಿಡುಗಡೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಇಡೀ ಸಿನಿಮಾದ ಶಕ್ತಿ ಗ್ರಾಫಿಕ್ಸ್ ಆಗಿದೆ.

ಸುಮಾರು 10,500 ಚಿತ್ರಮಂದಿರಗಳಲ್ಲಿ ಏಕ ಕಾಲದಲ್ಲಿ ತೆರೆಕಂಡಿದೆ. ಈ ಅದ್ದೂರಿ ಸಿನಿಮಾವನ್ನು 543 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಮೊದಲ ಸಲ ಅತ್ಯಾಧುನಿಕ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗಿದೆ. ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಈಗಾಗಲೇ 370 ಕೋಟಿ ರೂ.ಗೆ ಮಾರಾಟವಾಗಿದೆ. 2.0 ಅದ್ಭುತ ಪ್ರತಿಕ್ರಿಯೆ ರಜನಿಯನ್ನು ಮತ್ತೊಮ್ಮೆ ಸೂಪರ್‌ಸ್ಟಾರ್‌ ಆಗಿಸಿದೆ.

ಪಕ್ಷಿಗಳ ಉಳಿವಿಗಾಗಿ ಇಲ್ಲಿನ ಒಂದು ಪಾತ್ರ ಏನೆಲ್ಲ ಮಾಡುತ್ತದೆ ಎನ್ನುವುದೇ ಚಿತ್ರದ ಕಥೆಯ ಕೇಂದ್ರ ಬಿಂದು. ಚಿತ್ರದಲ್ಲಿ ವಿನಾಶಕಾರಿ ಕ್ರೋಮ್ಯಾನ್(ಕಾಗೆ ಮಾವನ) ಪಾತ್ರದಲ್ಲಿ ಅಕ್ಷಯ್ ಕುಮಾರ್ ಬೆಚ್ಚಿಬೀಳಿಸುವ ಅಭಿನಯ ನೀಡಿದ್ಧಾರೆ. ಈ ದುಷ್ಟಶಕ್ತಿಯನ್ನು ರೋಬೊ ಚಿಟ್ಟಿ ಯಾವ ರೀತಿ ಸದೆ ಬಡಿಯುತ್ತದೆ ಎಂಬುದು ಚಿತ್ರದ ಕುತೂಹಲಕಾರಿ ಸಂಗತಿಯಾಗಿದೆ. ಈ ವಿಷಯದ ಮೇಲೆ ‘2.ಔ’ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

ರಜನಿಕಾಂತ್ ಇಲ್ಲಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ವಿಜ್ಞಾನಿ ವಸಿಗರನ್ ಹಾಗೂ ಚಿಟ್ಟಿ ಎಂಬ ರೋಬೋ ಪಾತ್ರಗಳಲ್ಲಿ ರಜನಿಗೆ ಫುಲ್ ಮಾರ್ಕ್ ಕೊಡಬಹುದು. ಅದರಲ್ಲಿಯೂ ಚಿಟ್ಟಿ ಸ್ಟೈಲ್ ನೋಡುಗರಿಗೆ ಒಳ್ಳೆಯ ಮಜಾ ನೀಡುತ್ತದೆ. ಅಕ್ಷಯ್ ಕುಮಾರ್ ಅಭಿನಯ ಮುಖವಿಸ್ಮಿತರನ್ನಾಗಿ ಮಾಡುತ್ತದೆ. ಇಬ್ಬರಿಬ್ಬರ ನಟನೆ ಅದ್ಭುತ. ಆಮಿ ಜಾಕ್ಸನ್ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇಲ್ಲ.

ರಜನಿಕಾಂತ್ ಎಂಟ್ರಿ ಸೂಪರ್ ಆಗಿದೆ. ಶಂಕರ್ ಅಭಿಮಾನಿಗಳನ್ನು ನಿರಾಸೆಪಡಿಸಲ್ಲ. ರಜನಿಕಾಂತ್, ಅಕ್ಷಯ್ ಕುಮಾರ್ ನಟನೆ ಬಹಳಷ್ಟು ಕಾಲ ನೆನಪಿನಲ್ಲಿ ಉಳಿಯುತ್ತದೆ. ರೆಹಮಾನ್ ಅದ್ಭುತವಾದ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಬಾಹುಬಲಿ ಸೇರಿದಂತೆ ಈ ಹಿಂದಿನ ಎಲ್ಲ ಸೂಪರ್‍ಹಿಟ್ ಚಿತ್ರಗಳ ದಾಖಲೆಗಳನ್ನು 2.0 ಚಿಂದಿ ಮಾಡಲಿದೆ ಎಂದು ಚಿತ್ರ ವಿಮರ್ಶಕರು ವಿಶ್ಲೇಷಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com