Couple tips : ಸಂಗಾತಿಯ ಮನ ಗೆಲ್ಲಲು ಹುಡಗರು ಅನುಸರಿಸಬೇಕಾದ 8 ನಡೆಗಳು..

ಪ್ರಣಯ ಎನ್ನುವುದು ನಮ್ಮ ಜೀವನದ ಯಾವುದೇ ಹಂತದಲ್ಲೂ ತುಂಬಾ ಮುಖ್ಯವಾದದ್ದು. ಇದನ್ನು ಪಡೆಯುವುದಕ್ಕೆ ನೀವು ನಿಮ್ಮ ಪತಿಯ ಮೇಲೆ ಅವಲಂಬಿತವಾಗಿರುತ್ತೀರಿ. ಅನಿರೀಕ್ಷಿತವಾಗಿ ಮನೆಗೆ ಬೇಗನೆ ಹಿಂದಿರುಗುವುದು, ಮುಂಜಾನೆ ತಿಂಡಿ ತಾಯರಿಸುವುದು, ಅಥವಾ ಮೊಂಬತ್ತಿಯ ಮಂದ ಬೆಳಕಿನಲ್ಲಿ ಜೊತೆಗೆ ಊಟ ಮಾಡುವುದು, ಹೀಗೆ ಹೊಸ ಹೊಸ ವಿಧಾನಗಳನ್ನ ಹುಡುಕುತ್ತಲೇ ಇರುವನು. ನಿಮ್ಮ ಹೃದಯ ಗೆಲ್ಲಲು ಹೊಸ ದಾರಿಗಳನ್ನ ಹುಡುಕುತ್ತಲೇ ಇರುವನು. ನನ್ನ್ನ ನಂಬಿ, ನಿಮ್ಮನ್ನು ಖುಷಿ ಪಡಿಸಲಿಕ್ಕೆ ಅವನು ಮಾಡುವ ಪ್ರಯತ್ನದ ಹಿಂದಿನ ಪ್ರಾಮಾಣಿಕತೆ ಸೂಚಿಸುತ್ತದೆ, ಅವನೇನ ನಿಮಗೆ ಶ್ರೇಷ್ಠ ಜೋಡಿಯೆಂದು.

ಅವನು ಒಳ್ಳೆಯ ಕೇಳುಗ
ನಂಬಿಕೆ ಅನ್ನುವುದು ಒಂದು ವಿವಾಹದಲ್ಲಿ ಅತಿ ಮುಖ್ಯವಾದ ಅಂಶ. ಅವನ ತಾಪತ್ರಯಗಳಲ್ಲಿ(ಅವು ಇದ್ದಲ್ಲಿ ) ನಿಮ್ಮನ್ನ ನಂಬಿ ನಿಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು ಆಲಿಸುತ್ತಾನೆ ಅಂದರೆ, ನಿಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂದು. ಅದು, ಆತನು ನಿಮ್ಮ ಮಾತುಗಳಿಗೆ ಕಿವುಡುಗಿವಿ ಕೊಡದೆ, ಮರುಯೋಚಿಸದೆ ಅದನ್ನು ಪರಿಗಣಿಸುವನು ಎಂಬ ಸೂಚನೆ. ಇದು ಮುಂದೆ ಎದುರಾಗುವ ಸಮಸ್ಯೆಗಳನ್ನು ಒಟ್ಟಿಗೆ ನಿಂತು ಎದುರಿಸಲು ಒಳ್ಳೆ ಅಡಿಪಾಯ ಹಾಕಿ ಕೊಡುತ್ತದೆ.

ಅವನು ನಿಮ್ಮನ್ನು ಆರಾಧಿಸುತ್ತಾನೆ
ಸ್ವಲ್ಪ ಹೊಗಳಿಕೆ ಯಾವಾಗಲು ಚೆಂದ. ಹಾಗು ಇದನ್ನು ಅವನು ಮಾಡಿದಾಗ, ನಿಮ್ಮ ಬಗ್ಗೆ ಯಾವಾಗಲು ಮಾತದುತ್ತಿದರರೆ, ನಿಮ್ಮ ಬಗ್ಗೆ ಸ್ನೇಹಿತರ ಬಳಿ,ಬೇರೆಯವರ ಬಳಿ ಹೊಗಳುತ್ತಿದರೆ- ಅವನು ನಿಮ್ಮನ್ನು ಆರಧಿಸುತ್ತಾನೆಂದು. ಸಕ್ಕತ್ ಕ್ಷಣ ಯಾವುದು ಎಂದರೆ ನೀವು ಅತ್ತಿತ್ತ ಇಲ್ಲದಿದ್ದಾಗ, ಬೇರೆಯವರ ಬಳಿ ಅವನು ನಿಮ್ಮನ್ನು ಪಡೆಯುವುದಕ್ಕೆ ಎಷ್ಟು ಪುಣ್ಯ ಮಾಡಿದ್ದಾನೆ ಎಂದು ಹೊಗುಳುವುದನ್ನು ಅವನ ಅರಿವಿಗೆ ಬಾರದಂತೆ ಆಲಿಸುವುದು.

ಅವನು ನಿಮ್ಮ ಕೈ ಹಿಡಿದು ನಡೆಯಲು ಬಯಸುತ್ತಾನೆ
ಕೈ ಹಿಡಿದು ನಡೆಯುವಂತ ಸಣ್ಣ ನಡೆಯು, ಯಾವದೇ ಮಾತಿಲ್ಲಿದೆ, ಅವನು ನಿಮ್ಮನ್ನು ಎಷ್ಟು ಪರಿಗಣಿಸುತ್ತಾನೆ ಹಾಗು ಇಷ್ಟ ಪಡುತ್ತಾನೆ ಎಂದು ತೋರಿಸುತ್ತದೆ. ಅವನು ಇದನ್ನು ಪದೇ ಪದೇ ಮಾಡುತ್ತಾನೆ. ಕೇವಲ ಅವನು ನಿಮ್ಮ ಜೊತೆಗೆ ಎಂದಿಗೂ ಇರುವೆನೆಂದು ತಿಳಿಹೇಳಲು ಇದನ್ನು ಮಾಡುತ್ತಿರುತ್ತಾನೆ.ಅವನೊಂದಿಗೆ ಇದ್ದಾಗ ನಿಮಗೆ ಸುರಕ್ಷತಾ ಭಾವನೆ ಹೊಮ್ಮುತ್ತದೆ.

ನಿಮಗೆ ಸಿಟ್ಟು ಬರಿಸುವಂತ “ಕೆಲಸಗಳು” ಮಾಡುವುದಿಲ್ಲ
ಪಕ್ವತೆ ಹೊಂದಿರುವ ಯಾವುದೇ ವ್ಯಕ್ತಿಗೂ ಗೊತ್ತಿರುತ್ತದೆ “ತಿಂಗಳಿನ ಆ ದಿನ”ದ ಬಗ್ಗೆ ಮಾತಾಡಬಾರದೆಂದು.ಅದನ್ನು ಆಗಾಗ ಪ್ರಸ್ತಾಪಿಸದೆ ನಿಮಗೆ ಅದು ಹೇಗೆ ಅನಿಸುತ್ತದೆ ಎಂದು ಅರಿತಿರುತ್ತಾನೆ. ನಿಮ್ಮೊಂದಿಗೆ ಮಾತನಾಡಿ, ನಿಮ್ಮ ಮುಖದ ಮೇಲೆ ಕಿರುನಗೆ ಮೂಡಿಸಲು ಪ್ರಯತ್ನ ಮಾಡುತ್ತಾನೆ. ಹಾಗೂ ಕೆಲವೊಮ್ಮೆ ನಿಮಗೆ ಹಿತ ಎನಿಸಿದರೆ ನಿಮ್ಮ ಹೊಕ್ಕಳಿಗೆ ಮಸಾಜ್ ಕೂಡ ಮಾಡುತ್ತಾನೆ.

ಅವನೇ ಶುಚಿಗೊಳಿಸುತ್ತಾನೆ
ಅದು ಪಾತ್ರೆ ಬೆಳಗುವುದೇ ಇರಲಿ ಅಥವಾ ಶೌಚಾಲಯ ಸ್ವಚ್ಛ ಮಾಡುವುದೇ ಇರಲಿ, ಅವನು ಯಾವುದಕ್ಕೂ ಹಿಂಜರಿಯುವುದಿಲ್ಲ. ನಿಮ್ಮ ಜೊತೆ ಪಾತ್ರೆ ಬೆಳಗುತ್ತಾ, ಮನೆಕೆಲಸ ಮಾಡುತ್ತಾ ಕಳೆಯುವ ಆ ಕೆಲವು ಕ್ಷಣಗಳು ನಿಮ್ಮ ಮುಖದ ಮೇಲೆ ಮಂದಹಾಸ ಮೂಡಿಸುತ್ತವೆ. ಹೇಳೋಕ್ಕಾಗಲ್ಲ ನಿಮ್ಮ ಪತಿ ಒಂದೊಮ್ಮೆ ತಮ್ಮ ಬಟ್ಟೆಗಳನ್ನು ಸರಿಯಾಗಿ ಮಡಚಿ, ಕ್ರಮವಾಗಿ ಜೋಡಿಸಿ ನಿಮ್ಮನ್ನು ಆಶ್ಚರ್ಯಗೊಳಿಸಬಹುದು.

ತಿನ್ನುವುದು, ನಗುವುದು ಎಲ್ಲಾ ನಿಮ್ಮೊಂದಿಗೆ
ನೀವೇನು ಎಲ್ಲರಿಗಿಂತ ಚೆನ್ನಾಗಿ ಅಡುಗೆ ಮಾಡಬೇಕೆಂದಿಲ್ಲ, ನಿಮ್ಮ ಜೋಕ್ ಗಳು ತುಂಬಾ ನಗು ತರಿಸದೇ ಇರಬಹುದು, ಆದರೂ ಅವನು ಅದರಲ್ಲೇ ಖುಷಿ ಕಾಣುತ್ತಾನೆ. ಅವನು ನಿಮ್ಮ ಹಾಸ್ಯವನ್ನು ಇಟ್ಟುಕೊಂಡು ಇನ್ನ್ಯಾವುದೋ ವಿಷಯ ಕೆಣಕಿ ನಿಮ್ಮನ್ನು ನಗಿಸುವನು. ನಿಮ್ಮ ಕೈರುಚಿಯನ್ನು ಮೀರಿಸುವುದು ಯಾವುದು ಇಲ್ಲ ಎಂದು ಹೇಳಿ ನಿಮ್ಮನ್ನು ಖುಷಿ ಪಡಿಸುತ್ತಾನೆ. ಅವನಿಗೆ ಬೇಕಾಗಿರುವುದು ಒಂದೇ, ಅದೇ ನಿಮ್ಮ ನಗು !

ಅವನೊಡನೆ ಇದ್ದಾಗ ನಿಮ್ಮ ವ್ಯಕ್ತಿತ್ವವೇ ಬೇರೆಯದ್ದಾಗಿರುತ್ತದೆ
ನಿಮ್ಮ ಗಂಡ ಎಲ್ಲದರಲ್ಲೂ ಪರಿಪೂರ್ಣ ಆಗಿರಬೇಕಿಲ್ಲ, ಆದರೆ ನೀವು ಒಂದು ವಿಷಯ ಮಾತ್ರ ನೆನಪಿಡಲೇ ಬೇಕು. ಅವನ್ನು ನಿಮ್ಮನ್ನು ನಗಿಸಲು ಪ್ರಯತ್ನಿಸುತ್ತಿದಾನೆ ಎಂದರೆ, ನೀವು ಆಗಲೇ ಉತ್ತಮ ವ್ಯಕ್ತಿ ಆಗಿಬಿಡುತ್ತೀರಿ. ನಿಮ್ಮನ್ನು ನಗಿಸಲು ಹಿಂದಿರುವ ಅವನ ಶ್ರದ್ಧೆ, ಅವನ ಭಾವಲಹರಿ, ದೊಡ್ಡ ಯೋಜನೆ ಎಲ್ಲೊ ಒಂದು ಕಡೆ ಫಲ ಖಂಡಿತ ನೀಡುತ್ತದೆ. ಅವನ ಪ್ರಾಮಾಣಿಕತೆ ಒಪ್ಪಿಕೊಂಡ ನಿಮ್ಮ ಹೃದಯ ಮತ್ತು ಮನಸ್ಸು, ನಿಮ್ಮ ವ್ಯಕ್ತಿತ್ವವನ್ನು ಇನ್ನು ಹೆಚ್ಚು ಸುಧಾರಿಸುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com