ಪ್ರಾಮಾಣಿಕತೆಯಿಂದ ಮರುಪಾವತಿಸಿ, ಹೆಚ್ಚಿನ ಸಾಲ ಪಡೆಯಿರಿ : ವ್ಯಾಪಾರಿಗಳಿಗೆ ಸಿಎಂ ಹಿತನುಡಿ

ಬಡವರ ಬಂಧು ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಬಡವರ ಬಂಧು ಯೋಜನೆ ಸದುಪಯೋಗ ಮಾಡಿಕೊಳ್ಳಿ ಎಂದಿದ್ದಾರೆ. ಬಡ ಬೀದಿ ವ್ಯಾಪಾರಿಗಳಿಗೆ ಉತ್ತಮ ಬೆಳಕು ನೀಡುವ ಯೋಜನೆ ಇದಾಗಿದ್ದು, ಚಿಕ್ಕ ವಯಸ್ಸಿನಿಂದ ನಾನು ನೋಡಿರುವ ಸಮಸ್ಯೆಗೆ ಇವತ್ತು ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದಿದ್ದಾರೆ.  ಬೀದಿ ವ್ಯಾಪಾರಿಗಳಿಗೆ ಸಾಲ ಕೊಡೋರು ಮೈಮೇಲೆ ಚಿನ್ನದ ಕಡ್ಗ, ಒಂದು ಕೆಜಿ ಚಿನ್ನ ಹಾಕ್ಕೊಂಡಿರ್ತಾರೆ. ಅಂತವರೇ ಸಾಲ ನೀಡೋದು. ಕೆಲವರು ಗೂಂಡಗಳನ್ನ ಇಟ್ಕೊಂಡಿರ್ತಾರೆ. ನನಗೆ ಇಂತಹ ಪದಗಳನ್ನ ಬಳಸೋಕೆ ಭಯ ಆಗುತ್ತೆ, ನಾನೇನು ಹೇಳಿದ್ರೆ ಇನ್ನೇನು ಅರ್ಥ ಕಲ್ಪಿಸ್ತಾರೆ. ಇನ್ಮೇಲೆ ಒಂದು ಕಮಿಟಿ ರಚನೆ‌ ಮಾಡಿ ಅವರು ಹೇಳಿದಂತೆ ಮಾತನಾಡಬೇಕು ಏನೋ.. ಮೊನ್ನೆಯಾದ ಯಡವಟ್ಟು ಹೇಳಿಕೆಗೆ ಹೆಚ್‌ಡಿಕೆ ಈ ರೀತಿ ಮಾತನಾಡಿದರು.

ಇದೇ ವೇಳೆ ಇನ್ಪೋಸೀಸ್ ೧೦ ಸಾವಿರದಿಂದ ಕೆಲಸ ಆರಂಭ ಮಾಡಿ, ಇವತ್ತು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ನೀವು ಪ್ರಾಮಾಣಿಕವಾಗಿ ನಿಷ್ಟೆಯಿಂದ ಕೆಲಸ ಮಾಡಿದ್ರೆ ನಿಮಗೂ ಅದು ಸಾಧ್ಯವಿದೆ.  ಈ ಯೋಜನೆಯನ್ನ ಸದ್ಬಳಕೆ ಮಾಡಿಕೊಳ್ಳಿ. ಈ ಕಾರ್ಯಕ್ರಮ ಯಶಸ್ವಿಯಾಗಲು ತಾವು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮರುಪಾವತಿ ಮಾಡಬೇಕು. ಈ ಯೋಜನೆಯನ್ನು ಉತ್ತಮವಾಗಿ ಬಳಸಿಕೊಳ್ಳಿ. ಮೀಟರ್ ಬಡ್ಡಿ ದಂಧೆಕೋರರಿಗೆ ಭಯ ಬಿದ್ದು ಪ್ರಾಮಾಣಿಕವಾಗಿ ನೀಡ್ತಿದ್ದಂತೆ ಸರ್ಕಾರಕ್ಕೆ ಹಣ ಮರುಪಾವತಿ ಮಾಡಿ. ಯಾವುದೇ ಭಯ, ಆತಂಕ ಕೆಟ್ಟ ಪದಗಳು ಬೇಡ. ಸ್ವಾಭಿಮಾನದ ಕೆಲಸ ಮಾಡಲು ಸಾಧ್ಯವಾಗುತ್ತದೆ.  ಪ್ರಾಮಾಣಿಕತೆಯಿಂದ ಮರುಪಾವತಿ ಮಾಡಿ ಮತ್ತೆ ಹೆಚ್ಚಿನ ಸಾಲ ಪಡೆದುಕೊಳ್ಳಿ ಎಂದು ವ್ಯಾಪಾರಿಗಳಿಗೆ ಹೆಚ್ಡಿಕೆ ಹಿತನುಡಿಗಳನ್ನಾಡಿದರು.

ಜೊತೆಗೆ  ಬೀದಿ ವ್ಯಾಪಾರಿಗಳಿಗೆ ನಾವು ಸರಿಯಾದ ಜಾಗ ಕೊಟ್ಟಿಲ್ಲ. ರಸ್ತೆ ಬದಿ ಬಿಟ್ರೆ ಬೇರೆ ಜಾಗ ಇಲ್ಲ. ದಯವಿಟ್ಟು ‌ಮನವಿ ಮಾಡ್ತೀನಿ. ರಸ್ತೆ ಬದಿಯಲ್ಲಿ ಸಂಚಾರಕ್ಕೆ ಸಮಸ್ಯೆಯಾಗದಂತೆ ಅವರಿಗೆ ವ್ಯವಸ್ಥೆ ಮಾಡಿಕೊಡಿ. ಅದನ್ನ ಬಿಟ್ಟು ಅವರಿಗೆ ತೊಂದರೆ ಕೊಡಬೇಡಿ, ಅವರಿಂದ ೫೦-೬೦ ಕಿತ್ಕೋಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿದರು.

ಈ ಹಿಂದೆ ಆಗಿರುವ ವ್ಯವಸ್ಥೆಗಳನ್ನ ಸರಪಡಿಸಲು ನಾನು ಪರಮೇಶ್ವರ್ ಪ್ರಯತ್ನ ಪಡ್ತಿದ್ದೀವಿ, ಅದಕ್ಕೆ ಸ್ವಲ್ಪ ಟೈಂ ತೆಗೆದುಕೊಳ್ಳುತ್ತೆ. ಪೇದೆಗಳಿಗೆ ಬರುವ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗಲ್ಲ, ಅದು ಗೊತ್ತಿದೆ. ಆ ಸಮಸ್ಯೆ ನಿವಾರಣೆಗೆ ನಾವು ಪ್ರಯತ್ನ ಪಡ್ತಿದ್ದೀವಿ.ಇದು ನಿಮ್ಮ‌ಸರ್ಕಾರ ನಿಮಗೆ ನೆರವಾಗ್ತೀವಿ ಎಂದು  ಪೊಲೀಸ್ ಪೇದೆಗಳಿಗೆ ಸಿಎಂ ಹೆಚ್‌ಡಿಕೆ ಸೂಚನೆ ನೀಡಿದರು.

Leave a Reply

Your email address will not be published.

Social Media Auto Publish Powered By : XYZScripts.com