ಬೀಚ್ ನಲ್ಲಿ ಕನಿಷ್ಠ ಬಟ್ಟೆ ಇರಲಿ : ಸಿಎಂಗೆ ಪತ್ರ ಬರೆದ ಮಹಿಳಾ ಆಯೋಗದ ಅಧ್ಯಕ್ಷೆ

ಮೊನ್ನೆಯಷ್ಟೇ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಯವರು ಗೋಕರ್ಣ ಬೀಚ್ ನಲ್ಲಿ ಪುರುಷರ ಗುಂಪೊಂದು ನಗ್ನವಾಗಿರುವುದನ್ನ ಗಮನಿಸಿದ್ದಾರೆ. ಹೀಗೆ ನಗ್ನವಾಗಿ ಬೀಚ್ ನಲ್ಲಿ ಆಟವಾಡುವುದನ್ನ ನಿಲ್ಲಿಸಿ ಕನಿಷ್ಠ ಉಡುಗೆಯನ್ನಾದರೂ ಧರಿಸಬೇಕು ಎನ್ನುವ ನಿಯಮ ತರಬೇಕು ಎಂದು ಸಿಎಂಗೆ ಪತ್ರ ಬರೆದಿದ್ದಾರೆ.

ಕೇವಲ ತುಂಡುಡುಗೆ ಮಾತ್ರವಲ್ಲದೆ ಬೀಚ್ ನಲ್ಲಿ ಪೋಲಿಸ್ ಕಣ್ಗಾವಲು ಅಗತ್ಯವಿದೆ ಎಂದಿದ್ದಾರೆ. ಗೋಕರ್ಣದಲ್ಲಿ 19 ರಿಂದ 20 ವರ್ಷ ವಯಸ್ಸಿನ ಹುಡುಗಿಯರು ಬೀಚ್ ನಲ್ಲಿ ಸಿಗುವ ಮಣಿ-ಮುತ್ತುಗಳಿಂದ ಕಿವಿಯೋಲೆ, ಸರ, ಬ್ರೇಸ್ಲೇಟ್, ಉಂಗುರ ಇತ್ಯಾದಿ ವಸ್ತುಗಳನ್ನು ತಯಾರಿಸಿ ಮಾರುತ್ತಾರೆ. ಇಂಥವರಿಗೆ ರಕ್ಷಣೆಯೇ ಇಲ್ಲ. ಕೆಲವು ದಿನಗಳ ಹಿಂದೆ ಹೀಗೆ ಮಾರಟ ಮಾಡುವ ಹುಡುಗಿಯ ಅತ್ಯಾಚಾರ ನಡೆದಿದೆ. ಹೀಗಾಗಿ ಮಹಿಳೆಯರ ರಕ್ಷಣೆ ಅವಶ್ಯಕತೆ ಇರುವುದರಿಂದ ಪೋಲಿಸರ ಕಣ್ಗಾವಲು ಬೀಚ್ ಗಳಲ್ಲಿ ಅವಶ್ಯಕ ಒಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ 22 ಬೀಚ್ ಗಳಿವೆ ಒಂದೊಂದು ಬೀಚ್ ನ ಅಕ್ಕ-ಪಕ್ಕದಲ್ಲಿ ದೇವಸ್ಥಾನಗಳಿವೆ. ದೇವಸ್ಥಾನಕ್ಕೆಂದು ಎಲ್ಲಾ ರೀತಿಯ ಜನರು ಬರುತ್ತಾರೆ. ಆದರೆ ಕೆಲವರು ಬೀಚ್ ಗೆ ಮೋಜು ಮಸ್ತಿಗಾಗಿ ಬರುತ್ತಾರೆ. ಹೀಗೆ ಬಂದವರು ನಗ್ನವಾಗಿ ಓಡಾಡುವುದರಿಂದ ಇನ್ನುಳಿದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಜೊತೆಗೆ ಕುಡಿದು ತೂರಾಡುವಂತಹ ಪುರುಷರಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹೀಗಾಗಿ ಬೀಷ್ ನಲ್ಲಿ ಡ್ರೆಸ್ ಕೋಡ್ ತರಬೇಕು ಎಂದು ನಾಗಲಕ್ಷ್ಮೀಯವರು ಸಿಎಗೆ ಪತ್ರ ಬರೆದಿದ್ದಾರೆ.

ಜೊತೆಗೆ ನಾನಲಕ್ಷ್ಮೀ ಅವರು ತಾವು ಸಿಎಂಗೆ ಪತ್ರ ಬರೆದಿದ್ದು ಕೇವಲ ಪುರಷರನ್ನ ಗಮನದಲ್ಲಿಟ್ಟುಕೊಂಡಲ್ಲಾ. ಬೀಚ್ ನಲ್ಲಿ ನಗ್ನವಾಗಿ ಓಡಾಡುವಂತ ಎಲ್ಲರಿಗೂ ಡ್ರೆಸ್ ಕೋಡ್ ತರಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಯವರು ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದೇ ಆದರೆ, ಇನ್ನು ಮುಂದೆ ಬೀಚ್’ಗೆ ತೆರಳಿ ನಗ್ನವಾಗಿ ಕಾಣಿಸಿಕೊಳ್ಳುವ ಎಲ್ಲರೂ ಡ್ರೆಸ್ ಕೋಡ್ ಅನುಸರಿಸಬೇಕಾಗುತ್ತದೆ.

 

 

Leave a Reply

Your email address will not be published.

Social Media Auto Publish Powered By : XYZScripts.com