ಅಂಬೇಡ್ಕರ್ ಭವನದಲ್ಲಿ ಅಂಬಿ ಶ್ರದ್ಧಾಂಜಲಿ ಸಭೆ : ‘ಮಾತಿನಲ್ಲಿ ಒರಟ ಹೃದಯದಲ್ಲಿ ಶ್ರೀಮಂತ’ ಎಂದ ಸಿಎಂ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ಅಂಬಿ ಶ್ರದ್ಧಾಂಜಲಿ ಸಭೆನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಮಾತನಾಡಿದರು. ‘ಹುಟ್ಟಿನಿಂದ ಒರಟು ಗುಣ ಅಂಬಿಯವರದು. ಸ್ನೇಹ ಹೇಗಿರಬೇಕು ಎಂದು ಅಂಬಿ ನೋಡಿ ಕಲಿತಿದ್ದೇನೆ ನಾನು. ಅಂಬಿ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಸೇರಿದರೂ ಶಾಂತ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಅಂತಿಮ ದರ್ಶನ ವೇಳೆ ಸಂಯಮ ಕಾಪಾಡಿದರು. ಮಂಡ್ಯ ಜನ ಒರಟಾದರು ಹೃದಯವಂತರು. ಮಂಡ್ಯ ಜನತೆಗೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು. ನಮ್ಮಿಂದ ಅಂಬಿ ದೂರ ಹೋದರು ಹೃದಯದಲ್ಲಿದ್ದಾರೆ. ರಾಮನಗರದಲ್ಲಿ ಫಿಲ್ಮ್ ವಿಶ್ವವಿದ್ಯಾಲಯ ಮತ್ತು ಮೈಸೂರಿನಲ್ಲಿ ಫಿಲ್ಮ್ ಸಿಟಿ ಅಂಬಿ ಹೆಸರಲ್ಲಿ ನಿರ್ಮಾಣ ಮಾಡೋಣ ಎಂದು ಹೇಳಿದರು. ಇನ್ನೂ ಅಂಬಿ ಸ್ಮಾರಕ ನಿರ್ಮಾಣ ಮಾಡಲು ತೀರ್ಮಾನ ಮಾಡಲು ಪ್ರಯತ್ನ ಪಡುತ್ತೇವೆ’ ಎಂದು ಸಿಎಂ ಮಾತನಾಡಿದರು. ಈ ವೇಳೆ ಅಂಬಿ ಕುಟುಂಬಸ್ಥರು, ಚಲನಚಿತ್ರರಂಗದ ಹಿರಿಯ ವ್ಯಕ್ತಿಗಳು, ನಟರು, ಗಣ್ಯರು, ಮಾಜಿ ಸಿಎಂ ಸಿದ್ಧರಾಮಯ್ಯ, ಸಚಿವ ದಿನೇಶ್ ಗುಂಡೂರಾವ್ ಮುಂತಾದವರು ಅಂಬಿಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಂಬಿಗೆ ಇಡೀ ಚಂದನವನ ನಮನ ಸಲ್ಲಿಸಿತು. 

 

Leave a Reply

Your email address will not be published.