ಛತ್ತೀಸಘಡ್ ವಿಧಾನಸಭೆ ಚುನಾವಣೆ : 2ನೇ ಹಂತದಲ್ಲಿ ಶೇಕಡಾ 71.2 ಮತದಾನ

ರಾಯಪುರ್ : ಛತ್ತೀಸಘಡ್ ವಿಧಾನಸಭೆಗೆ ನಡೆದ ಚುನಾವಣೆಯ 2ನೇ ಮತ್ತು ಕೊನೆಯ ಹಂತದಲಿ ಸಂಜೆ 6ರ ಹೊತ್ತಿಗೆ ಶೇ. 71.2ರಷ್ಟು ಮತದಾನವಾಗಿದೆ.
19 ಜಿಲ್ಲೆಗಳ 72ಕ್ಷೇತ್ರಗಳಿಗೆ ನಡೆದ ಸ್ಪರ್ದೆಯಲ್ಲಿ 1,079 ಅಭ್ಯರ್ಥಿಗಳು ಕಣದಲ್ಲಿದ್ದರು. 90 ಕ್ಷೇತ್ರಗಳ ವಿಧಾನಸಭೆಗೆ ಮೊದಲ ಹಂತದಲ್ಲಿ 18 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಕಳೆದ 15 ವರ್ಷಗಳಿಂದ ಛತ್ತೀಸಘಡ್ದಲ್ಲಿ ಬಿಜೆಪಿ ಸರ್ಕಾರವಿದ್ದು, ರಮಣಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷಿ ನಡೆಸಿದ ಉಪ ಚುನಾವಣಾ ಆಯುಕ್ತ ಉಮೇಶ ಸಿನ್ಹಾ, ಮತದಾನ ಪ್ರಮಾಣದ ಕೊನೆ ಗಳಿಗೆಯ ವಿವರ ಬರಬೇಕಿದ್ದು, ಮತದಾನ ಪ್ರಮಾಣ ಕೊಂಚ ಏರಬಹುದು ಎಂದರು. 2ನೇ ಹಂತದ ಮತದಾನ ಶಾಂತಯುತವಾಗಿತ್ತು, ಎರಡು ಹಂತಗಳು ಸೇರಿ ಸರಾಸರಿ ಶೇ. 74.31 ಮತದಾನವಾಗಿದೆ ಎಂದು ಅಂಕಿಅಂಶ ನೀಡಿದರು.

ನವಂಬರ್ 12ರಂದು ನಕ್ಸಲ್ ಬಾಧಿತ ಪ್ರದೇಶದ 12 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು ಶೇ.74.60 ಪ್ರಮಾಣದ ಮತದಾನವಾಗಿತ್ತು.
ಡಿಶಂಬರ್ 12ರಂದು ಫಲಿತಾಶ ಪ್ರಕಟವಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com