ಬೆಂಗಾಲಿ ಬೆಡಗಿ ಐಂದ್ರಿತಾ ರೇ – ದೂದ್‌ಪೇಡಾ ದಿಗಂತ್ ಮದುವೆ ನಿಶ್ಚಯ

ಮನಸಾರೆ ಕನ್ನಡ ಚಿತ್ರದ ಮೂಲಕ  ಪ್ರೇಕ್ಷಕರ ಮನ ಗೆದ್ದ ಬೆಂಗಾಲಿ ಬೆಡಗಿ ಐಂದ್ರಿತಾ ರೇ ಮತ್ತು ದಿ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ದೂದ್‌ಪೇಡಾ ದಿಗಂತ್ ಅವರಿಗೆ ಕಂಕಣ ಬಾಗ್ಯ ಕೂಡಿ ಬಂದಿದೆ. ಇದೇ ಡಿಸೆಂಬರ್ ಎರಡನೇ ವಾರದಲ್ಲಿ ಮದುವೆ ಮೂಹೂರ್ತ ಫಿಕ್ಸ್ ಆಗಿದೆ.  ಕಳೆದ 2-3 ವರ್ಷಗಳಿಂದ ಚಂದನವನದಲ್ಲಿ ಹರಿದಾಡುತ್ತಿದ್ದ ನಟ ದಿಗಂತ್‌ ಮತ್ತು ನಟಿ ಐಂದ್ರಿತಾ ಮದುವೆ ಸುದ್ದಿ ಈಗ ಖಾತ್ರಿಯಾಗಿದೆ. ಮೂಲಗಳ ಪ್ರಕಾರ, ಈಗಾಗಲೇ ಎರಡೂ ಕುಟುಂಬಗಳ ನಡುವೆ ವಿವಾಹ ಮಾತುಕತೆ ನಡೆದಿದ್ದು, ಮುಂಬರುವ ಡಿಸೆಂಬರ್‌ ಎರಡನೇ ವಾರ ದಿಗಂತ್‌, ಐಂದ್ರಿತಾ ಮದುವೆ ನಡೆಯಲಿದೆ ಎನ್ನಲಾಗಿದೆ. ಇನ್ನು ಈ ಮದುವೆಗಾಗಿ ಎರಡೂ ಕಡೆಗಳ ಕುಟುಂಬ ವರ್ಗ ಅಂತಿಮ ಹಂತದ ಸಿದ್ಧತೆಯಲ್ಲಿದೆ. ಇತ್ತೀಚೆಗೆ ದಿಗಂತ್‌, ಐಂದ್ರಿತಾ ಜೋಡಿ ತಮ್ಮ ಸ್ನೇಹಿತರ ಜೊತೆ ವಿದೇಶ ಪ್ರವಾಸದಲ್ಲಿದ್ದು, ಶೀಘ್ರದಲ್ಲಿಯೇ ಮದುವೆ ದಿನಾಂಕ ಬಹಿರಂಗಪಡಿಸಲಿದ್ದಾರೆ.

ದಿಗಂತ್‌ ಮತ್ತು ಐಂದ್ರಿತಾ ರೇ ಸದ್ಯದಲ್ಲಿಯೇ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವದನ್ನ ಸ್ವತಃ ದಿಗಂತ್‌  ಬಾಯ್ಬಿಟ್ಟಿದ್ದಾರೆ. ಈ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್‌ನಲ್ಲಿ ವಾಲಗ ಊದಿಸುವುದಾಗಿ ಅವರು ಬಂಗಾಳಿ ಬೆಡಗಿ ಐಂದ್ರಿತಾ ರೇ ಸಹ ದಿಗಂತ್‌ರೊಂದಿಗೆ ಮದುವೆಯಾಗುತ್ತಿರುವುದಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಡಿಂಪಲ್ ಹುಡುಗ ಹಾಗೂ ವಜ್ರ ಎರಡನ್ನೂ ತನ್ನದಾಗಿಸಿಕೊಂಡಿದ್ದೇನೆ ಎಂದು ದಿಗಂತ್ ಜತೆಗಿರುವ ಫೋಟೋಗಳನ್ನು ಐಂದ್ರಿತಾ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ದಿಗಂತ್ ಜತೆಗೆ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿರುವ ಐಂದ್ರಿತಾ ಉಂಗುರ ಬದಲಾಯಿಸಿಕೊಂಡಿದ್ದು, ಈ ಫೋಟೋಗಳನ್ನು ಇಂದು ಹಂಚಿಕೊಂಡಿದ್ದು, ಮದುವೆಯಾಗುತ್ತಿರುವುದಾಗಿಯೂ ಬರೆದುಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com