ಕಬ್ಬಿನ ಕಗ್ಗಂಟು : ಗಟ್ಟಿ ಭರವಸೆ ನೀಡಿ ಹೀರೊ ಆದ ಸಿಎಂ ಕುಮಾರಸ್ವಾಮಿ

ರೈತರನ್ನು ನಿಂದಿಸಿದ್ದಾರೆ, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು 2-3 ದಿನಗಳಿಂದ ಆರೋಪ ಎದುರಿಸುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ದಿಟ್ಟ ನಿರ್ಧಾರಗಳನ್ನು ಕೈಗೊಂಡು, ಕಬ್ಬು ಬೆಳೆಗಾರರ ವಿಶ್ವಾಸಕ್ಕೆ ಅರ್ಹರಾದರು.
ಕಬ್ಬು ಬೆಳೆಗಾರರು, ರೈತ ನಾಯಕರು ಮತ್ತು ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಇಡೀ ದಿನ ಸಮಾಲೋಚನೆ ನಡೆಸಿದ ಕುಮಾರಸ್ವಾಮಿ ಬೆಳೆಗರರು ಮತ್ತು ಮಾಧ್ಯಮದವರದಲ್ಲಿದ್ದಹಲವು ಸಂಶಯಗಳನ್ನು ನಿವಾರಿಸುವಲ್ಲಿ ಸಫಲರಾಗಿ ಹೀರೊ ಎನಿಸಿದರು.
ಇದು ಅಚಿತಿಮ ಸಭೆಯಲ್ಲ, ಹಂತಹಂವಾಗಿಎಲ್ಲ ಸಮಸ್ಯೆಗಳನ್ನು ಪರಿಹಾರಮಡುವುದಾಗಿ ಭರವಸೆ ನೀಡಿ ರೈತರಿಗೆ ವಿಶ್ವಾಸ ತುಂಬುವಲ್ಲಿ ಸಫಲರಾದದರು. ಕಾರ್ಖನೆಯಪ್ರತಿನಿಧಿಗಳಷ್ಟೇಬಂದಿರುವುದರಿಮದ ಅವರಿಗೆ ಅಚಿತಿಮ ನಿರ್ಣಯ ತೆಗೆದುಕೊಳ್ಳಲಾಗಿಲ್ಲ ಎಂದ ಸಿಎಂ, 28ರೊಳಗಾಗಿಮಾಲಿಕರ ಸಭೆನಡೆಸಿ ಎಲ್ಲ ಸಮಸ್ಯೆಗಳನ್ನು ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕಬ್ಬನ ದರ ಮತ್ತು ಬಾಕಿಹಣದ ಸಮಯೆಗಳಲ್ಲದೇ, ರೈತರ ಒಟ್ಟ 13 ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮ ಟೀಕಾಕಾರರಿಗೆ ಮತ್ತು ತಮ್ಮನ್ನು ವಿಲನ್ ಎಂಬಂತೆ ಚಿತ್ರಿಸಲು ಯತ್ನಿಸಿದ್ದ ಹಲವು ಮಾಧ್ಯಮಗಳಿಗೆ ಪರೋಕ್ಷವಾಗಿ ಬಿಸಿಯನ್ನು ಮುಟ್ಟುವಲ್ಲಿ ಸಫಲರಾದರು. ಹಿಂದೆಲ್ಲ ಇಂತಹ ಸಭೆಗಳಾದಾಗ ಸರ್ಕಾರ, ರೈತರು ಮತ್ತು ಕಾರ್ಖಾನೆಗಳ ಮಾಲಿಕರ ನಡುವೆ ಹಗ್ಗ ಜಗ್ಗಾಟ ನಡೆದು, ಸಭೆಯಲ್ಲಿ ಗೊಂದಲ, ಗದ್ದಲ ಏರ್ಪಡುತ್ತಿದುದನ್ನು ಪರಿಗಣಿಸಿದಾಗ, ಇಂದುಸುಗಮ ಸಭೆ ನಡೆಯುವಂತೆ ಮುತ್ಸದ್ಧಿತನ ಪ್ರದಶಿಶಸಿದ ಕುಮಾರಸ್ವಾಮಿ, ಈ ವಿಷಯದ ಮಟ್ಟಿಗಂತೂ ಹೀರೊ ಆಗಿರುವುದು ಸತ್ಯ.
ಕುಮಾರಸ್ವಾಮಿ ನೀಡಿದ ಭರವಸೆಗಳು:
• ಈಗಿಂದಲೇ ಎಫ್‍ಆರ್‍ಪಿ ದರದಂತೆ ಕಬ್ಬು ಖರೀದಿಸಲು ಕಾರ್ಖಾನೆಗಳಿಗೆ ಸೂಚನೆ. ಬೆಂಬಲ ಬೆಲೆ ನೀಡುವ ಭರವಸೆ.
• ನಾನು ಅÀಧಿಕಾರಕ್ಕೆ ಬಂದಾಗ ಎಫ್‍ಆರ್‍ಪಿ ಲೆಕ್ಕದಲ್ಲಿ 2,000 ಕೋಟಿ ಬಾಕಿÀಯಿತ್ತು. ಕೇಂದ್ರ ಸರ್ಕಾರದ ಪ್ಯಾಕೇಜ್ ನೆರವಿನಿಂದ 1962 ಕೋಟಿ ರೂ. ಬಾಕಿಯನ್ನು ತೀರಿಸಲಾಗಿದ್ದು, ಉಳಿದ 38 ಕೋಟಿ ಬಾಕಿ ತೀರಿಸಲು ಕಾರ್ಖಾನೆಗಳಿಗೆ ಸೂಚನೆ ನೀಡುತ್ತೇವೆ.
• ಕಬ್ಬು ಬೆಳೆÀಗಾರರ ಪ್ರಕಾರ, 450 ಕೋಟಿರೂ. ಬಾಕಿಯಿದೆ. ಕಾರ್ಖಾನೆ ಮಾಲಿಕರು ರೈತರೊಂಇಗೆ ಮಾತಿನ ಒಡಬಂಡಿಕೆ ಮಾಡಿಕೊಂಡು,ಎಫ್‍ಆರ್‍ಪಿದರಕ್ಕಿಂತ ಹೆಚ್ಚಿನ ದರ ನೀಡುವುದಾಗಿ ಹೇಳಿ ಖರೀದಿಸಿದ್ದರಿಂದದು 450 ಕೋಇ ರೂಬಾಕಿ ಉಳಿದಿರಬಹುದು. ಇದನ್ನು ಪರಿಶೀಲಿಸಿ, ಕಾಖಾನೆಗಳ ಮಾಲಿಕರು ಕೊಟ ್ಟಮಾತಿನಂತೆ ನಡೆದುಕೊಳ್ಳುವಂತೆ ಸೂಚಿಸಲಾಗುವುದು.
• ತೂಕದಲ್ಲಿನ ಮೋಸ ತಪ್ಪಿಸಲು ಎಲ್ಲ ಕಾರ್ಖಾನೆಗಳು ಡಿಜಿಟಲ್ ಅಳತೆ ಯಂತ್ರಗಳನ್ನು ಅಳವಡಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
• ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು, ಇಲ್ಲಿವರೆಗೆ ಪ್ರತಿಭಟನಾ ನಿರತರೈತರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಲಾಗುವುದು.
• ಈರುಳ್ಳಿ, ಜೋ¼, ಭತ್ತದ ಬೆಳೆಗಳಿಗೆ ನ್ಯಯೋಚಿತ ಬೆಂಬಲ ನೀಡಲಾಗುವುದು.
• ಸರ್ಕಾರಿಂದ ಭತ್ತ ಅಥವಾ ಅಕ್ಕಿ ಖರೀದಿಸುವ ಕುರಿತಂತೆ ನಾಡಿದು ಆಹಾರ ಇಲಾಖೆಯ ಅಧಿಕಾರಗಳ ಸಭೆ ಕರೆದಿದ್ದು ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.
ಯಾವುದೇ ಗೊಂದಲಗಳಿಗೆ ಆಸ್ಪದವಿರದಮತೆ ಸುದಿಗೋಷಿಯಲ್ಲಿ ಮಾತಾಡಿ ಕುಮಾರಸ್ವಾಮಿಯವರ ಮೇಲೆ ಈ ಎಲ್ಲ ಭರವಸೆಗಳನ್ನು ಈಡೇರಿಸುವ ಮಹತ್ತರ ಜವಾಬ್ದಾರಿಯಿದೆ.
ಕಾದು ನೋಡೋಣ.

Leave a Reply

Your email address will not be published.

Social Media Auto Publish Powered By : XYZScripts.com