ಮದುವೆ ಮೆರವಣಿಗೆಯಲ್ಲಿ ವರನಿಗೆ ಗುಂಡೇಟು : ಬ್ಯಾಂಡೇಜ್ ಹಾಕಿಕೊಂಡೇ ತಾಳಿ ಕಟ್ಟಿದ ಮದುಮಗ

ನವದೆಹಲಿಯಲ್ಲಿ ತಮ್ಮ ಮದುವೆಗೆ ತೆರಳುತ್ತಿದ್ದ ವರಗೆ ಗನ್ ಮ್ಯಾನ್ ಗಳು ಗುಂಡು ಹಾರಿಸಿದ ಪರಿಣಾಮ ಕೆಲವು ಗಂಟೆಗಳ ನಂತರ ವರ ಮದುವೆ ಕಾರ್ಯ ಮುಗಿಸಿದ ಘಟನೆ ನಡೆದಿದೆ.  ಮದಂಗೀರ್ ಪ್ರದೇಶದಲ್ಲಿ 25 ವರ್ಷ ವಯಸ್ಸಿನ ವರನ ಮದುವೆಯ ಅತಿಥಿಗಳು ವಿಪರೀತ ಬೀದಿ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದರು. ಇದಕ್ಕೆ ದಾಳಿಕೋರರು ತಮಗೆ ದಾರಿ ಕೊಡಲಿಲ್ಲ ಎಂಬ ಕಾರಣಕ್ಕೆ ವರನಿಗೆ ಗುಂಡು ಹಾರಿಸಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

ತಕ್ಷಣ ಭುಜದ ಮೇಲೆ ಗುಂಡು ಹೊಕ್ಕ ವರನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ವೈದ್ಯರು ರಕ್ತಸ್ರಾವವನ್ನು ತಡೆಹಿಡಿದರು. ಆದರೆ ಪ್ರಮುಖ ಶಸ್ತ್ರಚಿಕಿತ್ಸೆಯಿಲ್ಲದೆ ಸುಲಭವಾಗಿ ಗುಂಡಿಯನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ಚೇತರಿಸಿಕೊಂಡ ವರ ಬ್ಯಾಂಡೇಜ್ ಹಾಕಿಕೊಂಡು ಕೇವಲ ಮೂರು ಗಂಟೆಗಳ ನಂತರ ಹಿಂದಿರುಗಿ ವಧುವಿನೊಂದಿಗೆ ಮದುವೆಯ ಆಚರಣೆಗಳನ್ನು ಮುಗಿಸಿದ್ದಾರೆ. “ಭುಜದ ಎಲುಬುಗಳ ನಡುವೆ ಬುಲೆಟ್ ಸಿಲುಕಿದೆ” ಎಂದು ದೆಹಲಿಯ ಉಪ ಪೊಲೀಸ್ ಆಯುಕ್ತ ವಿಜಯ್ ಕುಮಾರ್ AFP ಗೆ ತಿಳಿಸಿದರು. ಇಬ್ಬರು ಶಂಕಿತರ ಪತ್ತೆಗೆ ಪೊಲೀಸರು ಹುಡುಕುತ್ತಿದ್ದಾರೆ.

Leave a Reply

Your email address will not be published.