ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಷಿಪ್ : ಫೈನಲ್‍ಗೆ ಲಗ್ಗೆಯಿಟ್ಟ ಮೇರಿ ಕೊಮ್

ವಿಶ್ವವಿಖ್ಯಾತ ಬಾಕ್ಸಿಂಗ್ ಪಟು ಭಾರತದ ಮೇರಿ ಕೋಮ್ 48 ಕೆ.ಜಿ ವಿಭಾಗದ ಮಹಿಳೆಯರ ಬಾಕ್ಸಿಂಗ್ ವಿಶ್ವ ಚಾಂಪಿಯನ್ಷಿಪ್ ನ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.  ಗುರುವಾರ ದೆಹಲಿಯಲ್ಲಿ ನಡೆದ ಸೆಮಿಫೈನಲ್ ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಮೇರಿ ಕೋಮ್ ಉತ್ತರ ಕೋರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಮಣಿಸುವ ಮೂಲಕ ವಿಶ್ವಚಾಂಪಿಯನ್ಷಿಪ್ ನ ಫೈನಲ್ ಪ್ರವೇಶಿಸಿದ್ದಾರೆ.

ಸೆಮಿಫೈನಲ್ ಗೆಲುವಿನೊಂದಿಗೆ ಮೇರಿ ಕೋಮ್ 6ನೇ ಬಾರಿಗೆ ವಿಶ್ವ ಚಾಂಪಿಯನ್ಷಿಪ್ ಗೋಲ್ಡ್ ಮೆಡಲ್ ಗೆಲ್ಲುವ ಕನಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. 5 ಬಾರಿ ವಿಶ್ವ ಚಾಂಪಿಯನ್ ಷಿಪ್ ಜಯಿಸಿರುವ ಮೇರಿ ಕೋಮ್ 2012 ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com