IND vs AUS : ಮಳೆಯಿಂದಾಗಿ 2ನೇ T20 ಪಂದ್ಯ ರದ್ದು – ಕೊಹ್ಲಿಪಡೆಯ ಜಯದ ಕನಸಿಗೆ ಅಡ್ಡಿಯಾದ ವರುಣ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೆಲ್ಬೋರ್ನ್ ನಲ್ಲಿ ನಡೆಯುತ್ತಿದ್ದ 2ನೇ ಟಿ-20 ಪಂದ್ಯಕ್ಕೆ ಮಳೆ ಎಡೆಬಿಡದೇ ಕಾಡಿದ್ದರಿಂದ ಯಾವುದೇ ಫಲಿತಾಂಶ ಕಾಣದೇ ರದ್ದುಗೊಂಡಿದೆ. ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸುವ ಕೊಹ್ಲಿಪಡೆಯ ಕನಸಿಗೆ ವರುಣ ಅಡ್ಡಿಯಾಗಿದ್ದಾನೆ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ 19 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 132 ರನ್ ಮೊತ್ತ ಕಲೆಹಾಕಿತ್ತು. ಈ ವೇಳೆ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯವನ್ನು 19 ಓವರ್ ಗಳಿಗೆ ಇಳಿಸಿ, ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ ಗೆಲುವಿಗೆ 137 ಟಾರ್ಗೆಟ್ ನೀಡಲಾಯಿತು.

ಆದರೆ ಭಾರತದ ಇನ್ನಿಂಗ್ಸ್ ಆರಂಭಗೊಳ್ಳಲು ಮೇಘರಾಜ ಅನುವು ಮಾಡಿಕೊಡಲೇ ಇಲ್ಲ. ಮಳೆ ನಿಲ್ಲದ ಕಾರಣ ಅಂಪೈರ್ ಗಳು ಪಂದ್ಯವನ್ನು ರದ್ದುಗೊಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com