ದೆಹಲಿ ಸಿಎಂ ಕೇಜ್ರಿವಾಲ್ ಮೇಲೆ ಖಾರದ ಪುಡಿ ದಾಳಿ – ವ್ಯಕ್ತಿಯ ಬಂಧನ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬ ಖಾರದ ಪುಡಿ ಎಸೆಯುವ ಮೂಲಕ ದಾಳಿ ನಡೆದಿದ್ದಾನೆ. ಆತನನ್ನು ಬಂಧಿಸಲಾಗಿದ್ದು ಅನಿಲ್‍ಕುಮಾರ್ ಎಂದು ಗುರುತಿಸಲಾಗಿದೆ. ಬಿಗಿಭದ್ರತೆಯ ಸಚಿವಾಲಯದ ಕಟ್ಡಡದಲ್ಲೇ ಈ ಘಟನೆ ನಡೆದಿದ್ದು ಇದರ ಹಿಂದೆ ರಾಜಕೀಯ ಕೈವಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಅಧಿಕಾರಿಗಳೊಂದಿಗೆ ಸಭೆಗಳನ್ನು ಮುಗಿಸಿ ಊಟಕ್ಕೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ಕೇಜ್ರಿಆಲ್ ಅವರು ತಮ್ಮ ಕಚೇರಿಯ ಹೊರಗೆ ಬಂದಾಗ ಅವರಿಗೆ ಚೀಟಿಯೊಂದನ್ನು ನೀಡಿದ ದುಷ್ಕರ್ಮಿ, ಅವರ ಕಾಲು ನಮಸ್ಕರಿಸಲು ಬಾಗಿದ್ದಾನೆ. ನಂತರ ಎದ್ದವನೇ ಏಕಾಏಕಿ ಕೇಜ್ರಿವಲ್ ಅವರ ಮುಖದಮೇಲೆ ಖಾರದ ಪುಡಿಯನ್ನು ತೂರಿದ್ದಾನೆ.
ಕೇಜ್ರಿವಾಲ್ ಜೊತೆಗಿದ್ದ ಆಮ್ ಆದ್ಮಿ ಪಾರ್ಟಿಯ ಶಾಸಕಿ ಅಲ್ಕಾ ಲಾಂಬಾ, ‘ಕೇಂದ್ರದ ಬಿಜೆಪಿಸರ್ಕಾರದ ನಿಯಂತ್ಣದಲ್ಲಿರುವ ದೆಹಲಿ ಪೊಲೀಸರು ಕೇಜ್ರಿವಾಲ್ ಅವರಿಗೆ ಸೂಕ್ತ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ’ ಎಂದು ದೂರಿದ್ದಾರೆ. ‘ಸಮಾಜ ವಿರೋಧಿ ಶಕ್ತಿಗಳು ಪದೇಪೇ ಸಚಿವಾಲಯದೊಳಕ್ಕೆ ಬರುವ ಘಟನೆಗಳು ಸಂಭವಿಸುತ್ತಿದ್ದುದೆಹಲಿ ಪೊಲೀಸರು ಇದನ್ನುತಡೆಯುತ್ತಿಲ್ಲ. ಇದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಅಲ್ಕಾ ಲಾಂಬಾ ಅಪಾದಿಸಿದ್ದಾರೆ.
ಘಟನೆಯ ವಿಡಿಯೋದಲ್ಲಿ ಎಲ್ಲವೂ ಸ್ಪಷ್ಟವಾಗಿದ್ದರೂ,ಇದು ಉದ್ದೇಶಪೂರ್ವಕ ಕೃತ್ಯ ಹೌದೋ, ಅಲ್ಲವೋ ಎಂದು ತನಿಖೆ ಮಾಡಲಾಗುತ್ತಿದೆ ಎಂದಿರುವ ದೆಹಲಿ ಪೊಲೀಸರ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಮನೀಶ ಸಿಸೋಡಿಯಾ, ‘ಕೇಜ್ರಿವಾಲ್ ಮೇಲೆ ದಾಳಿ ಮಾಡುವವರನ್ನು ನಾವು ರಕ್ಷಿಸುತ್ತೇವೆ ಎಂದು ಬಿಜೆಪಿ ಸಂದೇಶ ನೀಡುತ್ತಿದೆ’ ಎಂದು ಅಪಾದಿಸಿದ್ದಾರೆ.
ವಿವಿಧ ಪಕ್ಷಗಳ ರಾಜಕೀಯ ನಾಯಕರು ಈ ಘಟನೆಯನ್ನು ಖಂಡಿಸಿದ್ದು, ಸೂಕ್ತ ತನಿಖೆಗೆ ಆದೇಶಿಸಿದ್ದಾರೆ. ದೆಹಲಿ ಪೊಲೀಸರ ಹೇಳಿಕೆ ಖಂಡಿಸಿ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, ಆತನ ಕೈಯಿಂದ ಕೆಳಮುಖವಗಿ ಸುರಿಯುವ ಖಾರದ ಪುಡಿ ಒಮ್ಮೆಲೇ ಮೇಲಕ್ಕೆ ಹಾರಿ, ಕೇಜ್ರಿವಾಲ್ ಮುಖಕ್ಕೆ ರಾಚುವುದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ. ಘಟನೆ ಆಕಸ್ಮಿಕ ಇರಬಹುದು ಎಂಬ ದೆಹಲಿ ಪೊಲೀಸರ ಕುತರ್ಕದ ಹಿಂದೆ ಅಪರಾಧಿಯನ್ನು ರಕ್ಷಿಸುವ ಹುನ್ನಾರವಿದೆ ಎಂದು ಒಮರ್ ಅಭಿಪ್ರಾಯ ಪಟ್ಟಿದ್ದಾರೆ.
ಸ್ವರಾಜ್ ಇಂಡಿಯಾದ ಸಂಚಾಲಕ ಯೋಗೆಂದ್ರ ಯಾದವ್, ಈ ಘಟನೆಯಿಂದ ದು:ಖ ಮತ್ತು ಗಾಬರಿಯಾಗಿದೆ. ಕೇಜ್ರಿವಾಲ್ ಸುರಕ್ಷಿತವಾಗಿರುವುದು ಸಮಾಧಾನ ತಂದಿದೆ. ಎಲ್ಲರೂ ಈ ಘಟನೆಯನ್ನು ತೀವ್ರವಾಗಿ ಖಂಡಿಸಬೇಕಿದೆ ಎಂದು ಹೇಳಿದ್ದಾರೆ.
‘ಇದೊಂದು ಹೇಯ ಮತ್ತು ಅಪಾಯಕಾರಿ ಕೃತ್ಯ’ ಎಂದಿರುವ ಮಾಜಿ ಆಪ್ ನಾಯಕ ಅಶುತೋಷ್, ‘ಇದೊಂದು ಗಂಭೀರ ಭದ್ರತಾ ವೈಫಲ್ಯವಾಗಿದ್ದು, ದೆಹಲಿ ಪೊಲೀಸರು ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ದ್ವೇóಷ ಮತ್ತು ನಂಜಿನ ರಾಜಕಾರಣವು ಬಾಪುರನ್ನು ಬಲಿ ತೆಗೆದುಕೊಂಡಿತು. ದ್ವೇಷ ರಾಜಕಾರಣವು ಇಲ್ಲಿಗೇ ನಿಲ್ಲಬೇಕಿದೆ. ಭಾರತಕ್ಕೆ ಹಿಂಸೆಯಲ್ಲ, ಆರೋಗ್ಯಕರ ಪ್ರಜಾಪ್ರಭುತ್ವ ಬೇಕಿದೆ’ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com