Bigg Boss 6 – ಹೆಣ್ಣಾಗು ಗಂಡಾಗು ಆಟ : ಗೆಟಪ್ ಚೇಂಜಾದ ಪುರುಷರ ಐಟಮ್ ಡ್ಯಾನ್ಸ್

ನಿನ್ನೆ ಬಿಗ್ ಬಾಸ್ ನೋಡುತ್ತಿದ್ದ ಪ್ರತಿಯೊಬ್ಬ ವೀಕ್ಷಕರಿಗೂ ಮಜವೋ ಮಜಾ. ಸೀರೆ, ಲಂಗ, ನೈಟಿ, ಅನಾರ್ಕಲಿ, ಸ್ಕರ್ಟ್ ತೊಟ್ಟು ನಾಚಿ ನುಲಿದು ನೃತ್ಯ ಮಾಡಿದ ಮನೆಯ ಪುರುಷ ಸದಸ್ಯರು ವೀಕ್ಷರನ್ನ ಸಕತ್ ಎಂಟರ್ಟೇನ್ ಮಾಡಿದ್ರು. ಪೇಟಾ, ದೋತಿ, ಪಂಚೆ, ಲುಂಗಿ ತೊಟ್ಟು ಗಂಡಸಿನಂತೆ ವರ್ತಿಸಿದ ಮಹಿಳಾ ಸದಸ್ಯರ ಆಕ್ಟಿಂಗ್ ಸೂಪರ್ ಡೂಪರ್. ಒಬ್ಬರಿಗಿಂತ ಒಬ್ಬರು ಟಾಪ್.   ಪ್ರತಿಯೊಬ್ಬ ಮನೆಯ ಸದಸ್ಯರೂ ಕೂಡ ಬಿಗ್ ಬಾಸ್ ವೀಕ್ಷಕರನ್ನ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ.

ಹೆಣ್ಣಿನ ಕಷ್ಟ ಗೊಡ್ಡದು. ಗಂಡಿನ ಕಷ್ಟ ದೊಡ್ಡದು ಅಂದಕೊಳ್ಳುವ ಪ್ರತಿಯೊಬ್ಬ ಮನೆಯ ಸದಸ್ಯರಿಗೂ ನಿನ್ನೆ ಬಿಗಾಬಾಸ್ ಮನೆಯಲ್ಲಿ ಒಂದು ಆಟವನ್ನ ನೀಡಿಲಾಗಿತ್ತು. ಆ ಆಟದ ಹೆಸರು ಹೆಣ್ಣಾಗು ಗಂಡಾಗು. ಅಂದರೆ ಮಹಿಳೆಯರು ಪುರುಷರ ಉಡುಗೆ ತೊಟ್ಟು ಪುರುಷರಂತೆ ನಟಿಸಬೇಕು ಮತ್ತು ಪುರುಷರು ಮಹಿಳೆಯರ ಉಡುಗೆ ತೊಟ್ಟು ಮಹಿಳೆಯರಂತೇ ವರ್ತಿಸಬೇಕು. ಜೊತೆಗೆ ಬಝರ್ ಆದಾಗಲೆಲ್ಲಾ ಒಂದೊಂದು ಐಟಮ್ ಸಾಂಗ್ ಪ್ಲೇ ಆದಾಗ ಬಿಗ್ ಬಾಸ್ ಸೂಚಿಸಿದ ವ್ಯಕ್ತಿ ಅಂದರೆ ಮಹಿಳೆ ಉಡುಗೆ ತೊಟ್ಟ ಪುರುಷ ಡ್ಯಾನ್ಸ್ ಮಾಡಬೇಕು.

ಗಡ್ಡಾ,ಮೀಸೆ ತೆಗೆದು ಮೇಕಪ್ ಮಾಡಿಕೊಂಡು ವಿಗ್ ಹಾಕಿ ಮಹಿಳಾ ಉಡುಗೆ ತೊಟ್ಟು ಬಿಗ್ ಬಾಸ್ ಮನೆಯ ಸದಸ್ಯರು ಮಾಡಿದ ಡ್ಯಾನ್ಸ್ ಯಾವ ಐಟಮ್ ಸಾಂಗ್ ಗೂ ಕಮ್ಮಿ ಇರಲಿಲ್ಲ. ಜೊತೆಗೆ ಮೀಸೆ ಹಚ್ಚಿಕೊಂಡು, ತಲೆಗೆ ಪೇಟಾ, ಟಾವೆಲ್ ಕಟ್ಟಿಕೊಂಡು ಪುರುಷರಂತೆ ನಟಿಸಿ ತಳ್ಳೋ ಬಂಡಿ ಟಾಕ್ಸ್ ಆಡಿದ ಮಹಿಳಾ ಸದಸ್ಯರು ಸಕತ್ ಮಿಂಚಿದರು.

ಗೆಟಪ್ ಚೇಜ್ ಆದ ಮನೆಯ ಸದಸ್ಯರ ಫೋಟೊ ಪೋಸ್ ಹೀಗಿತ್ತು-

 

Leave a Reply

Your email address will not be published.

Social Media Auto Publish Powered By : XYZScripts.com